ಬೆಂಗಳೂರು : ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಬಿ-ಖಾತಾ ನಿವೇಶನಗಳಿಗೆ ಎ-ಖಾತಾ ನೀಡುವ ಕುರಿತು ಜು.17ರ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಧಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
2024ರ ಸೆ.30 ರವರೆಗೆ ಬಿಬಿಎಂಪಿನೀಡಿರುವ ಬಿ-ಖಾತಾಗಳಿಗೆ ಎ-ಖಾತಾ ಅಥವಾ ಅಧಿಕೃತ ಖಾತಾ ನೀಡುವ ಕುರಿತು ತಿಳಿಸಲಾಗಿದೆ. ಹಲವು ವರ್ಷಗಳಿಂದ ಕಾನೂನು ಮಾನ್ಯತೆ ಇಲ್ಲದೆ ಸಮಸ್ಯೆ ಅನುಭವಿಸುತ್ತಿದ್ದ ಬಿ-ಖಾತಾದಾರರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಬಿ ಖಾತಾಗಳನ್ನು ಎ-ಖಾತಾ ಎಂದು ಪರಿಗಣಿಸಲು ನಿರ್ಧರಿಸಿದೆ. ಈ ಕುರಿತು ಕಳೆದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದ್ದು, ಬಿ-ಖಾತಾಗಳಿಗೆ ಎ-ಖಾತಾ ಅಥವಾ ಸರಿಯಾದ ಖಾತಾ ನೀಡಲು ನಿರ್ಧರಿಸಲಾಗಿತ್ತು. ಅದರಂತೆ ಇದೀಗ 2024ರ ಸೆ. 30ಕ್ಕಿಂತ ಮುಂಚಿತವಾಗಿಬಿ-ಖಾತಾಅಡಿಯಲ್ಲಿ ನಿರ್ಮಿಸಲಾದ ಕಟ್ಟಡಗಳಿಗೆ ಎ-ಖಾತಾ ಅಥವಾ ಬಿ-ಖಾತಾವನ್ನೇ ಸಕ್ರಮ ಖಾತಾ ಎಂದು ಪರಿಗಣಿಸುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.
ಸರ್ಕಾರದ ಆದೇಶದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ 2009ಕ್ಕಿಂತ ಹಿಂದೆ ನೀಡಿರುವ ಎಲ್ಲ ಖಾತಾಗಳೂ ಎ-ಖಾತಾ ಅಥವಾ ಸಕ್ರಮ ಖಾತಾ ಎಂದು ತೀರ್ಮಾ ನಿಸಲಾಗಿದೆ. ಅದರೊಂದಿಗೆ ಕೃಷಿ ಜಮೀನನ್ನು ಕೃಷಿಯೆ ತರ ಉದ್ದೇಶಗಳಿಗೆ ಬದಲಾವಣೆಗೊಂಡ ಯಾವುದೇ ವಿಸ್ತೀರ್ಣದ ಭೂಮಿಗೆ ಮತ್ತು ಅಭಿವೃದ್ಧಿ ಶುಲ್ಕವನ್ನು ಪಾವತಿಸಿದ ಜಾಗದ ಬಿ-ಖಾತಾ ಆಸ್ತಗಳಿಗೆ ಎ-ಖಾತಾ ನೀಡಲಾಗುತ್ತದೆ.
ಮುಂದುವರೆದು, ದಿನಾಂಕ: 05.07.2021 ರಂದು ಕೆ.ಟಿ.ಸಿ.ಪಿ.. ಕಾಯ್ದೆಗೆ ತಿದ್ದುಪಡಿ ಮೂಲಕ ಸೆಕ್ಷನ್ 17ಕ್ಕೆ ಉಪ ಕಲಂ 2-ಇ ಅನ್ನು ಸೇರ್ಪಡೆ ಮಾಡಿ. ಇದರಲ್ಲಿ ಕೆ.ಟಿ.ಸಿ.ಪಿ. ಕಾಯ್ದೆ, 1961 ರಡಿ ಯೋಜನಾ ಪ್ರಾಧಿಕಾರದಿಂದ ಬಿಡುಗಡೆ ಮಾಡದಿರುವ ಯಾವುದೇ ನಿವೇಶನ ಕಟ್ಟಡಗಳಿಗೆ (building site) ಖಾತಾ ಅಥವಾ ಇ-ಖಾತಾ ನೀಡುವುದನ್ನು ನಿಷೇಧಿಸಲಾಗಿರುತ್ತದೆ.
