ಬೆಂಗಳೂರು: ಯುಪಿಐ ಬಳಕೆ ನಿಲ್ಲಿಸಿದ ವರ್ತಕರಿಗೆ ವಾಣಿಜ್ಯ ತೆರಿಗೆ ಇಲಾಖೆ ಶಾಕ್ ನೀಡಿದೆ. ಫೋನ್ ಪೇ ಬಿಟ್ಟು ಕ್ಯಾಶ್ ಪಡೆದರೂ ತೆರಿಗೆ ಕಟ್ಟಬೇಕು. ಯುಪಿಐ ಬದಲು ನಗದು ರೂಪದಲ್ಲಿ ಹಣ ಸ್ವೀಕರಿಸಿದರೂ ಜಿ.ಎಸ್.ಟಿ. ಸಂಗ್ರಹಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ವಾಣಿಜ್ಯ ತೆರಿಗೆ ಇಲಾಖೆ ವರ್ತಕರಿಗೆ ಎಚ್ಚರಿಕೆ ನೀಡಿದೆ.
ಹಣ ಸ್ವೀಕಾರಕ್ಕೆ ಯುಪಿಐ ಒಂದು ವಿಧಾನ ಮಾತ್ರ. ಯಾವುದೇ ರೂಪದಲ್ಲಿ ಹಣ ಸ್ವೀಕರಿಸಿದರೂ ತೆರಿಗೆ ಅನ್ವಯವಾಗುತ್ತದೆ ಎಂದು ವರ್ತಕರಿಗೆ ವಾಣಿಜ್ಯ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿದೆ. ವರ್ತಕರು ಮಾಡಿದ ವ್ಯಾಪಾರಕ್ಕೆ ಯುಪಿಐ ಮೂಲಕ ಹಣ ಸ್ವೀಕರಿಸುವುದು ಒಂದು ಮಾರ್ಗ ಮಾತ್ರ. ಯುಪಿಐ, ಕಾರ್ಡು, ನಗದು ಸೇರಿದಂತೆ ಯಾವುದೇ ರೂಪದಲ್ಲಿ ಹಣ ಪಡೆದರೂ ಜಿಎಸ್ಟಿ ಕಾಯ್ದೆ ಅನ್ವಯಿಸುತ್ತದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಹೇಳಿದೆ.
ಜಿ.ಎಸ್.ಟಿ. ನೋಂದಣಿ ಮಾಡಿಕೊಳ್ಳದೆ ಜಿಎಸ್ಟಿ ವಿನಾಯಿತಿ ಮೇಲೆ ವ್ಯಾಪಾರ ಮಾಡಿದ 5500ಕ್ಕೂ ಅಧಿಕ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದ್ದು, ಕೆಲವು ವರ್ತಕರು ಯುಪಿಐ ಮೂಲಕ ಹಣ ಪಡೆಯುವುದನ್ನು ನಿಲ್ಲಿಸಿ ನಗದು ರೂಪದಲ್ಲಿ ಹಣ ಸ್ವೀಕರಿಸುತ್ತಿದ್ದಾರೆ.