ಬೆಂಗಳೂರು : ಮನೆಯಲ್ಲಿ ಗ್ಯಾಸ್ ಗೀಸರ್ ಸೋರಿಕೆಯಾಗಿ ಯುವತಿಯೋರ್ವಳು ಸಾಸಾವನ್ನಪ್ಪಿರುವ ಘಟನೆ ನೆಲಮಂಗಲದ ಎನ್ ಎನ್ ಟಿ ಬಡಾವಣೆಯಲ್ಲಿ ಒಂದು ಘಟನೆ ಸಂಭವಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಎನ್ಎಂಟಿ ಬಡಾವಣೆಯಲ್ಲಿ ದುರ್ಘಟನೆ ಸಂಭವಿಸಿದೆ.
ಮೃತ ಯುವತಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಮೇಘನಾ (25) ಎಂದು ತಿಳಿದುಬಂದಿದೆ. ಕೆಲಸದ ನಿಮಿತ್ಯ ಬೆಂಗಳೂರಿನಲ್ಲಿ ಪಿಜಿಯಲ್ಲಿ ಮೇಘನ ವಾಸವಿದ್ದಳು. ಸೋಮವಾರ ಸ್ನೇಹಿತ ಸತೀಶ್ ಮನೆಗೆ ಬಂದಿದ್ದಾಳೆ ಮೇಘನ ಮತ್ತು ಸತೀಶ್ ಮದುವೆ ಮಾತುಕತೆ ಪ್ರಸ್ತಾಪವಾಗಿತ್ತು.
ಈ ಹಿನ್ನಲೆಯಲ್ಲಿ ಮೇಘನಾ ಸತೀಶ್ ಮನೆಗೆ ತೆರಳಿದ್ದಾಳೆ. ಸ್ನಾನಕ್ಕೆ ತೆರಳಿದ ವೇಳೆ ಗ್ಯಾಸ್ ಗೀಸರ್ ಸೋರಿಕೆಯಾಗಿ ಮೇಘನಾ ಮೃತಪಟ್ಟಿದ್ದಾಳೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೇಘನಾ ಶವ ಹಸ್ತಾಂತರಿಸಲಾಯಿತು.
ಗೀಸರ್ ಸುರಕ್ಷತಾ ಸಲಹೆಗಳು
ಗೀಸರ್ ಅನ್ನು ಸರಿಯಾದ ತಾಪಮಾನದಲ್ಲಿ ಹೊಂದಸಬೇಕು
ಗೀಸರ್ ಅನ್ನು ಬಳಸುವಾಗ ಸರಿಯಾದ ತಾಪಮಾನವನ್ನು ಹೊಂದಿಸಬೇಕು. ಹೆಚ್ಚಿನ ತಾಪಮಾನದ ಸೆಟ್ನಿಂದಾಗಿ ನೀರು ಹೆಚ್ಚಾಗಿ ಬಿಸಿಯಾಗುತ್ತದೆ. ಇದಲ್ಲದೇ ವಿದ್ಯುತ್ ಕೂಡ ವ್ಯರ್ಥವಾಗುತ್ತಿದೆ. ಇದರ ಜೊತೆಗೆ ಗೀಸರ್ ತಾಪಮಾನವನ್ನು ಪರಿಶೀಲಿಸುವುದು ಮುಖ್ಯವಾಗಿದೆ. ಸಾಮಾನ್ಯವಾಗಿ ಗೀಸರ್ ತಾಪಮಾನವನ್ನು 45-40 ಡಿಗ್ರಿಗಳ ನಡುವೆ ಇಡಬೇಕು.
ಗೀಸರ್ ಅನ್ನು ಸುಡುವ ವಸ್ತುಗಳಿಂದ ದೂರವಿಡಿ
ಪೆಟ್ರೋಲ್, ಡೀಸೆಲ್ ಅಥವಾ ಬೆಂಕಿಕಡ್ಡಿಗಳಂತಹ ವಸ್ತುಗಳನ್ನು ಬಾತ್ರೂಮ್ನಲ್ಲಿ ಯಾರೂ ಇಡುವುದಿಲ್ಲ. ಆದರೆ ಕೆಲವೊಮ್ಮೆ ಕೆಲವು ಕಾರಣಗಳಿಂದ ನೀವು ಅವುಗಳನ್ನು ಸ್ನಾನಗೃಹ ಅಥವಾ ಗೀಸರ್ ಸ್ಥಳದಲ್ಲಿ ಬಳಸುತ್ತಿದ್ದರೆ, ನಂತರ ಅವುಗಳನ್ನು ಗೀಸರ್ನಿಂದ ದೂರವಿಡಿ. ಇದಲ್ಲದೇ ಹಲವು ವಿಧದ ಟೋನರ್, ಆಸಿಡ್ ಮುಂತಾದವುಗಳು ಉರಿಯುವ ಗುಣವನ್ನು ಹೊಂದಿದ್ದು, ಗೀಸರ್ ಬಳಿ ಇಟ್ಟರೆ ಅಪಘಾತ ಸಂಭವಿಸಬಹುದು.
ಗೀಸರ್ ಅನ್ನು ಸ್ವಿಚ್ ಆನ್ ಮಾಡುವ ಮೂಲಕ ಬಳಸಬೇಡಿ.
ಗೀಸರ್ ಅನ್ನು ದೀರ್ಘಕಾಲದವರೆಗೆ ಆನ್ ಮಾಡಬಾರದು.ಹೆಚ್ಚಿನ ಸಮಯದ ಸ್ವಿಚ್ ಆನ್ ಮಾಡಿದರೆ, ಅದು ಬಿಸಿಯಾದ ನಂತರ ಸ್ಫೋಟಗೊಳ್ಳಬಹುದು. ಅಷ್ಟೇ ಅಲ್ಲ, ಹಲವು ಬಾರಿ ಸ್ವಿಚ್ ಆನ್ ಮಾಡುವುದರಿಂದ ಬಾಯ್ಲರ್ ಮೇಲೆ ಒತ್ತಡ ಉಂಟಾಗಿ ಲೀಕೇಜ್ ಆಗಬಹುದು. ಇದು ಕರೆಂಟ್ ಕೂಡ ಉಂಟಾಗುತ್ತದೆ. ಬಳಕೆಯ ನಂತರ ತಕ್ಷಣ ಆಫ್ ಮಾಡಲು ಮರೆಯಬಾರದು.
ಬಳಕೆಗೆ ಮೊದಲು ಸರ್ವಿಸ್ ಮಾಡಿ
ಅನೇಕ ವರ್ಷಗಳಿಂದ ಗೀಸರ್ ಬಳಕೆ ಮಾಡುತ್ತಿದ್ದರೆ ತಪ್ಪದೇ ಆಗಾಗ ಸರ್ವೀಸ್ ಮಾಡಿಸಬೇಕು. ಈ ಮೂಲಕ ಗೀಸರ್ನಲ್ಲಿ ಯಾವುದೇ ಸಮಸ್ಯೆ ಇದ್ದರೆ ಮುಂಚಿತವಾಗಿ ಪತ್ತೆಹಚ್ಚಬಹುದು. ಈ ಮೂಲಕ ಮುಂದಾಗುವ ಅಪಾಯವನ್ನು ತಪ್ಪಿಸಲು ಸಾಧ್ಯೆವಾಗುತ್ತದೆ.