ಬೆಂಗಳೂರು: ರಾಜ್ಯದ ರೈತರಿಗೆ ಮಹತ್ವದ ಮಾಹಿತಿ ಎನ್ನುವಂತೆ ಈಗ ಜಮೀನಿನ ದಾಖಲೆಗು ಕುಳಿತಲ್ಲೇ ಆನ್ ಲೈನ್ ನಲ್ಲೇ ಲಭ್ಯವಾಗುವಂತೆ ಸರ್ಕಾರ ವ್ಯವಸ್ಥೆ ಮಾಡಿದೆ.
ಈ ಬಗ್ಗೆ ಕಂದಾಯ ಇಲಾಖೆಯಿಂದ ಮಾಹಿತಿ ನೀಡಿದ್ದು, ಈಗ ನಿಮ್ಮ ಮನೆಯಿಂದಲೇ ದಾಖಲೆಗಳನ್ನು ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ. ಎ ಮತ್ತು ಬಿ ವರ್ಗದ ಎಲ್ಲಾ ಪ್ರಮುಖ ಪ್ರಮಾಣೀಕೃತ ದಾಖಲೆಗಳು ಈಗ ನಮ್ಮ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಲಭ್ಯವಿದೆ ಎಂದಿದೆ.
ನಿಮ್ಮ ಜಮೀನಿನ ದಾಖಲೆ ಪಡೆಯಲು ಜಸ್ಟ್ ಹೀಗೆ ಮಾಡಿ
ರಾಜ್ಯದ ರೈತರು ತಮ್ಮ ಎ, ಬಿ ವರ್ಗದ ಜಮೀನಿನ ದಾಖಲೆಯನ್ನು ಆನ್ ಲೈನ್ ಮೂಲಕ ಡೌನ್ ಲೋಡ್ ಮಾಡಲು https://recordroom.karnataka.gov.in/service4 ಲಿಂಕ್ ಕ್ಲಿಕ್ ಮಾಡಿ. ಇಲ್ಲಿ ಕೇಳುವಂತೆ ಮಾಹಿತಿ ದಾಖಲಿಸಿದರೇ, ನಿಮ್ಮ ಭೂಮಿಯ ದಾಖಲೆಗಳು ಕುಳಿತಲ್ಲೇ ಲಭ್ಯವಾಗಲಿದೆ.
ಇನ್ನೂ ಇಂದಿನಿಂದ, ನೀವು ನಮ್ಮ ಯಾವುದೇ ನಾಡಕಚೇರಿ AJSK ಕೇಂದ್ರಗಳಲ್ಲಿ ಪ್ರಮಾಣೀಕೃತ ಪ್ರತಿಗಳಿಗಾಗಿ ಅರ್ಜಿ ಸಲ್ಲಿಸಬಹುದು.
ನಿಮ್ಮ ಬೆರಳ ತುದಿಯಲ್ಲಿ ಅಗತ್ಯ ಸರ್ಕಾರಿ ಸೇವೆಗಳನ್ನು ಪ್ರವೇಶಿಸಿ – ಮಧ್ಯವರ್ತಿಗಳಿಗೆ ಅವಕಾಶವಿಲ್ಲದೆ ಆಡಳಿತದ ಸುಲಭತೆಯನ್ನು ಖಚಿತಪಡಿಸುತ್ತದೆ. ಭು ಸುರಕ್ಷಾ ಯೋಜನೆಯ ಅಡಿಯಲ್ಲಿ ತಾಲ್ಲೂಕು (ತಹಶೀಲ್ದಾರ್) ಕಚೇರಿಗಳಲ್ಲಿ ಎಲ್ಲಾ ನಿರ್ಣಾಯಕ ದಾಖಲೆಗಳ ಡಿಜಿಟಲೀಕರಣ ಮಾಡಿರುವುದಾಗಿ ತಿಳಿಸಿದೆ.