ನವದೆಹಲಿ : ಇಂದು ಬೆಳಗಿನ ಜಾವ ದೆಹಲಿ, ಹರಿಯಾಣದಲ್ಲಿ ಭೂಕಂಪವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.2 ತೀವ್ರತೆ ದಾಖಲಾಗಿದೆ ಎಂದು ವರದಿಯಾಗಿದೆ.
ಹರಿಯಾಣದ ಫರಿದಾಬಾದ್ನಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.
X ನಲ್ಲಿನ ಪೋಸ್ಟ್ನಲ್ಲಿ, NCS ಹೀಗೆ ಬರೆದಿದೆ, ”EQ of M: 3.2, On: 22/07/2025 06:00:28 IST, Lat: 28.29 N, Long: 77.21 E, ಆಳ: 5 Km, ಸ್ಥಳ: Faridabad, Haryana.”
ಮಂಗಳವಾರ (ಜುಲೈ 22, 2025) ಬೆಳಿಗ್ಗೆ ದೆಹಲಿ-NCR ನಲ್ಲಿ ಭೂಕಂಪನ ಸಂಭವಿಸಿದೆ. ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ವರದಿಗಳಿಲ್ಲ.
ಬೆಳಿಗ್ಗೆ 6 ಗಂಟೆಗೆ 3.2 ತೀವ್ರತೆಯ ಭೂಕಂಪ ದಾಖಲಾಗಿದ್ದು, ಫರಿದಾಬಾದ್ ಅದರ ಕೇಂದ್ರಬಿಂದುವಾಗಿದೆ ಎಂದು NCS ತಿಳಿಸಿದೆ. ಭೂಕಂಪದ ಆಳವು ಮೇಲ್ಮೈಯಿಂದ 5 ಕಿ.ಮೀ ಕೆಳಗೆ, ಅಕ್ಷಾಂಶ 28.29 ಡಿಗ್ರಿ ಉತ್ತರ ಮತ್ತು ರೇಖಾಂಶ 72.21 ಡಿಗ್ರಿ ಪೂರ್ವದಲ್ಲಿದೆ ಎಂದು ಅದು ಹೇಳಿದೆ.
EQ of M: 3.2, On: 22/07/2025 06:00:28 IST, Lat: 28.29 N, Long: 77.21 E, Depth: 5 Km, Location: Faridabad, Haryana.
For more information Download the BhooKamp App https://t.co/5gCOtjdtw0 @DrJitendraSingh @OfficeOfDrJS @Ravi_MoES @Dr_Mishra1966 @ndmaindia pic.twitter.com/cNmktjSfUH— National Center for Seismology (@NCS_Earthquake) July 22, 2025