ಬೆಂಗಳೂರು : ರಾಜ್ಯಾದ್ಯಂತ 6,599 ಗ್ರಾಮ ಗ್ರಂಥಾಲಯಗಳ ಸ್ಥಾಪನೆ ಮಾಡಲಾಗುತ್ತಿದೆ. ಪ್ರತಿ ಗ್ರಂಥಾಲಯಗಳಿಗೆ ₹2 ಲಕ್ಷ ವೆಚ್ಚದಲ್ಲಿ ತಲಾ 2,687 ಪುಸ್ತಕಗಳನ್ನು ಶೀಘ್ರದಲ್ಲಿಯೇ ಹಂಚಿಕೆ ಮಾಡಲಾಗುತ್ತದೆ.
ಗ್ರಾಮ ಗ್ರಂಥಾಲಯಗಳಲ್ಲಿ ಮಕ್ಕಳ ಕಥೆ, ವಿಜ್ಞಾನ ಮತ್ತು ವೈಜ್ಞಾನಿಕ ಚಟುವಟಿಕೆ, ಜೀವನ ಚರಿತ್ರೆ, ವೈವಿದ್ಯಮಯ ವಿಷಯಗಳ ಪುಸ್ತಕಗಳು ಲಭ್ಯವಿರಲಿವೆ.
1 ಲಕ್ಷ ರೂ. ವೆಚ್ಚದಲ್ಲಿ ಕಂಪ್ಯೂಟರ್ ಮತ್ತು ಯುಪಿಎಸ್ ಹಾಗೂ 1 ಲಕ್ಷ ರೂ. ವೆಚ್ಚದಲ್ಲಿ ಪೀಠೋಪಕರಣಗಳ ವ್ಯವಸ್ಥೆ ಇರಲಿದೆ.
ವಿದ್ಯುತ್, ಇಂಟರ್ ನೆಟ್ ಸಂಪರ್ಕ, ಕುಡಿಯುವ ನೀರು, ಫ್ಯಾನ್ ಸೇರಿದಂತೆ ಮೂಲ ಸೌಲಭ್ಯಗಳು ಇರಲಿವೆ.