ಹಾಸನ: ಜಿಲ್ಲೆಯ ಕತ್ತರಿಘಟ್ಟ ರೈಲ್ವೆ ಟ್ರ್ಯಾಕ್ ಬಳಿಯಲ್ಲಿ ಎರಡು ಚಿರತೆಗಳ ಕಳೇಬರ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕತ್ತರಿಘಟ್ಟ ಗ್ರಾಮದ ಬಳಿಯ ರೈಲ್ವೆ ಹಳಿಯ ಮೇಲೆ ಎರಡು ಚಿರತೆಗಳ ಕಳೇಬರ ಪತ್ತೆಯಾಗಿದೆ. ಒಂದೂವರೆ ವರ್ಷದ ಗಂಡು, 3-4 ವರ್ಷದ ಹೆಣ್ಣು ಚಿರತೆ ಕಳೇಬರ ಇದಾಗಿದೆ.
ರೈಲು ಡಿಕ್ಕಿಯಾಗಿ ಗಂಡು ಹಾಗೂ ಹೆಣ್ಣು ಚಿರತೆ ಮೃತಪಟ್ಟಿರೋ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಡಿಸಿಎಫ್ ಸೌರಭ್ ಕುಮಾರ್ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಚಿರತೆ ಸಾವಿಗೆ ಕಾರಣ ತಿಳಿಯಲು ಎಲ್ಲಾ ಪರೀಕ್ಷೆಯನ್ನು ವನ್ಯಜೀವಿ ವೈದ್ಯರು ನಡೆಸುತ್ತಿದ್ದಾರೆ.
BIG NEWS: ‘ಸಿಗಂದೂರು ಸೇತುವೆ’ಗಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಯಡಿಯೂರಪ್ಪಗೆ ಬರೆದಿದ್ದ ಪತ್ರ ವೈರಲ್