ಆದಾಗ್ಯೂ, ಈ ತಿದ್ದುಪಡಿಗಳನ್ನು ತರುವ ಮೊದಲೇ ಕೆ.ಟಿ.ಸಿ.ಪಿ. ಕಾಯ್ದೆ, 1961ರ ಪ್ರಕಾರ ಮಂಜೂರಾದ ಬಡಾವಣೆಗಳ ನಿವೇಶನಗಳಿಗೆ, ಎ-ಖಾತಾವನ್ನು ನೀಡುವುದರ ಜೊತೆಗೆ, ಬಿ.ಬಿ.ಎಂ.ಪಿ.ಯು “ಏಕ ನಿವೇಶನ (Single Plot)”ಗಳಿಗೂ ಸಹ ಎ-ಖಾತಾವನ್ನು ನೀಡಲಾಗಿರುತ್ತದೆ.
ಈ ಕೆಳಕಂಡಂತಹ ರೀತಿಯಲ್ಲಿ ಆಸ್ತಿಗಳಿಗೆ ಎ-ಖಾತಾ & ಬಿ ಖಾತಾಗಳನ್ನು ನೀಡಲಾಗುತ್ತಿತ್ತು:
i) ಕರ್ನಾಟಕ ಭೂಕಂದಾಯ ಕಾಯ್ದೆ, 1964 (ಕೆಎಲ್ಆರ್ ಕಾಯ್ದೆ 1964) ರ ಸೆಕ್ಷನ್ 95 ರಡಿ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಬದಲಾವಣೆಗೊಂಡ ಯಾವುದೇ ವಿಸ್ತೀರ್ಣದ ಭೂಮಿಗೆ ಮತ್ತು ಅಭಿವೃದ್ಧಿ ಶುಲ್ಕವನ್ನು ಪಾವತಿಸಿದ ಜಾಗಕ್ಕೆ ಎ-ಖಾತಾ ನೀಡಲಾಗುತ್ತಿತ್ತು.
ii) 6000 ಚದರ ಅಡಿವರೆಗಿನ ಕಂದಾಯ ನಿವೇಶನಗಳಿಗೆ, ಅದರಲ್ಲಿ ಕಟ್ಟಡ ನಿರ್ಮಿಸಿದ್ದಲ್ಲಿ ಬಿ-ಖಾತಾವನ್ನು ನೀಡಲಾಗುತ್ತಿತ್ತು.
ii) ಅನಧಿಕೃತ ಕಟ್ಟಡ ನಿರ್ಮಿಸಲಾದ ಯಾವುದೇ ನಿವೇಶನಗಳು, ಅನಧಿಕೃತ ಬಡಾವಣೆಗಳ ನಿವೇಶನಗಳು, ಕರ್ನಾಟಕ ಭೂಕಂದಾಯ ಕಾಯ್ದೆ, ಕಲಂ 95ರಡಿ ಪರಿವರ್ತಿತಗೊಂಡ ಜಮೀನುಗಳಲ್ಲಿ ನಿರ್ಮಿಸಲಾದ ವಿಭಜಿತ ನಿವೇಶನಗಳಿಗೆ ಬಿ-ಖಾತಾವನ್ನು ನೀಡಲಾಗುತ್ತಿತ್ತು.
iv) ಕೃಷಿಯೇತರ ಉದ್ದೇಶಕ್ಕೆ ಸರ್ಕಾರವು ಮಂಜೂರು ಮಾಡಿದ ಜಾಗಗಳಿಗೆ ಎ-ಖಾತಾವನ್ನು ನೀಡಲಾಗುತ್ತಿತ್ತು.
