ಪೆರು: ಪೆರುವಿನ ಲಿಮಾದಿಂದ ಅಮೆಜಾನ್ ಪ್ರದೇಶಕ್ಕೆ ಹೋಗುತ್ತಿದ್ದ ಬಸ್ ಆಂಡಿಸ್ ಪರ್ವತ ಶ್ರೇಣಿಯ ಹೆದ್ದಾರಿಯಲ್ಲಿ ಪಲ್ಟಿಯಾಗಿ ಕನಿಷ್ಠ 18 ಜನರು ಸಾವನ್ನಪ್ಪಿದ್ದು, 48 ಜನರು ಗಾಯಗೊಂಡಿದ್ದಾರೆ. ಅಧಿಕಾರಿಗಳು ಶುಕ್ರವಾರ ಈ ಮಾಹಿತಿಯನ್ನು ನೀಡಿದ್ದಾರೆ.
ಎಕ್ಸ್ಪ್ರೆಸೊ ಮೊಲಿನಾ ಲೈಡರ್ ಇಂಟರ್ನ್ಯಾಷನಲ್’ ಕಂಪನಿಯ ‘ಡಬಲ್ ಡೆಕ್ಕರ್’ ಬಸ್ ಜುನಿನ್ ಪ್ರದೇಶದ ಪಾಲ್ಕಾ ಜಿಲ್ಲೆಯಲ್ಲಿ ರಸ್ತೆಯಿಂದ ಜಾರಿ ಇಳಿಜಾರಿಗೆ ಬಿದ್ದಿದೆ ಎಂದು ಜುನಿನ್ ಆರೋಗ್ಯ ನಿರ್ದೇಶಕ ಕ್ಲಿಫರ್ ಕ್ಯುರಿಪಾಕೊ ವರದಿಗಾರರಿಗೆ ತಿಳಿಸಿದ್ದಾರೆ. ಅಪಘಾತದ ಕಾರಣವನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಸ್ಥಳೀಯ ದೂರದರ್ಶನ ಚಾನೆಲ್ಗಳಲ್ಲಿ ಪ್ರಸಾರವಾದ ವೀಡಿಯೊಗಳು ಬಸ್ ಎರಡು ಭಾಗಗಳಾಗಿ ಮುರಿದುಹೋಗಿರುವುದನ್ನು ಮತ್ತು ಅಗ್ನಿಶಾಮಕ ಇಲಾಖೆ ಮತ್ತು ಪೊಲೀಸರು ಗಾಯಾಳುಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತವೆ.