ಹುಬ್ಬಳ್ಳಿ:. ಕೂಡಲ ಸಂಗಮ ಪಂಚಮ ಸಾಲಿ ಮಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರಿಗೆ ವಿಷಪ್ರಾಶನ ಮಾಡಿಸಲಾಗಿದೆ ಎಂಬ ಸಂಶಯ ಬರುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ನಡೆಯುತ್ತಿದ್ದ ಹೋರಾಟ ಹತ್ತಿಕ್ಕಲು ಸರ್ಕಾರ ಪ್ರಯತ್ನ ನಡೆಸುತ್ತಿದೆ, ಇದು ಹೋರಾಟಹತ್ತಿಕ್ಕುವ ಹುನ್ನಾರ. ಇತ್ತೀಚೆಗೆ ಮಠಕ್ಕೆ ಬೀಗ ಹಾಕಲಾಗಿತ್ತು. ಭಕ್ತರು ತೆಗೆದು ಸ್ವಾಮೀಜಿ ಅವರನ್ನು ಒಳಗೆ ಕಳುಹಿಸಿದ್ದರು.ಬಳಿಕ ಇಬ್ಬರು ಮುಸ್ಲಿಂ ಯುವಕರು ಮಠಕ್ಕೆ ಬಂದಿದ್ದರಂತೆ. ಅಡುಗೆ ಮನೆಗೆ ಹೋಗಿದ್ದರು. ಅದಾದ ಬಳಿಕ ಊಟ ಮಾಡಿದ ಮೇಲೆ ಶ್ರೀಗಳ ಆರೋಗ್ಯ ಹದಗೆಟ್ಟಿದೆ ಎಂದು ಅರವಿಂದ ಬೆಲ್ಲದ ಆರೋಪಿಸಿದ್ದಾರೆ.