ಬೆಂಗಳೂರು : ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಬಿ-ಖಾತಾ ನಿವೇಶನಗಳಿಗೆ ಎ-ಖಾತಾ ನೀಡುವ ಕುರಿತು ಜು.17ರ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಧಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
2024ರ ಸೆ.30 ರವರೆಗೆ ಬಿಬಿಎಂಪಿನೀಡಿರುವ ಬಿ-ಖಾತಾಗಳಿಗೆ ಎ-ಖಾತಾ ಅಥವಾ ಅಧಿಕೃತ ಖಾತಾ ನೀಡುವ ಕುರಿತು ತಿಳಿಸಲಾಗಿದೆ. ಹಲವು ವರ್ಷಗಳಿಂದ ಕಾನೂನು ಮಾನ್ಯತೆ ಇಲ್ಲದೆ ಸಮಸ್ಯೆ ಅನುಭವಿಸುತ್ತಿದ್ದ ಬಿ-ಖಾತಾದಾರರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಬಿ ಖಾತಾಗಳನ್ನು ಎ-ಖಾತಾ ಎಂದು ಪರಿಗಣಿಸಲು ನಿರ್ಧರಿಸಿದೆ. ಈ ಕುರಿತು ಕಳೆದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದ್ದು, ಬಿ-ಖಾತಾಗಳಿಗೆ ಎ-ಖಾತಾ ಅಥವಾ ಸರಿಯಾದ ಖಾತಾ ನೀಡಲು ನಿರ್ಧರಿಸಲಾಗಿತ್ತು. ಅದರಂತೆ ಇದೀಗ 2024ರ ಸೆ. 30ಕ್ಕಿಂತ ಮುಂಚಿತವಾಗಿಬಿ-ಖಾತಾಅಡಿಯಲ್ಲಿ ನಿರ್ಮಿಸಲಾದ ಕಟ್ಟಡಗಳಿಗೆ ಎ-ಖಾತಾ ಅಥವಾ ಬಿ-ಖಾತಾವನ್ನೇ ಸಕ್ರಮ ಖಾತಾ ಎಂದು ಪರಿಗಣಿಸುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.
ಸರ್ಕಾರದ ಆದೇಶದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ 2009ಕ್ಕಿಂತ ಹಿಂದೆ ನೀಡಿರುವ ಎಲ್ಲ ಖಾತಾಗಳೂ ಎ-ಖಾತಾ ಅಥವಾ ಸಕ್ರಮ ಖಾತಾ ಎಂದು ತೀರ್ಮಾ ನಿಸಲಾಗಿದೆ. ಅದರೊಂದಿಗೆ ಕೃಷಿ ಜಮೀನನ್ನು ಕೃಷಿಯೆ ತರ ಉದ್ದೇಶಗಳಿಗೆ ಬದಲಾವಣೆಗೊಂಡ ಯಾವುದೇ ವಿಸ್ತೀರ್ಣದ ಭೂಮಿಗೆ ಮತ್ತು ಅಭಿವೃದ್ಧಿ ಶುಲ್ಕವನ್ನು ಪಾವತಿಸಿದ ಜಾಗದ ಬಿ-ಖಾತಾ ಆಸ್ತಗಳಿಗೆ ಎ-ಖಾತಾ ನೀಡಲಾಗುತ್ತದೆ.