ಯಾದಗಿರಿ: ರಾಜ್ಯದಲ್ಲಿ ಪತ್ನಿ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿದ್ದು, ಯಾದಗಿರಿ ಜಿಲ್ಲೆಯ ಹೋರುಂಚ ತಾಂಡಾದ ವ್ಯಕ್ತಿಯೊಬ್ಬ ಎರಡನೇ ಪತ್ನಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಧನ್ನು ಚವ್ಹಾಣ್(40) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. 20 ವರ್ಷದ ಹಿಂದೆ ಸಕ್ರಿಬಾಯಿ ಮದುವೆಯಾಗಿದ್ದರೂ ಸೋನುಬಾಯಿ ಜತೆಗೆ ಸಹಜೀವನ ನಡೆಸುತ್ತಿದ್ದರು. ಪತಿಯ ಆತ್ಮಹತ್ಯೆಗೆ ಎರಡನೇ ಪತ್ನಿಯ ಕಿರುಕುಳವೇ ಕಾರಣ ಎಂದು ಮೊದಲ ಪತ್ನಿ ಸಕ್ರಿಬಾಯಿ ದೂರು ನೀಡಿದ್ದಾರೆ.
ಸೋನು ಬಾಯಿ, ತಾಯಿ ತಾರಿಬಾಯಿ, ಸಹೋದರ ಕಾಂತಿಲಾಲ ರಾಥೋಡ್, ಸಂಬಂಧಿಕರಾದ ದೇವಿಬಾಯಿ, ಸುನಿತಾ ಬಾಯಿ ವಿರುದ್ಧ ಪ್ರಕರಣ ದಾಖಲಾಗಿದೆ. ಸೋನುಬಾಯಿ ಕಿರುಕುಳದಿಂದ ಧನ್ನು ಚವ್ಹಾಣ್ ನೇಣಿಗೆ ಶರಣಾಗಿದ್ದಾನೆ ಎಂದು ದೂರು ನೀಡಲಾಗಿದೆ.