ಬೆಂಗಳೂರು: ನಗರದಲ್ಲಿ ಜನತೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನೂತನ ಹವಾನಿಯಂತ್ರಿತ ವಜ್ರ ಮಾರ್ಗಸಂಖ್ಯೆ ವಿ-500ವಿಎ ಅನ್ನು ಪರಿಚಯಿಸಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ.
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ, ದಿನಾಂಕ 24.07.2025 ರಿಂದ ಜಾರಿಗೆ ಬರುವಂತೆ ಸರ್ ಎಂ.ವಿ ರೈಲ್ವೆ ನಿಲ್ದಾಣ ದಿಂದ ಟಿನ್ ಪ್ಯಾಕ್ಟರಿ, ಮಾರತ್‌ಹಳ್ಳಿ ಬ್ರಿಡ್ಜ್, ಸರ್ಜಾಪುರ ಸಿಗ್ನಲ್, ದೊಮ್ಮಸಂದ್ರ, ಸರ್ಜಾಪುರ ಬಸ್ ನಿಲ್ದಾಣ, ಬಿದರಗುಪ್ಪೆ ಮಾರ್ಗವಾಗಿ ಅತ್ತಿಬೆಲೆಗೆ ನೂತನವಾಗಿ ಮಾರ್ಗಸಂಖ್ಯೆ ವಿ-500ವಿಎ ರಲ್ಲಿ 06 ಹವಾನಿಯಂತ್ರಿತ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲಾಗುವುದು. ವಿವರಗಳು ಕೆಳಕಂಡಂತಿದೆ.
ಮಾರ್ಗಸಂಖ್ಯೆ ವಿ-500ವಿಎ ವೇಳಾಪಟ್ಟಿ (ನಿರ್ಗಮನ ಸಮಯ) | |||
ಸರ್ ಎಂ ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣ | ಅತ್ತಿಬೆಲೆ ಬಸ್ ನಿಲ್ದಾಣ | ||
5:30, 7:05, 7:50, 8;30, 9:50, 10:05, 11:50, 13:00, 13:30, 15:50, 16:10, 17:05, 17:45, 19;30, 21:00 | 5:50, 7;35, 9:30, 10:20, 10:35, 11;00, 12:05, 14:30, 15:20, 16:50, 18;30, 19:35, 21:35 | ||
ಶಾಲೆಗಳಲ್ಲಿ ಹೈ-ರೆಸಲ್ಯೂಷನ್ ‘CCTV ಕ್ಯಾಮೆರಾ’ ಅಳವಡಿಕೆ ಕಡ್ಡಾಯ: CBSE ಆದೇಶ
ರಾಜ್ಯ ‘ಸರ್ಕಾರಿ ನೌಕರ’ರೇ ಸರ್ಕಾರಿ ಕಚೇರಿಯಲ್ಲಿ ಖಾಸಗಿ ವ್ಯಕ್ತಿ ಹುಟ್ಟು ಹಬ್ಬ ಆಚರಿಸೋ ಮುನ್ನಾ ಈ ಸುದ್ದಿ ಓದಿ.!