ಶಿವಮೊಗ್ಗ: ನಾಳೆ ಶಿವಮೊಗ್ಗ ಜಿಲ್ಲೆಯ ಸಾಗರ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಲೋಕಾರ್ಪಣೆಯಾಗುತ್ತಿರುವುದು ಹಿನ್ನೀರಿನ ಜನರ ತ್ಯಾಗದ ಪ್ರತೀಕವಾಗಿ ಲೋಕಾರ್ಪಣೆಯಾಗುತ್ತಿದೆ. ಇದು ನನಗೆ ಸಂತಸ ತಂದಿದೆ ಎಂಬುದಾಗಿ ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಅಂಬಾರಗೋಡ್ಲು- ಕಳಸವಳ್ಳಿ ಸೇತುವೆಗಾಗಿ ಹೋರಾಟ ಮಾಡಿದವರನ್ನು ಹತ್ತಿಕ್ಕುವ ಕೆಲಸ ನಡೆದಿದೆ. ಮುಂಬರುವಂತ ದಿನಗಳಲ್ಲಿ ಅವರ ಸೇವೆಸ್ಮರಿಸಿ ಗೌರವಿಸುವ ಚಿಂತನೆ ಮಾಡಲಾಗುವುದು. ಸೇತುವೆ ನಿರ್ಮಾಣಕ್ಕೆ ಎಲ್ಲ ಹಂತದಲ್ಲೂ ಪ್ರಯತ್ನ ನಡೆದಿದ್ದು ಅಂತಿಮವಾಗಿ ಹಿನ್ನೀರ ಜನರ ಸೇವೆಗೆ ಸೋಮವಾರದಿಂದ ಸೇತುವೆ ಲಭ್ಯವಾಗಲಿದೆ ಎಂದರು.
ನಾಳೆ ಅಂಬಾರಗೋಡ್ಲು- ಕಳಸವಳ್ಳಿ ಸೇತುವೆ ಲೋಕಾರ್ಪಣೆಗೆಗಾಗಿ ಆಗಮಿಸುತ್ತಿರುವ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪ್ರಹ್ಲಾದ್ ಜೋಷಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಸರ್ಕಾರದ ನಮ್ಮ ಸಚಿವರಾದ ಸತೀಶ್ ಜಾರಕಿಹೊಳಿ, ಮಧು ಬಂಗಾರಪ್ಪ ಅವರನ್ನು ಸ್ವಾಗತಿಸುತ್ತೇನೆ ಎಂದು ತಿಳಿಸಿದರು.
ಅರಗ ಜ್ಞಾನೇಂದ್ರ ಕೇಂದ್ರ ಸರ್ಕಾರದಿಂದ ಸೇತುವೆ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ. ಆದರೆ ನಾನು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸೇತುವೆ ನಿರ್ಮಾಣಕ್ಕೆ ಮನವಿ ಕೊಟ್ಟಿದ್ದೇನೆ. ಯಡಿಯೂರಪ್ಪ ಅವರು 100 ಕೋಟಿ ರೂ. ಅನುದಾನ ನೀಡುವ ಭರವಸೆ ಸಹ ನೀಡಿದ್ದರು ಎಂದು ಹೇಳಿದರು.
