ಬೆಂಗಳೂರು : ಬೆಂಗಳೂರಿನ ಎಂಪೈರ್ ಹೋಟೆಲ್ ನಲ್ಲಿ ಕಬಾಬ್ ಅಸುರಕ್ಷಿತ ಎಂದು ವರದಿ ದೃಢಪಟ್ಟ ಹಿನ್ನೆಲೆಯಲ್ಲಿ ಆಹಾರ ಇಲಾಖೆಯು ಎಂಪೈರ್ ರೆಸ್ಟೋರೆಂಟ್ ಗೆ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನ ಎಂಪೈರ್ ರೆಸ್ಟೋರೆಂಟ್ ನಲ್ಲಿ ಕಬಾಬ್ ಅಸುರಕ್ಷಿತ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ವರದಿಯ್ಲಲಿ ದೃಢಪಟ್ಟಿದ್ದು, ಬೆಂಗಳೂರಿನ ಶಿವಾಜಿನಗರ, ಗಾಂಧಿನಗರ, ಮಹದೇವಪುರ, ಬೊಮ್ಮನಹಳ್ಳಿ, ಬಸವನಗುಡಿ, ಹೆಬ್ಬಾಳ ರೆಸ್ಟೋರೆಂಟ್ ನಲ್ಲಿ ಸ್ಯಾಂಪಲ್ ಕಲೆಕ್ಟ್ ಮಾಡಿ ಪರೀಕ್ಷೆ ಮಾಡಲಾಗಿದೆ.
ಕಬಾಬ್ ಮಾದರಿ ಪರೀಕ್ಷೆಯಲ್ಲಿ ಅಸುರಕ್ಷಿತ ಎಂದು ವರದಿ ಬಂದ ಹಿನ್ನೆಲೆಯಲ್ಲಿ ಎಂಪೈರ್ ರೆಸ್ಟೋರೆಂಟ್ ಗೆ ಆಹಾ ಇಲಾಖೆಯು ನೋಟಿಸ್ ಜಾರಿ ಮಾಡಿದೆ. 30 ದಿನಗಳ ಕಾಲಾವಕಾಶ ನೀಡಿದೆ.