ಬೀದರ್: ಮಾಜಿ ಸಚಿವ ಪ್ರಭು ಚೌಹಾಣ್ ಅವರ ಪುತ್ರ ಪ್ರತೀಕ್ ಚೌಹಾಣ್ ಬಹಳಷ್ಟು ಹುಡುಗಿಯ ಜೊತೆಗೆ ವೀಡಿಯೋ ಕಾಲ್, ವಾಟ್ಸ್ ಆಪ್ ಚಾಟ್ ಮಾಡಿರುವುದಾಗಿ ಸಂತ್ರಸ್ತೆಯ ಸಹೋದರ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು ನಮ್ಮ ಸಮಸ್ಯೆ ಯಾವುದೂ ಹಿರಿಯರು, ಕುಟುಂಬಸ್ಥರು, ವಕೀಲರ ಸಮ್ಮುಖದಲ್ಲಿ ಇತ್ಯರ್ಥವಾಗಿಲ್ಲ. ಏನು ಮಾತುಕತೆಯಾಗಿದೆ ಎನ್ನುವ ಸಾಕ್ಷಿ ಬೇಕು ಅಂದ್ರೆ ಸಿಡಿ ಆರ್ ತೆಗೆಸಿರಿ ಎಂದರು.
ಮದುವೆಗೆ ದಿನಾಂಕ ನಿಗದಿ ಮಾಡಿ ಎಂದು ಕೇಳಲು ಮನೆಗೆ ಹೋಗಿದ್ದೆವು, ಆಗ ನಮ್ಮ ಮೇಲೆ ಅವರು ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ. ನಾವು ಪೊಲೀಸ್ ಠಾಣೆಗೆ ಹೋಗಿದ್ದಾಗ ಅಲ್ಲಿಯೂ ಅವರು ಹೆದರಿಸಿದ್ರು ಎಂದು ಆರೋಪಿಸಿದ್ದಾರೆ.
ಸಂತ್ರಸ್ತೆ ತಾಯಿ ಮಾತನಾಡಿ, ನಮ್ಮ ಬಳಿಯಲ್ಲಿ ಎಲ್ಲಾ ದಾಖಲೆಗಳು ಇದ್ದಾವೆ. ಅವುಗಳನ್ನು ಪೊಲೀಸರಿಗೆ ನೀಡಲಾಗಿದೆ. ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ಸುಳ್ಳು ಹೇಳುತ್ತಿದ್ದಾರೆ. ಮದುವೆ ಮಾಡುತ್ತೀರ ಎಂದು ಕೇಳಿದ್ರೆ ನಿರಾಕರಣೆ ಮಾಡಿದ್ದಾರೆ. ನಾವು ಬಹಳಷ್ಟ ದಿನಗಳಿಂದ ಕಾದಿದ್ದೇವೆ. ಅವರೇ ಮದುವೆ ಕ್ಯಾನ್ಸಲ್ ಮಾಡಿದ್ದಾರೆ ಎಂಬುದಾಗಿ ಕಣ್ಣೀರಿಟ್ಟರು.
ಸಂತ್ರಸ್ತ ಯುವತಿ ಮಾತನಾಡಿ ನನಗೆ ನ್ಯಾಯಬೇಕು. ನನಗೆ ಆದಂತೆ ಬೇರೆ ಯುವತಿಯರಿಗೆ ಆಗಬಾರದು. ನನಗೆ ಯಾರೂ ಬಾಯ್ ಫ್ರೆಂಡ್ ಇಲ್ಲ. ಪ್ರತೀಕ್ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಯಾರೊಂದಿಗೆಯೂ ಚಾಟಿಂಗ್, ವೀಡಿಯೋ ಕಾಲ್ ಮಾಡಿಯೇ ಇಲ್ಲ. ನನ್ನ ಹಾಗೂ ಪ್ರತೀಕ್ ನಡುವೆ ಪ್ರೀತಿ ಇತ್ತು. 4 ತಿಂಗಳು ನನ್ನ ಪೋನ್ ಪ್ರತೀಕ್ ಚೌಹಾಣ್ ಬಳಿಯೇ ಇತ್ತ ಎಂಬುದಾಗಿ ಹೇಳಿದರು.
ನಾನು ಪ್ರತೀಕ್ ಬಿಟ್ಟು ಬೇರೆ ಯಾವುದೇ ಯುವಕನನ್ನು ಪ್ರೀತಿ ಮಾಡಿಲ್ಲ. ಪ್ರತೀಕ್ ತಪ್ಪು ಮಾಡಿಲ್ಲ ಅಂದ್ರೆ ಏಕೆ ಮುಂದೆ ಬರುತ್ತಿಲ್ಲ? ಅವರ ತಂದೆ ಯಾಕೆ ಸುದ್ದಿಗೋಷ್ಠಿ ಮಾಡುತ್ತಿದ್ದಾರೆ ಎಂಬುದಾಗಿ ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ಕೈ ಕಟ್ ಮಾಡಿದಂತ ವೀಡಿಯೋ ಕೂಡ ಬಿಡುಗಡೆ ಮಾಡಿದಂತ ಸಂತ್ರಸ್ತ ಯುವತಿಯು, ನೀನು ನನ್ನ ಎಷ್ಟು ಪ್ರೀತಿ ಮಾಡ್ತೀಯ ನೋಡೋಣ ಎಂದು ಚೌಹಾಣ್ ಪುತ್ರ ಪ್ರತೀಕ್ ಬ್ಲೇಡ್ ನಿಂದ ನನ್ನ ಕೈ ಕತ್ತರಿಸಿ, ಓಡಿ ಹೋಗಿದ್ದಾನೆ. ಪ್ರಭು ಚೌಹಾಣ್, ಇದು ಭಗವಂತ್ ಖೂಬಾ ಪಿತೂರಿಯಾಗಿದೆ ಎಂದು ಹೇಳಿದ್ದಾರೆ. ಆದರೇ ನಾನು ಇಲ್ಲಿಯವರೆಗೂ ಭಗವಂತ್ ಖೂಬಾನನ್ನೇ ನೋಡಿಲ್ಲ. ನಾನು ನಾಗಲಕ್ಷ್ಮೀ ಹಾಗೂ ಎಸ್ಪಿಗೆ ದೂರು ನೀಡಿ ಎಲ್ಲಾ ಹೇಳಿದ್ದು, ನನಗೆ ನ್ಯಾಯ ಸಿಗುತ್ತದೆ ಎಂಬುದಾಗಿ ಅವರು ಭರವಸೆ ನೀಡಿದ್ದಾರೆ ಎಂದರು.
ಸಾರ್ವಜನಿಕರಿಗೆ ಬಹುಮುಖ್ಯ ಮಾಹಿತಿ: ನೀವು ಜಮೀನು ಖರೀದಿಸುವಾಗ ಪರಿಶೀಲಿಸಬೇಕಾದ ದಾಖಲೆಗಳಿವು
ಬೆಂಗಳೂರು ಜನತೆ ಗಮನಕ್ಕೆ: ನಾಳೆ, ನಾಡಿದ್ದು ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲ | Power Cut