ಬೆಂಗಳೂರು : ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಸಚಿವ ಕೆ.ಹೆಚ್. ಮುನಿಯಪ್ಪ ಸಿಹಿಸುದ್ದಿಯೊಂದನ್ನು ನೀಡಿದ್ದು, ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ವ್ಯಾಪ್ತಿಯ ಆಹಾರ ಭದ್ರತಾ ಕಾಯ್ದೆ (ಎನ್ ಎಫ್ಎಸ್ಎ) ಫಲಾನುಭವಿಗಳ ಗರಿಷ್ಠ ಮಿತಿ ಹೆಚ್ಚಿಸುವಂತೆ ಕೋರಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಎನ್ಎಫ್ ಎಸ್ಎ ಅಡಿ ರಾಜ್ಯದಲ್ಲಿ 4,01,93,000 ಫಲಾನುಭವಿಗಳಿದ್ದಾರೆ. ಇದು 2011ರ ಜನಗಣತಿ ಆಧಾರದ ಮೇಲೆ ನಿಗದಿಯಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಶೇ.75, ನಗರ ಪ್ರದೇಶಗಳಲ್ಲಿ ಶೇ.50 ಜನಸಂಖ್ಯೆ ಒಳಗೊಂಡಿತ್ತು. ಆದರೆ, ಕಳೆದೊಂದು ದಶಕದಲ್ಲಿ ರಾಜ್ಯದ ಜನಸಂಖ್ಯೆ ಹಾಗೂ ಕುಟುಂಬಗಳ ವಿಭಜನೆಯಾದ ಹಿನ್ನೆಲೆಯಲ್ಲಿ ಗರಿಷ್ಠ ಮಿತಿ ನವೀಕರಿಸುವ ಅವಶ್ಯಕ ಇದೆ. ಹಾಗಾಗಿ, ರಾಜ್ಯದಲ್ಲಿರುವ ಎನ್ ಎಫ್ಎಸ್ಎ ಫಲಾನುಭವಿಗಳ ಮಿತಿಯನ್ನು 4.01 ಕೋಟಿಯಿಂದ 4.60 ಕೋಟಿಗೆ ಹೆಚ್ಚಿಸುವಂತೆ ಕೇಂದ್ರ ಆಹಾರ ಸಚಿವ ಪಲ್ಲಾದ ಜೋಶಿ ಅವರಿಗೆ ರಾಜ್ಯದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮನವಿ ಮಾಡಿದ್ದಾರೆ.
2023ರಲ್ಲಿ 2.95 ಲಕ್ಷ ಅರ್ಜಿಗಳ ಪೈಕಿ 1.65 ಲಕ್ಷ ಕಾರ್ಡ್ ಮಂಜೂರು ಮಾಡಲಾಗಿದೆ. 1.90 ಲಕ್ಷ ಅರ್ಜಿಗಳ ಪರಿಶೀಲಿಸಲಾಗುತ್ತಿದೆ. ಇನ್ನೂ 2.6 ಲಕ್ಷ ಅರ್ಜಿ ಪರಿಶೀಲನೆ ಹಂತದಲ್ಲಿದೆ.