ಬೆಂಗಳೂರು: ನಗರದಲ್ಲಿ ರೌಡಿಶೀಟರ್ ಬಿಕ್ಲು ಶಿವ ಆಲಿಯಾಸ್ ಶಿವಕುಮಾರ್ ನನ್ನು ನಿನ್ನೆ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಲ್ಲಿ ರೌಡಿ ಶೀಟರ್ ಬಿಕ್ಲು ಶಿವ ಬರ್ಬರ ಕೊಲೆ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಭಾರತಿನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳ್ನು ಕಿರಣ್, ವಿಮಲ್, ಪ್ರದೀಪ್, ಮದನ್, ಸ್ಯಾಮ್ಯುಯೆಲ್ ಪ್ಯಾಟ್ರಿಕ್ ಎಂಬುದಾಗಿ ಗುರುತಿಸಲಾಗಿದೆ.
ನಿನ್ನೆ ಬೆಂಗಳೂರಿನ ಹಲಸೂರು ಕೆರೆ ಬಳಿಯ ಮನೆಯ ಮುಂದೆ ರೌಡಿ ಶೀಟರ್ ಶಿವಕುಮಾರ್ ಆಲಿಯಾಸ್ ಬಿಕ್ಲು ಶಿವ ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಗೈದಿದ್ದರು.
ಮನೆ ಮುಂದೆ ನಿಂತಿದ್ದಾಗಲೇ ನಾಲ್ಕೈದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಬರ್ಬರವಾಗಿ ಕೊಚ್ಚಿ ಕೊಲೆ ಗೈದಿದ್ದಾರೆ. ಬಿಕ್ಲು ಶಿವನನ್ನು ಕೊಚ್ಚಿ ಕೊಲೆಗೈದು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಇಂದು ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಮ್ಮೂರಿನ ರಸ್ತೆ ಮಾಡಿಸಿಕೊಡಿ: ಪ್ರಧಾನಿ ಮೋದಿಗೆ ಪತ್ರ ಬರೆದ 8ನೇ ತರಗತಿ ವಿದ್ಯಾರ್ಥಿನಿ
‘ಡಿಇಎಲ್ಇಡಿ, ಡಿಪಿಇಡಿ, ಡಿಪಿಎಸ್ಇ ಕೋರ್ಸ್’ಗೆ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