ಹೊಸಪೇಟೆ: ಹೊಸಪೇಟೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ನಗರದ ಚಲುವಾದಿ ಕೇರಿಯಲ್ಲಿ ಕೋತಿ ದಾಳಿಯಿಂದ ಮೂರೂವರೆವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ನಡೆದಿದೆ.
ಕೋತಿ ದಾಳಿಯಿಂದ ಮೂರುವರೆ ವರ್ಷದ ಬಾಲಕಿ ಅನನ್ಯಾ ಮೃತಪಟ್ಟಿದ್ದು, ಮುನಿಯಪ್ಪ ಎಂಬುವರ ಪುತ್ರಿ ಅನನ್ಯಾ ಜೂ.28ರಂದು ಮೊಸರು ತರಲೆಂದು ಅಂಗಡಿಗೆ ಹೋಗುತ್ತಿದ್ದಾಗ ಕೋತಿ ದಾಳಿ ಮಾಡಿದೆ. ಅಂದು ರಾತ್ರಿಯೇ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಹೆಚ್ಚಿನ ಚಿಕಿತ್ಸೆಗೆ ಜು.2ರಂದು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿದಾಗ ಬಾಲಕಿ ಕೋಮಾಗೆ ಹೋಗಿದ್ದಳು. ಚಿಕಿತ್ಸೆ ಮುಂದುವರಿಸಿದ್ದರೂ ಫಲಕಾರಿ ಆಗದೆ ಜು.7ರಂದು ಮೃತಪಟ್ಟಿದ್ದಾಳೆ. ಕೋತಿ ದಾಳಿಗೆ ಬಾಲಕಿ ಮೃತಪಟ್ಟಿರುವ ಮಾಹಿತಿ ಇಲ್ಲ ಎಂದು ವಿಜಯನಗರ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಅನುಪಮಾ ತಿಳಿಸಿದ್ದಾರೆ.