ಸೇತುವೆ ನಿರ್ಮಾಣಕ್ಕಾಗಿ ಹೆಚ್ಚಿನ ಹಣ ಬೇಕಾಗಿದ್ದರಿಂದ ರಾಜ್ಯ ಸರ್ಕಾರದಿಂದ ನಿರ್ಮಾಣ ಮಾಡಲು ಸಾಧ್ಯವಾಗಿರಲಿಲ್ಲ. ಒಂದೊಮ್ಮೆ ಕೇಂದ್ರ ಸರ್ಕಾರ ಸಿಗಂದೂರು ಸೇತುವೆ ನಿರ್ಮಿಸದೆ ಹೋಗಿದ್ದರೇ, ನಮ್ಮ ರಾಜ್ಯ ಸರ್ಕಾರದಿಂದ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತಿತ್ತು. ಶರಾವತಿ ಪಂಪ್ಡ್ ಸ್ಟೋರೇಜ್‌ಗೆ 844 ಕೋಟಿ ರೂ. ಕೊಟ್ಟ ರಾಜ್ಯ ಸರ್ಕಾರಕ್ಕೆ 473 ಕೋಟಿ ರೂ. ಕೊಡುವ ತಾಕತ್ತು ಇತ್ತು. ಏನೇ ಆಗಲಿ ಸೇತುವೆ ನಿರ್ಮಿಸಿದ್ದಾರೆ. ನನ್ನ ಅಧಿಕಾರ ಅವಧಿಯಲ್ಲಿ ಎಲ್ಲ ರೀತಿಯ ಸಹಕಾರ ಫಲಾಪೇಕ್ಷೆ ಇಲ್ಲದೆ ನೀಡಿದ್ದೇನೆ. ಆದರೆ ಬಿಜೆಪಿಯವರು ಇದನ್ನು ಸ್ವಂತ ಕಾರ್ಯಕ್ರಮವಾಗಿ ಮಾಡಿಕೊಳ್ಳುತ್ತಿದ್ದಾರೆ. ಮನೆಮನೆಗೆ ಕರಪತ್ರ ಕೊಟ್ಟು ತಮ್ಮ ಮನೆಯಿಂದ ಹಣ ಹೂಡಿದಂತೆ ಸಂಭ್ರಮಿಸುತ್ತಿರುವುದ ಮಾತ್ರ ಹಾಸ್ಯಾಸ್ಪದವಾಗಿದೆ ಎಂದು ಕಿಡಿಕಾರಿದರು.
ಅoಬಾರಗೋಡ್ಲು-ಕಳಸವಳ್ಳಿ ಸೇತುವೆ ನಿರ್ಮಾಣದ ರೂವಾರಿ ಬಿ.ಎಸ್.ಯಡಿಯೂರಪ್ಪ. ಎಲ್ಲ ಕ್ರೆಡಿಟ್ ಅವರಿಗೆ ಸಲ್ಲಬೇಕು. ಕೆಲವರು ತಾವೆ ಸೇತುವೆ ನಿರ್ಮಿಸಿದ್ದೇವೆ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಹಿಂದೆ ಶಂಕುಸ್ಥಾಪನೆ ಸಂದರ್ಭದಲ್ಲಿ ನಾನು ಸೇತುವೆ ಕೊಡುಗೆ ಕೊಟ್ಟ ನಿತಿನ್ ಗಡ್ಕರಿ ಅವರನ್ನು ಸನ್ಮಾನಿಸಿ ಅಭಿನಂದನೆ ತಿಳಿಸಿದ್ದೇನೆ ಎಂದು ಹೇಳಿದರು.
ಸೇತುವೆ ಬೇಗ ಆಗಬೇಕು ಎಂದು ಒತ್ತಾಯಿಸಿದ್ದರ ಪೂರಕವಾಗಿ ಕಾಮಗಾರಿ ಮುಗಿದಿದೆ. ಲೋಕಾರ್ಪಣೆಗೆ ಕಾಲಕೂಡಿ ಬಂದಿದೆ. ಲೋಕಾರ್ಪಣೆ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮವಾಗಬೇಕು. ಸೇತುವೆಗಾಗಿ ಹೋರಾಟ ಮಾಡಿದವರ ಜೊತೆ ಚರ್ಚೆ ಮಾಡಿ ಕಾರ್ಯಕ್ರಮ ರೂಪಿಸಬೇಕಾಗಿತ್ತು. ಆದರೆ ಏಕಮುಖವಾಗಿ ಕಾರ್ಯಕ್ರಮ ರೂಪುಗೊಳಿಸಿದ್ದಾರೆ. ಹಸಿರುಮಕ್ಕಿ ಸೇತುವೆ ಲೋಕಾರ್ಪಣೆ ಸಂದರ್ಭದಲ್ಲಿ ಸ್ಥಳೀಯ ಹೋರಾಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ ಎಂದರು.
