ಬೆಂಗಳೂರು: ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣದ ತೀವ್ರ ಅಗತ್ಯತೆ ಕುರಿತು ಒಂದು ದಿನ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ ಖಾದರ್ ಅವರಿಗೆ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಇಂದು ಈ ಸಂಬಂಧ ಸ್ಪೀಕರ್ ಗೆ ಪತ್ರ ಬರೆದಿರುವಂತ ಅವರು, ತಮ್ಮಲ್ಲಿ ನನ್ನದೊಂದು ವಿಶೇಷ ಮನವಿ. ಇದು ಸಾಮಾಜಿಕವಾಗಿ ನಮ್ಮನ್ನು ಓಸಲಾಗದ, ಪ್ರಭಾವ
ಬೀರಲಾಗದ, ಮುಗ್ಧ ಸಮುದಾಯವಾದ ಸರ್ಕಾರಿ ಶಾಲಾ ಮಕ್ಕಳ ಪರವಾದ ಬಿನ್ನಹವಾಗಿದೆ. ಶಿಕ್ಷಣ ಇಲಾಖೆಯ ?s_ಆಡಳಿತ ಅಡಳಿತ ವ್ಯವಸ್ಥೆಯ ಅಗಾಧತೆ, ವಿದ್ಯಾರ್ಥಿ ಕೇಂದ್ರಿತವಾಗಿರಬೇಕಾದ ವ್ಯವಸ್ಥೆಯನ್ನು ಸಂಪೂರ್ಣವಾಗಿ ವಿರೂಪಗೊಳಿಸಿದೆ. ಮೂಲ ಉದ್ದೇಶವನ್ನೇ ಮಸುಕಾಗಿಸಿದೆ. ನೂರಾರು ಸಮಸ್ಯೆಗಳು-ಎಲ್ಲವೂ ಸಂಕೀರ್ಣ ಸಮಸ್ಯೆಗಳೇ ಆಗಿರುವ-ಕಾರಣ-ಶಿಕ್ಷಣವೆನ್ನುವುದು ಇಲಾಖೆಯ ಮೊದಲ ಆದ್ಯತೆಯಾಗಿಯೇ ಇಲ್ಲ. ಇಲ್ಲಿ ಬಗೆದಷ್ಟೂ ಸಮಸ್ಯೆಗಳು ಹೆಚ್ಚಾಗುತ್ತಿವೆಯೇ ವಿನ: ಸರಿಹೋಗುತ್ತಿಲ್ಲ. ಸಕಾರಾತ್ಮಕ ಆಶಯದಿಂದ ಆರಂಭಿಸುವ ಯೋಜನೆಗಳು ಸರ್ಕಾರಿ ಶಾಲೆಗಳಿಗೆ ಮಾರಕವಾಗುತ್ತಿರುವುದೂ ಒಂದು ಕ್ರೂರ ಅಣಕದಂತೆ ನಮ್ಮನ್ನು ಕಾಡುತ್ತಿದೆ ಎಂದಿದ್ದಾರೆ.
ಇಲಾಖೆಯ ಸಮಸ್ಯೆಗಳ ಕುರಿತಂತೆ ಸದನದಲ್ಲಿ ಹೆಚ್ಚಿನ ಚರ್ಚೆಯಾಗಬೇಕಿದೆ. ರಾಜ್ಯ ಸರ್ಕಾರವು ನಿರೂಪಿಸಲು ಉದ್ದೇಶಿಸಿರುವ ರಾಜ್ಯ ಶಿಕ್ಷಣ ನೀತಿಯೂ ಸದನದ ಚರ್ಚೆಗೆ ಒಳಪಡಬೇಕಿದ್ದು, ಈ ಚರ್ಚೆಗಳು ಸಮಗ್ರ ನೀತಿ ನಿರೂಪಣೆಗೆ, ಸರ್ಕಾರಿ ಶಾಲೆಗಳ ಕಾಯಕಲ್ಪಕ್ಕೆ ಕಾರಣವಾಗಬೇಕಿದೆ. ಇಲ್ಲವಾದಲ್ಲಿ ಅದು ಸರ್ಕಾರಿ ಶಾಲೆಗಳಲ್ಲಿ ಕಲಿಯುವ, ಬಹುಪಾಲು ಬಡ-ಮಧ್ಯಮ ವರ್ಗದ ಮಕ್ಕಳ ಭವಿಷ್ಯವನ್ನು ಕರಾಳವಾಗಿಸಲಿದೆ. ಪ್ರತಿ ವರ್ಷ ಸರಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ. ಪ್ರತಿ ವರ್ಷ ಮುಚ್ಚಬೇಕಾದ ಶಾಲೆಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ತೊಂದರೆಗೀಡಾದ ಮಧ್ಯಮ, ಕೆಳ ಮಧ್ಯಮ ವರ್ಗದ ಕುಟುಂಬದವರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಸಿಲುಕಿ, ಸಾಲದ ರೂಪದಲ್ಲಿ ಸಿಕಿ ಬೀಳುತ್ತಿವೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಂಬರುವ ಅಧಿವೇಶನದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿ ಹಾಗೂ ಅವುಗಳ ಅಭಿವೃದ್ಧಿಗೆ ಕಾಯಕಲ್ಪಕ್ಕೆ ಸಂಬಂಧಿಸಿದಂತೆ ಒಂದು ದಿನದ ವಿಶೇಷ ಚರ್ಚೆಗೆ ತಾವು ಮುಂದಾಗಬೇಕೆಂದು ವಿನಂತಿಸಿದ್ದಾರೆ.
ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದೇವಾಲಯದ ಬಗ್ಗೆ ಅಪಪ್ರಚಾರ ಮಾಡಬೇಡಿ: ಆರ್.ಅಶೋಕ್