ಬೆಂಗಳೂರು : ಹೃದಯಾಘಾತದಿಂದ ಚಿಕ್ಕಮಗಳೂರಿನಲ್ಲಿ ಜೆಡಿಎಸ್ ಪಕ್ಷದ ನಾಯಕ ಹೆಚ್.ಟಿ ರಾಜೇಂದ್ರ (72) ಸಾವನ್ನಪ್ಪಿದ್ದಾರೆ.
NR ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮದಲ್ಲಿ JDS ಪಕ್ಷದ ನಾಯಕ ಹೆಚ್.ಟಿ ರಾಜೇಂದ್ರ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರುವ JDS ಮುಖಂಡ ರಾಜೇಂದ್ರ ಅವರು HD ದೇವೇಗೌಡರ ಕುಟುಂಬದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.
ಜೆಡಿಎಸ್ ಪಕ್ಷದಿಂದ MLA ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ರು. ಶೃಂಗೇರಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ರು. ಮನೆಯಲ್ಲಿದ್ದ JDS ಮುಖಂಡ ರಾಜೇಂದ್ರ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ನೋವಿನಿಂದ ರಾಜೇಂದ್ರ ಅವರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ.
ಜೆಡಿಎಸ್ ಮುಖಂಡನ ನಿಧನಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರ ಆಪ್ತರು, ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರು, ಶೃಂಗೇರಿ ವಿಧಾನಸಭೆ ಕ್ಷೇತ್ರದ ಹಿರಿಯ ನೇತಾರರು ಆಗಿದ್ದ ಹೆಚ್.ಟಿ. ರಾಜೇಂದ್ರ ಅವರ ನಿಧನದ ವಾರ್ತೆ ಕೇಳಿ ತೀವ್ರ ಆಘಾತವಾಗಿದೆ.
ಅತ್ಯಂತ ನಿಷ್ಠಾವಂತ ಸೇನಾನಿಯಾಗಿ, ತಳಮಟ್ಟದಿಂದ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟುವಲ್ಲಿ ಅವಿರತವಾಗಿ ಶ್ರಮಿಸಿದ್ದ ಅವರು, ತಮ್ಮ ಇಡೀ ಬದುಕನ್ನು ಪಕ್ಷಕ್ಕೇ ಸಮರ್ಪಿಸಿಕೊಂಡಿದ್ದರು. ಶ್ರೀಯುತರ ಅಗಲಿಕೆ ಬಹುದೊಡ್ಡ ನಷ್ಟ ಹಾಗೂ ವೈಯಕ್ತಿಕವಾಗಿ ನಾನು ಬಹಳ ದುಃಖಿತನಾಗಿದ್ದೇನೆ.
ಶ್ರೀ ರಾಜೇಂದ್ರ ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ, ಅಭಿಮಾನಿಗಳಿಗೆ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.