ಬಳ್ಳಾರಿ: ಕೊಪ್ಪಳದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಎದುರು ಪೆಟ್ರೋಲ್ ಸುರಿದುಕೊಂಡು ಎಫ್ ಡಿಎ ಸುಂಕಪ್ಪ ಕೊರವರ ಆತ್ಮಹತ್ಯೆಗೆ ಯತ್ನಿಸಿದ್ದರು. ಇಂತಹ ಅವರು ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದ್ದಾರೆ.
ಕೊಪ್ಪಳದ ಬಿಇಒ ಕಚೇರಿಯಲ್ಲಿ ಎಫ್ ಡಿ ಎ ಆಗಿ ಸುಂಕಪ್ಪ ಕೊರವರ ಕಾರ್ಯನಿರ್ವಹಿಸುತ್ತಿದ್ದರು. ಅವರು ಕಳೆದ 7 ತಿಂಗಳಿನಿಂದ ಕರ್ತವ್ಯಕ್ಕೆ ಗೈರಾಗಿದ್ದರಿಂದ ವೇತನ ನೀಡಿರಲಿಲ್ಲ. ಮದ್ಯವೆಸನಿಯಾಗಿದ್ದ ಸುಂಕಪ್ಪಗೆ ಜೀವನ ನಿರ್ವಹಣೆ ಕಷ್ಟವಾಗಿತ್ತು.
ಜುಲೈ.8ರಂದು ವೇತನ ಕೇಳಲು ಬಿಇಒ ಕಚೇರಿಗೆ ಸುಂಕಪ್ಪ ತೆರಳಿದ್ದರು. ಈ ಸಂದರ್ಭದಲ್ಲಿ ಮನನೊಂದು ಕಚೇರಿಯ ಮುಂದೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿಕೊಂಡಿದ್ದರು. ಶೇ.80ರಷ್ಟು ಸುಟ್ಟಗಾಯದಿಂದ ಬಳಲುತ್ತಿದ್ದಂತ ಸುಂಕಪ್ಪ ಅವರನ್ನು ಎರಡು ದಿನ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ಜಿಲ್ಲಾಸ್ಪತ್ರೆಗೆ ಜುಲೈ.10ರಂದು ದಾಖಲಿಸಲಾಗಿತ್ತು. ಇದೀಗ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
SHOCKING: ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ: ಬಸ್ ಚಾಲಕ ಸಾವು
ನೀವು SSLC ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಪಡೆದಿದ್ದೀರಾ? ಈಗಲೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