ಬೆಂಗಳೂರು : ವಾಹನ ಸವಾರರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಇನ್ಮುಂದೆ ಫಾಸ್ಟ್ಟ್ಯಾಗ್ ಖಾತೆಯಿಂದ ತಪ್ಪಾಗಿ ಹಣ ಕಡಿತಗೊಂಡರೆ ವಾಪಸ್ ನೀಡಲಾಗುತ್ತದೆ.
ಹೌದು, ಟೋಲ್ ಪ್ಲಾಜಾಗಳಲ್ಲಿ ವಾಹನ ಸಂಚರಿಸದಿದ್ದರೂ ಟೋಲ್ ಶುಲ್ಕ ಕಡಿತವಾದ ಪ್ರಕರಣಗಳು ವರದಿಯಾಗುತ್ತಿದ್ದು, ಮಾಹಿತಿ ಕೊರತೆಯಿಂದ ವಾಹನಗಳ ಮಾಲೀಕರು ಅಧಿಕೃತ ದೂರು ದಾಖಲಿಸುವುದಿಲ್ಲ. ತಪ್ಪಾಗಿ ಟೋಲ್ ಹಣ ಕಡಿತವಾದ ಸಂದರ್ಭದಲ್ಲಿ ಫಾಸ್ಟ್ ಟ್ಯಾಗ್ ಬಳಕೆದಾರರು ಫಾಸ್ಟ್ಟ್ಯಾಗ್ ನೀಡುವ ಬ್ಯಾಂಕ್, ರಾಷ್ಟ್ರೀಯ ಹೆದ್ದಾರಿ ಸಹಾಯವಾಣಿ 1033, falsededuction@ihmcl.com ಇ-ಮೇಲ್ ಗೆ ದೂರು ನೀಡಬಹುದು. ದಾಖಲಾದ ಪ್ರಕರಣಗಳನ್ನು ಬ್ಯಾಂಕುಗಳು, ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿ ಲಿಮಿಟೆಡ್ ಕೂಲಂಕಷವಾಗಿ ಪರಿಶೀಲನೆಸಿ ಶುಲ್ಕವನ್ನು ಚಾರ್ಜ್ ಬ್ಯಾಕ್ ಮಾಡಲು ಕ್ರಮ ಕೈಗೊಳ್ಳಲಿವೆ.
ವಾಹನ ಟೋಲ್ ಪ್ಲಾಜಾ ದಾಟದಿದ್ದರೂ ಕೂಡ ಖಾತೆಯಿಂದ ಹಣ ಕಡಿತ, ವಾಹನ ಪಾರ್ಕಿಂಗ್ ನಲ್ಲೇ ನಿಂತಿದ್ದರೂ ಹಣ ಕಡಿತವಾದ ಸಂದೇಶ ಮೊಬೈಲ್ ಗೆ ರವಾನೆ, ಒಂದೇ ಸಮಯದಲ್ಲಿ 3-4 ಬಾರಿ ಹಣ ಕಡಿತ ಹೀಗೆ ಅನೇಕ ತೊಂದರೆಯ ಬಗ್ಗೆ ಬಳಕೆದಾರರು ದೂರಿದ್ದಾರೆ. ದೂರು ನೀಡಿದವರಿಗೆ ಪರಿಶೀಲನೆ ನಡೆಸಿ ಶುಲ್ಕವನ್ನು ಚಾರ್ಜ್ ಬ್ಯಾಕ್ ಮಾಡಲಾಗುತ್ತದೆ.