ಕೊಡಗು : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಕೊಡಗಿನಲ್ಲಿ ಅತ್ತೆ, ಸೊಸೆಗೆ ಚಾಕು ಇರಿದು ಸರಗಳ್ಳತನ ಮಾಡಿರುವ ಘಟನೆ ನಡೆದಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೊಂಡಂಗೇರಿ ಗ್ರಾಮದಲ್ಲಿ ಅತ್ತೆ,ಸೊಸೆಗೆ ಚಾಕು ಇರಿದು ಸರಗಳ್ಳತನ ಮಾಡಲಾಗಿದೆ. ಸರಗಳ್ಳನನ್ನು ಬೆನ್ನಟ್ಟಿ ಹಿಡಿದು ಗ್ರಾಮಸ್ಥರು ಥಳಿಸಿದ್ದಾರೆ.
ಮನೆ ಬಳಿ ಬಂದು ಆರೋಪಿ ಮುನಾವರ್ ಎಂಬಾತ ನೀರು ಕೇಳಿದ್ದಾನೆ. ನೀರು ತರಲು ಹೋದ ವೇಳೆ ಮಹಿಳೆ ಮೇಲೆ ಚಾಕುವಿನಿಂದ ಇರಿದು ಸರಗಳ್ಳತನ ಮಾಡಿ ಪರಾರಿಯಾಗಿದ್ದಾನೆ. ಈ ವೇಳೆ ಗ್ರಾಮಸ್ಥರು ಬೆನ್ನಟ್ಟಿ ಆರೋಪಿಯನ್ನು ಹಿಡಿದು ಥಳಿಸಿದ್ದಾರೆ.