ಬೆಂಗಳೂರು: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಪ್ರಯತ್ನದ ಫಲ ಎನ್ನುವಂತೆ ಸಾಗರ ಪಟ್ಟಣದಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡಿದೆ.
ಈ ಸಂಬಂಧ ರಾಜ್ಯ ಸರ್ಕಾರದಿಂದ ನಡವಳಿಯನ್ನು ಹೊರಡಿಸಲಾಗಿದ್ದು, 2024-25ನೇ ಸಾಲಿನಲ್ಲಿ ನಬಾರ್ಡ್ ಆರ್ ಐ ಡಿ ಎಫ್ ಟ್ರಾಂಚ್-30ರಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 15 ಮೆಟ್ರಿಕ್ ನಂತ್ರದ ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯಲ್ಲಿ, ದಕ್ಷಿಣ ಕನ್ನಡ ಮಂಗಳೂರಲ್ಲಿ, ಉತ್ತರ ಕನ್ನಡ ಸೇರಿದಂತೆ 15 ಜಿಲ್ಲೆಯಲ್ಲಿ 15 ಮೆಟ್ರಿಕ್ ನಂತ್ರದ ಬಾಲಕಿಯರ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುಮೋದಿಸಿದೆ.
ಇನ್ನೂ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಮೆಟ್ರಿಕ್ ನಂತ್ರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಲಾಗಿದೆ. ಈ ಕಟ್ಟಡ ನಿರ್ಮಾಣಕ್ಕೆ ಕಾಮಗಾರಿಗೆ ತಗಲುವ ವೆಚ್ಚವನ್ನು ರಾಜ್ಯ ವಲಯ ಯೋಜನೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಬಾರ್ಡ್ ಸಾಲ ಲೆಕ್ಕಶೀರ್ಷಿಕೆಯ ಅಡಿಯಲ್ಲಿ ಒದಗಿಸುವಂತ ಅನುದಾನ ಭರಿಸತಕ್ಕದ್ದು ಎಂದಿದೆ.
ಒಟ್ಟಾರೆಯಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಪ್ರಯತ್ನದಿಂದಾಗಿ ಸಾಗರ ಪಟ್ಟಣದಲ್ಲಿ ಮೆಟ್ರಿಕ್ ನಂತ್ರದ ಬಾಲಕಿಯರ ಹೊಸ ವಿದ್ಯಾರ್ಥಿನಿಲಯ ನಿರ್ಮಾಣವಾಗಲಿದೆ. ಇದರಿಂದಾಗಿ ಹಳ್ಳಿಯಿಂದ ಸಾಗರ ಪಟ್ಟಣಕ್ಕೆ ಬರುವಂತ ಗ್ರಾಮೀಣ ವಿದ್ಯಾರ್ಥಿನಿಯರಿಗೆ ಉಳಿದುಕೊಳ್ಳೋದಕ್ಕೆ, ಆ ಮೂಲಕ ವ್ಯಾಸಂಗ ಮುಂದುವರೆಸೋದಕ್ಕೆ ಅನುಕೂಲ ಸಿಕ್ಕಂತೆ ಆಗಿದೆ.