ಧಾರವಾಡ: ವಿದೇಶಕ್ಕೆ ತೆರಳಿದ್ದಂತ ಧಾರವಾಡದ ವೃದ್ಧೆಯೊಬ್ಬರು ಹೃದಯಾಘಾತದಿಂದ ಅಲ್ಲಿಯೆ ಸಾವನ್ನಪ್ಪಿರುವಂತ ಘಟನೆ ಓಮನ್ ದೇಶದಲ್ಲಿ ನಡೆದಿದೆ.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ನಿವಾಸಿ ಮಲ್ಲವ್ವ ಸಂಗಟ(74) ಎಂಬ ವೃದ್ಧೆ ಓಮನ್ ದೇಶದ ಮಸ್ಕತ್ ಗೆ ತೆರಳಿದ್ದರು. ಪುತ್ರ ಮಸ್ಕತ್ ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರಿಂದ ಆತನ ಬಳಿಗೆ ಕಳೆದ ಬುಧವಾರದಂದು ತೆರಳಿದ್ದರು.
ಪುತ್ರಿ, ಸೊಸೆಯೊಂದಿಗೆ ಮಸ್ಕತ್ ಗೆ ಮಲ್ಲವ್ವ ತೆರಳಿದ್ದರು. ನಿನ್ನೆ ರಾತ್ರಿ ಎದೆನೋವು ಕಾಣಿಸಿಕೊಂಡು ಹೃದಯಾಘಾತದಿಂದ ಮಲ್ಲವ್ವ ಮಸ್ಕತ್ ನಲ್ಲಿ ಸಾವನ್ನಪ್ಪಿದ್ದಾರೆ. ಅವರ ಮೃತದೇಹವು ನಾಳೆ ಬೆಳಗ್ಗೆ ಕುಸುಗಲ್ ಗೆ ಆಗಮಿಸಲಿದೆ.
3 ತಿಂಗಳಲ್ಲಿ ಹೊಸ ಸಮಿತಿ ರಚನೆಗೆ ಕೋರ್ಟ್ ಆದೇಶ: ಸಾಗರ ಮಾರಿಕಾಂಬ ಹಿತರಕ್ಷಣಾ ಸಮಿತಿ ಸಂಚಾಲಕ ಆನಂದ್
ನೀವು SSLC ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಪಡೆದಿದ್ದೀರಾ? ಈಗಲೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