ಬೆಂಗಳೂರು : ರಾಜ್ಯದಲ್ಲಿ ಕೈಬರಹದಲ್ಲಿ ಭೂ ದಾಖಲೆ ನೀಡುವ ವ್ಯವಸ್ಥೆ ಬದಲಿಗೆ ಕಂದಾಯ ಇಲಾಖೆ ಡಿಜಿಟಲ್ ರೂಪದಲ್ಲಿಯೇ ಕಂದಾಯ ದಾಖಲೆ ನೀಡುವುದನ್ನು ಕಡ್ಡಾಯಗೊಳಿಸಿದೆ.
ಹೌದು, ಇನ್ಮುಂದೆ ಎ ಮತ್ತು ಬಿ ವರ್ಗದ ಭೂದಾಖಲೆಗಳನ್ನು ಸಾಂಪ್ರದಾಯಿಕ ದೃಢೀಕೃತ ನಕಲು ಪ್ರತಿ ಅಥವಾ ಕೈಬರಹದ ಮೂಲಕ ನೀಡುವ ಬದಲು ಡಿಜಿಟಲ್ ರೂಪದಲ್ಲಿಯೇ ನೀಡಲಾಗುವುದು.
ಈಗಾಗಲೇ ಡಿಜಿಟಲ್ ಭೂದಾಖಲೆಗಳ ವಿತರಣೆಗೆ ಶುರುವಾಗಿದೆ. ಇನ್ನು ಮುಂದೆ ‘ಎ’ ಹಾಗೂ ‘ಬಿ’ ವರ್ಗದ ಭೂದಾಖಲೆಗಳನ್ನು ಸಾಂಪ್ರದಾಯಿಕ ದೃಢೀಕೃತ ನಕಲು ಪ್ರತಿ ಅಥವಾ ಕೈಬರಹದ ದಾಖಲೆ ನೀಡುವ ಬದಲಾಗಿ ಡಿಜಿಟಲ್ ರೂಪದಲ್ಲಿಯೇ ಸಿಗಲಿದೆ.
ಸದ್ಯ ರಾಜ್ಯದ ಎಲ್ಲ240 ತಹಸೀಲ್ದಾರ್ ಕಚೇರಿಗಳಲ್ಲಿ ಡಿಜಿಟಲ್ ದಾಖಲೆ ನೀಡಲಾಗುತ್ತಿದ್ದು, ಶೀಘ್ರವೇ ರಾಜ್ಯದಲ್ಲಿರುವ 700 ‘ಅಟಲ್ಜಿ ಜನಸ್ನೇಹಿ ಕೇಂದ್ರಗಳಿಗೂ ವಿಸ್ತರಿಸಲು ಕಂದಾಯ ಇಲಾಖೆ ಮುಂದಾಗಿದೆ. ಅರ್ಜಿದಾರರು ಕೋರುವ ಭೂ ದಾಖಲೆ ಈಗಾಗಲೇ ಸ್ಕ್ಯಾನ್ ಆಗಿ ದೃಢೀಕರಣಗೊಂಡಿದ್ದರೆ ಒಂದೇ ದಿನದಲ್ಲಿ ಡಿಜಿಟಲ್ ದಾಖಲೆ ವಿತರಿಸಲಾಗುವುದು. ಸ್ಕ್ಯಾನಿಂಗ್ ಪ್ರಕ್ರಿಯೆ ಆಗದಿದ್ದರೆ ಏಳು ದಿನದೊಳಗೆ ಡಿಜಿಟಲ್ ದಾಖಲೆ ವಿತರಿಸಲಾಗುವುದು. ಯಾವುದೇ ಅಡಚಣೆ ವಿಳಂಬವಿಲ್ಲದೆ ಭೂ ದಾಖಲೆ ಪಡೆಯಲು ಅನುಕೂಲವಾಗಲಿದೆ.
ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸಲಾಗಿದೆ. ಇದರಿಂದ ದಾಖಲೆಗಳು ಶಿಥಿಲವಾಗಿ ಹಾಳಾಗುವುದನ್ನು ತಡೆಯಬಹುದು. ಭೂ ದಾಖಲೆ ದೃಢೀಕೃತ ಪ್ರತಿಗಾಗಿ ಅನಗತ್ಯವಾಗಿ ಕಾಯಬೇಕಿಲ್ಲ. ದಾಖಲೆಗಳನ್ನು ತಿರುಚಲು ಅವಕಾಶ ಇರುವುದಿಲ್ಲ. ತಾವು ಇರುವಲ್ಲೇ ಭೂ ದಾಖಲೆ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಧಕ್ಕೆ ನಿಂತ ಹಳೆಯ ಬಗರ್ ಹುಕುಂ ಅರ್ಜಿ ವಿಲೇವಾರಿಗೂ ಅನುಕೂಲವಾಗಲಿದೆ. ಪಾರದರ್ಶಕವಾಗಿ ಕಾಲಮಿತಿಯೊಳಗೆ ಡಿಜಿಟಲ್ ಭೂದಾಖಲೆ ಲಭ್ಯವಾಗಲಿದೆ. ಈ ಮೂಲಕ ರಾಜ್ಯದ ಆಸ್ತಿ ಮಾಲೀಕರಿಗೆ ಸಿಹಿಸುದ್ದಿ ಸಿಕ್ಕಂತಾಗಿದೆ.