v) ಕೆ.ಐ.ಎ.ಡಿ.ಬಿ., ಕೆ.ಹೆಚ್.ಬಿ. ಕೆ.ಎಸ್.ಎಸ್.ಐ.ಡಿ.ಸಿ ಅಭಿವೃದ್ಧಿಪಡಿಸಿ ಒದಗಿಸಿ, ໖.໖.໑໐.. ಹಸ್ತಾಂತರಿಸಲಾದ ಮೂಲಸೌಕರ್ಯ ಬಡಾವಣೆಗಳ ನಿವೇಶನಗಳಿಗೆ ಎ-ಖಾತಾವನ್ನು ನೀಡಲಾಗುತ್ತಿತ್ತು.
vi) ಕೆ.ಐ.ಎ.ಡಿ.ಬಿ. ಕೈಗಾರಿಕಾ ಬಡಾವಣೆಗಳಲ್ಲಿ ಏಕಘಟಕ ಪ್ಯಾಟ್ಗಳಿಗೆ ಎ-ಖಾತಾವನ್ನು ನೀಡಲಾಗುತ್ತಿತ್ತು.
ಬಿ.ಬಿ.ಎಂ.ಪಿ.ಯು ದಿನಾಂಕ: 03.10.2024ರ ಸುತ್ತೋಲೆಯಲ್ಲಿ ಕೆ.ಟಿ.ಸಿ.ಪಿ. ಕಾಯ್ದೆ, 1961ರ ಸೆಕ್ಷನ್ 17ರಡಿ ಅನುಮೋದನೆ ಪಡೆಯದೇ ಇರುವ ಸ್ವತ್ತುಗಳಿಗೆ ಎ-ಖಾತಾ ನೀಡುವುದನ್ನು ನಿಲ್ಲಿಸಿರುತ್ತದೆ. ಈ ಸುತ್ತೋಲೆಯು, ಮೇಲ್ಕಂಡ ಎಲ್ಲಾ ಸುತ್ತೋಲೆಗಳನ್ನು ರದ್ದುಪಡಿಸಿರುತ್ತದೆ. ಕೆ.ಟಿ.ಸಿ.ಪಿ. ಕಾಯ್ದೆ, 1961 ಅಡಿ 2020 ರ ತಿದ್ದುಪಡಿಗೆ ಮುನ್ನ, “ಏಕ ನಿವೇಶನ /ಪ್ರಾಟ್’ (Single Plot) ಗಳಿಗೆ ಅನುಮೋದನೆ ನೀಡುವ ಕುರಿತು ಈ ಕಾಯ್ದೆಯು ಕೇವಲ ಮೌನವಾಗಿದ್ದು ನಿಷೇಧಿಸಿರುವುದಿಲ್ಲವಾದ್ದರಿಂದ 2020 ರಲ್ಲಿ ಕೆ.ಟಿ.ಸಿ.ಪಿ. ಕಾಯ್ದೆ, 1961 ಅನ್ನು ತಿದ್ದುಪಡಿ ಮಾಡುವ ಮುನ್ನ ನೀಡಲಾದ ಎ-ಖಾತಾಗಳನ್ನು ಈ ಶೂನ್ಯವನ್ನು ಸರಿಪಡಿಸಲು ತೆಗೆದುಕೊಂಡ ಕ್ರಮವೆಂದು ಅರ್ಥೈಸಿಕೊಳ್ಳಬಹುದು. ಆದಾಗ್ಯೂ, 2020 ರಲ್ಲಿ ತಿದ್ದುಪಡಿಯಾದ ನಂತರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ‘ಏಕ ನಿವೇಶನ” (Single Plot) ಗಳಿಗೆ ಅನುಮೋದನೆ ನೀಡುವ ಬಗ್ಗೆ ಯಾವುದೇ ವ್ಯವಸ್ಥೆಯನ್ನು ಕಾರ್ಯಗತಗೊಳಿಸದೇ ಇದ್ದುದರಿಂದ, ಬಿ.ಬಿ.ಎಂ.ಪಿ.ಯು ಮೇಲ್ಕಂಡ ಸುತ್ತೋಲೆಗಳನ್ನು ಆಧರಿಸಿ ಎ-ಖಾತಾ ನೀಡುವುದನ್ನು ಮುಂದುವರೆಸಿರುತ್ತದೆ.