ಶರಾವತಿ ಹಿನ್ನೀರಿನಲ್ಲಿ ತಮ್ಮ ಕುಟುಂಬದವರನ್ನು ಕಳೆದುಕೊಂಡಿದ್ದೇವೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳುತ್ತಿರುವುದು ಶುದ್ದಸುಳ್ಳು. ದೋಣಿ ಮಗಚಿ ಮೃತಪಟ್ಟವರಿಗೂ ಹಾಲಪ್ಪನವರಿಗೂ ಯಾವುದೇ ಸಂಬoಧವಿರಲಿಲ್ಲ. ಹಾಗಿದ್ದರೆ ಸಿಗಂದೂರು ಧರ್ಮದರ್ಶಿ ರಾಮಪ್ಪನವರು ಹೇಳುತ್ತಿದ್ದರು. ಹಾಲಪ್ಪ ಜನರ ಸಿಂಪತಿ ಗಳಿಸಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಶಂಕುಸ್ಥಾಪನೆ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಬಾಯಿಂದ ಸಹ ಸುಳ್ಳು ಹೇಳಿಸಿದ್ದಾರೆ. ಸೇತುವೆ ನಿರ್ಮಾಣಕ್ಕೆ ತಮ್ಮದೂ ಪ್ರಯತ್ನ ಇತ್ತು ಎಂದರೆ ಜನ ನಂಬುತ್ತಾರೆ. ಇಂತಹ ಸುಳ್ಳುಗಳನ್ನು ಜನ ನಂಬುವುದಿಲ್ಲ. ಏಕೆಂದರೆ ಹಿಂದಿನ ಚುನಾವಣೆಯಲ್ಲಿ ಸೇತುವೆ ವಿಷಯ ಇರಿಸಿಕೊಂಡು ಮತಪಡೆಯುವ ಬಿಜೆಪಿ ಪ್ರಯತ್ನ ವಿಫಲವಾಗಿತ್ತು ನಾನು ಕೂಡ ಸೇತುವೆ ಹೋರಾಟದಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಂಡಿದ್ದೇನೆ. ಹಾಗೆಂದ ಮಾತ್ರಕ್ಕೆ ಅದು ಪ್ರಚಾರದ ಸಾಧನವನ್ನಾಗಿ ಬಳಸಿ ಕೊಳ್ಳುವುದಲ್ಲ ನಮ್ಮ ಕರ್ತವ್ಯ ನಾವು ಮಾಡಬೇಕು ಎಂದರು.
ಜುಲೈ.14ರ ನಾಳೆ ಸಂಜೆ 4 ಗಂಟೆಗೆ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯಡಿ 500 ಕೋಟಿ ಮಹಿಳೆಯರ ಓಡಾಟದ ಸಂಖ್ಯೆ ದಾಟಿದ ಹಿನ್ನೆಲೆಯಲ್ಲಿ ಬಸ್ ಚಾಲಕ ನಿವಾರ್ಹಕರಿಗೆ ಸನ್ಮಾನ, ಪ್ರಯಾಣಿಕರಿಗೆ ಸಿಹಿ ವಿತರಣೆ ಮಾಡಲಾಗುತ್ತಿದೆ. ಸಾರ್ವಜನಿಕರು ಪಾಲ್ಗೊಳ್ಳಲುವಂತೆ ಮನವಿ ಮಾಡಿದರು.
BIG NEWS: ‘ಸಿಗಂದೂರು ಸೇತುವೆ’ಗಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಯಡಿಯೂರಪ್ಪಗೆ ಬರೆದಿದ್ದ ಪತ್ರ ವೈರಲ್
BREAKING: ನಾಳೆಯ ‘ಸಿಗಂದೂರು ಸೇತುವೆ ಉದ್ಘಾಟನೆ’ ಕಾರ್ಯಕ್ರಮ ಮುಂದೂಡಿ: ಗಡ್ಕರಿಗೆ ಸಿಎಂ ಸಿದ್ಧರಾಮಯ್ಯ ಪತ್ರ
ಮಂಡ್ಯದ ಮುತ್ತತ್ತಿಯಲ್ಲಿ ಜೂಜಾಟದಲ್ಲಿ ತೊಡಗಿದ್ದವರಿಗೆ ಪೊಲೀಸರು ಶಾಕ್: 24 ಮಂದಿ ಅರೆಸ್ಟ್, 4.38 ಲಕ್ಷ ಹಣ ಜಪ್ತಿ