ಬೆಂಗಳೂರು: ಡಿಸಿಇಟಿ-25 ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.
ಸೀಟು ಹಂಚಿಕೆಯಾದವರು ಎಚ್ಚರಿಕೆಯಿಂದ ಜು.19ರಂದು ಮಧ್ಯಾಹ್ನ 3ಗಂಟೆ ಒಳಗೆ ತಮಗೆ ಸೂಕ್ತ ಎನಿಸಿದ ಛಾಯ್ಸ್ ದಾಖಲಿಸಬೇಕು. ಒಂದು ವೇಳೆ ಯಾವುದೇ ಛಾಯ್ಸ್ ದಾಖಲಿಸದೇ ಸುಮ್ಮನಿದ್ದರೂ ನಂತರದ ಸುತ್ತುಗಳಿಗೆ ಅಂತಹವರನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಸೀಟು ಸಿಕ್ಕಿರುವುದು ಸಮಾಧಾನವಾದರೆ ಛಾಯ್ಸ್-1 ಅನ್ನು ನಮೂದಿಸಿ, ಶುಲ್ಕ ಪಾವತಿಸಬೇಕು. ಬಳಿಕ ಜು. 21ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಛಾಯ್ಸ್ 1 ಮತ್ತು 2 ಆಯ್ಕೆ ಮಾಡಿಕೊಂಡವರು ಮಾತ್ರ ಚಲನ್ ಡೌನ್ಲೋಡ್ ಮಾಡಿಕೊಂಡು ಶುಲ್ಕ ಪಾವತಿಸಬೇಕು. ಹೆಚ್ಚಿನ ವಿವರಗಳಿಗೆ ವೆಬ್ ಸೈಟ್ ಗೆ ಭೇಟಿ ನೀಡಿ ಎಂದು ಅವರು ಸಲಹೆ ನೀಡಿದ್ದಾರೆ.