ಅಂತಿಮವಾಗಿ, ಸದರಿ ವ್ಯವಸ್ಥೆಯನ್ನು ದಿನಾಂಕ: 03.10.2024ರಂದು ನಿಲ್ಲಿಸಲಾಗಿರುತ್ತದೆ ಮತ್ತು ಈ ಸಮಸ್ಯೆಯನ್ನು ಬಗೆಹರಿಸಲು, ಒಂದು ಸಮಗ್ರ ನಿಲುವನ್ನು ತೆಗೆದುಕೊಳ್ಳಲು ಬಿ.ಬಿ.ಎಂ.ಪಿ.ಯು ದಿನಾಂಕ: 24.02.2025 ರಂದು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಪ್ರಸ್ತಾಪಿಸಿರುತ್ತದೆ. ಈಗ ಈ ಪ್ರಸ್ತಾಪನೆಗಳ ಆಧಾರದ ಮೇಲೆ ಸರ್ಕಾರವು ಅಧಿಸೂಚನೆ ಸಂಖ್ಯೆ: ನಅಇ 790 ಎಂಎನ್ಯು 2024, ದಿನಾಂಕ: 07.04.2025 ರಲ್ಲಿ, 2.5 ಎಕರೆ ವಿಸ್ತೀರ್ಣದ “ಏಕ ನಿವೇಶನ” (Single Plot) ಗಳಿಗೆ ಅನುಮತಿ ನೀಡುವ ಅಧಿಕಾರವನ್ನು ಬಿ.ಬಿ.ಎಂ.ಪಿ.ಗೆ ಪ್ರತ್ಯಾಯೋಜಿಸಿದೆ. ಮುಂದುವರೆದು, ಬಿ.ಬಿ.ಎಂ.ಪಿ. ಕಾಯ್ದೆ, 2020ರ ಸೆಕ್ಷನ್ 225 ಮತ್ತು 226 ಅನ್ನು ದಿನಾಂಕ: 15.04.2025 ರಲ್ಲಿ ತಿದ್ದುಪಡಿ ಮಾಡಿ, ಖಾಸಗಿ ರಸ್ತೆಗಳು /ಬೀದಿಗಳನ್ನು, “ಸಾರ್ವಜನಿಕ ರಸ್ತೆ / ಬೀದಿ” ಗಳೆಂದು ಘೋಷಿಸಲು ಅವಕಾಶ ಕಲ್ಪಿಸಲಾಗಿದೆ. ಇದು “ಏಕ ನಿವೇಶನ” (Single Plot) ಗಳನ್ನು ಮತ್ತು ಕೆ.ಟಿ.ಸಿ.ಪಿ. ಕಾಯ್ದೆ, 1961ರ ಇತರೆ ಅವಕಾಶಗಳನ್ನು ವ್ಯವಸ್ಥಿತ ಮತ್ತು ಸಮರ್ಪಕವಾದ ರೀತಿಯಲ್ಲಿ ಜಾರಿಗೊಳಿಸಲು ಮತ್ತು ಅವ್ಯವಸ್ಥೆಯನ್ನು ನಿಯಂತ್ರಿಸಲು ಸಹಕಾರಿಯಾಗಿರುತ್ತದೆ.
