ನವದೆಹಲಿ : ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಸಿಬಿ ಆಟಗಾರ ಯಶ್ ದಯಾಳ್ ಗೆ ಬಿರ್ ರಿಲೀಫ್ ಸಿಕ್ಕಿದ್ದು, ಎಫ್ಐಆರ್ಗೆ ಸಂಬಂಧಿಸಿದಂತೆ ಮಂಗಳವಾರ ಅಲಹಾಬಾದ್ ಹೈಕೋರ್ಟ್ ಅವರ ಬಂಧನಕ್ಕೆ ತಡೆ ನೀಡಿದೆ.
ಯಶ್ ದಯಾಳ್ ವಿರುದ್ಧ ಐದು ವರ್ಷಗಳ ಕಾಲ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ದಾಖಲಾಗಿದ್ದ ಎಫ್ಐಆರ್ಗೆ ಸಂಬಂಧಿಸಿದಂತೆ ಮಂಗಳವಾರ ಅಲಹಾಬಾದ್ ಹೈಕೋರ್ಟ್ ಅವರ ಬಂಧನಕ್ಕೆ ತಡೆ ನೀಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಭಾರತದ ವೇಗಿ ಯಶ್ ದಯಾಳ್ ವಿರುದ್ಧ ಮದುವೆಯ ನೆಪದಲ್ಲಿ ಶೋಷಣೆಯ ದೂರು ದಾಖಲಿಸಲಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಾಜಿಯಾಬಾದ್’ನ ಮಹಿಳೆ ಮುಖ್ಯಮಂತ್ರಿಗಳ ಆನ್ಲೈನ್ ದೂರು ಪೋರ್ಟಲ್ ಐಜಿಆರ್ಎಸ್ನಲ್ಲಿ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿ ಗಾಜಿಯಾಬಾದ್’ನ ಇಂದಿರಾಪುರಂನ ವೃತ್ತ ಅಧಿಕಾರಿ (CO) ಅವರಿಂದ ವರದಿ ಕೇಳಿದೆ ಮತ್ತು ಐಜಿಆರ್ಎಸ್ನಲ್ಲಿ ದಾಖಲಾಗಿರುವ ದೂರನ್ನು ಪರಿಹರಿಸಲು ಪೊಲೀಸರಿಗೆ ಜುಲೈ 21 ರವರೆಗೆ ಸಮಯ ನೀಡಲಾಗಿದೆ ಎಂದು ತಿಳಿಸಿವೆ.