ಬೆಂಗಳೂರು : ಬೆಂಗಳೂರು ನಗರದಲ್ಲಿ ರೌಡಿಗಳ ಚಟುವಟಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ನಿಗಾವಹಿಸಿದ್ದಾರೆ.
ರೌಡಿಗಳ ಚಟುವಟಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರಿಂದ ಹಲವು ಠಾಣೆಗಳಿಗೆ ಅಡ್ವೈಸೆರಿ ರಿಪೋರ್ಟ್ ನೀಡಿದ್ದಾರೆ. ಠಾಣಾ ವ್ಯಾಪ್ತಿಯ ರೌಡಿಶೀಟರ್ ಗಳ ಮೇಲೆ ನಿಗಾ ಇಡುವಂತೆ ಸೂಚನೆ ನೀಡಿದ್ದಾರೆ.
ರಾತ್ರೋರಾತ್ರಿ ರೌಡಿಗಳ ಮನೆಗೆ ಪೊಲೀಸರು ಸರ್ ಪ್ರೈಸ್ ವಿಸಿಟ್ ನೀಡಿದ್ದಾರೆ. ವೈಟ್ ಫೀಲ್ಡ್ ವಿಭಾಗದಲ್ಲೂ ರೌಡಿಗಳ ಮನೆಗೆ ಸರ್ ಪ್ರೈಸ್ ವಿಸಿಟ್ ನೀಡಿದ್ದಾರೆ. ರಾತ್ರಿ ವಿಸಿಟ್ ಮಾಡಿ ರೌಡಿಗಳ ಮನೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ಇಲ್ಲದ ರೌಡಿಶೀಟರ್ ಗಳ ಮಾಹಿತಿಯನ್ನು ಕಲೆ ಹಾಕಿದ್ದಾರೆ.