ಈ ಮೇಲ್ಕಂಡ ಕಾರಣಗಳ ಹಿನ್ನೆಲೆಯಲ್ಲಿ, ಬೆಂಗಳೂರು ನಗರದಲ್ಲಿ ಅಭಿವೃದ್ಧಿ ಮತ್ತು ನಿರ್ಮಾಣಗಳನ್ನು ನಿಯಂತ್ರಿಸುವ ಮತ್ತು ಶಿಸ್ತನ್ನು ತರುವ ಉದ್ದೇಶದಿಂದ ಸರ್ಕಾರವು ಈಗಾಗಲೇ ಕೆಳಕಂಡ ಕ್ರಮಗಳನ್ನು ಕೈಗೊಂಡಿರುತ್ತದೆ:
i) ಬಿ.ಬಿ.ಎಂ.ಪಿ. ಕಾಯ್ದೆ, 2020 ಅನ್ನು ತಿದ್ದುಪಡಿ ಮಾಡಿದ್ದು, ಸೆಕ್ಷನ್ 248ಕ್ಕೆ ಉಪ ಕಲಂ(5) ಅನ್ನು ಸೇರ್ಪಡೆ ಮಾಡಲಾಗಿದೆ. ಇದರಿಂದ, ಕಾನೂನುಬಾಹಿರ ಕಟ್ಟಡಗಳನ್ನು ನಿರ್ಮಿಸುವುದನ್ನು ನಿರ್ಬಂಧಿಸಿ, ಕಟ್ಟಡಗಳನ್ನು ನೆಲಸಮಗೊಳಿಸುವುದನ್ನು ಬಾಕಿ ಇರಿಸಿ. ಕಾನೂನುಬಾಹಿರ ಕಟ್ಟಡಗಳ ಭಾಗಗಳನ್ನು ತಕ್ಷಣವೇ ಮೊಹರುಗೊಳಿಸಲು(Sealing) ಅವಕಾಶವನ್ನು ಕಲ್ಪಿಸಲಾಗಿದೆ.
ii) ಬಿ.ಬಿ.ಎಂ.ಪಿ. ಕಾಯ್ದೆ, 2020ಕ್ಕೆ ಸೆಕ್ಷನ್ 225 ಮತ್ತು 226 ಅನ್ನು ತಿದ್ದುಪಡಿ ಮಾಡಿ, ಅನಧಿಕೃತ ಬಡಾವಣೆಗಳ ಖಾಸಗಿ ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳೆಂದು ಘೋಷಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಮತ್ತು ಅಂತಹ ಅನಧಿಕೃತವಾಗಿ ನಿರ್ಮಿಸಲಾದ ಬಡಾವಣೆಯಲ್ಲಿ ರಚಿಸಿದ ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳೆಂದು ಘೋಷಿಸಿದಾಗ, ಅಂತಹ ರಸ್ತೆಗಳಿಗೆ ಭೂಮಾಲೀಕರು ಯಾವುದೇ ಪರಿಹಾರವನ್ನು ಪಡೆಯಲು ಅರ್ಹರಿರುವುದಿಲ್ಲ. ಈ ಅವಕಾಶವು ಜಿ.ಬಿ.ಜಿ. ಕಾಯ್ದೆ, 2024ರ ಸೆಕ್ಷನ್ 212 ರಲ್ಲಿಯೂ ಇದೆ.
iii) ಜಿ.ಬಿ.ಜಿ. ಕಾಯ್ದೆ, 2024 ಈ ಎಲ್ಲಾ ಅಂಶಗಳನ್ನು ಸೂಕ್ತವಾಗಿ ಪರಿಹರಿಸಿದೆ ಮತ್ತು ನಿಯಂತ್ರಿಸುತ್ತದೆ.
iv) ಕಂದಾಯ ಇಲಾಖೆಯು ದಿನಾಂಕ: 01.11.2024 ರಿಂದ ಜಾರಿಗೆ ಬರುವಂತೆ, ಬೆಂಗಳೂರು ನಗರದಲ್ಲಿ ಯಾವುದೇ ಆಸ್ತಿಗಳಿಗೆ ಅಥವಾ ಭೂಮಿಗೆ ಬಿ.ಬಿ.ಎಂ.ಪಿ. ಅಥವಾ ಬಿ.ಡಿ.ಎ. ಯಿಂದ ನೀಡಲಾದ ಸೂಕ್ತವಾದ ಇ-ಖಾತಾ (ಅಥವಾ ಕೃಷಿ ಜಮೀನಿಗೆ ಕಂದಾಯ ಇಲಾಖೆಯಿಂದ ಆರ್.ಟಿ.ಸಿ) ಇಲ್ಲದಿದ್ದಲ್ಲಿ ನೋಂದಣಿಯನ್ನು ಸಂಪೂರ್ಣವಾಗಿ ನಿರ್ಬಂಧಿಸಿರುತ್ತದೆ.