ಬೆಂಗಳೂರು: ಅಗ್ನಿಪಥ ಏರ್‍ಪೋರ್ಸ್ ಅಗ್ನಿವೀರರ ನೇಮಕಾತಿ-2025 ಕ್ಕೆ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವಿಜ್ಞಾನ ವಿಷಯದಲ್ಲಿ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲೀಷ್ ಶೇಕಡ 50 ರಷ್ಟು ನೊಂದಿಗೆ ಪಿಯುಸಿ 10+2 / ಇಂಜಿನಿಯರಿಂಗ್‍ನಲ್ಲಿ ಮೂರು ವರ್ಷ ಡಿಪ್ಲೋಮಾ ಶೇಕಡವಾರು 50 ರಷ್ಟು ಪಡೆದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ದೇಹದಾಢ್ರ್ಯತೆ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗವುದು. ಅರ್ಜಿ ಸಲ್ಲಿಸಲು 2025 ರ ಜುಲೈ 31 ಕೊನೆಯ ದಿನಾಂಕವಾಗಿದೆ.
ವಿಜ್ಞಾನ ವಿಷಯವಲ್ಲದೆ ಇತರೆ ವಿದ್ಯಾರ್ಹತೆ ದ್ವಿತೀಯ ಪಿಯುಸಿ/ ತತ್ಸಮಾನ ವಿದ್ಯಾರ್ಹತೆಯಲ್ಲಿ ಶೇಕಡ 50 ರಷ್ಟು ಮತ್ತು ಇಂಗ್ಲೀಷ್ ವಿಷಯದಲ್ಲಿ ಶೇಕಡ 50 ರಷ್ಟು ಅಂಕ ಪಡೆದಿರಬೇಕು. ವಯೋಮಿತಿ 17.5 ವರ್ಷದಿಂದ 21 ವರ್ಷದೊಳಗಿರಬೇಕು. ದಿನಾಂಕ:02-07-2005 ರಿಂದ 02-01-2009 ರ ನಡುವೆ ಜನಿಸಿರಬೇಕು.
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳಾದ ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ಜಾತಿ ಮತ್ತು ಆದಾಯ (ಪ.ಜಾ./ಪ.ಪಂ ಅಭ್ಯರ್ಥಿಗಳು ಇಂಗ್ಲೀಷ್ ಭಾಷೆಯಲ್ಲಿರಬೇಕು), ಒಬಿಸಿ ಪ್ರಮಾಣಪತ್ರ (2ಎ, 2ಬಿ, ಅಭ್ಯರ್ಥಿಗಳು ಇಂಗ್ಲೀಷ್ ಭಾಷೆಯಲ್ಲಿರಬೇಕು), ಇಡಬ್ಲ್ಯೂಎಸ್ (3ಎ, 3ಬಿ), ಆಧಾರ್ ಕಾರ್ಡ್, ಪೋಟೋ ಮತ್ತು ಸಹಿ (ಪೋಟೋ ಬ್ಯಾಗ್ರೌಂಡ್ ಬಿಳಿಯಾಗಿರಬೇಕು. ಮತ್ತು ಪೋಟೋ ಕೆಳಗಡೆ ಅಭ್ಯರ್ಥಿಯ ಎಸ್.ಎಸ್.ಎಲ್.ಸಿ. ಅಂಕಪಟ್ಟಿಯಲ್ಲಿರುವಂತೆ ಹೆಸರು ಹಾಗೂ ಪೊಟೋ ತೆಗೆಸಿದ ದಿನಾಂಕ ನಮೂದಿಸಿ ಸಲ್ಲಸಬೇಕು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.