ಮಂಡ್ಯ: 3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ನ್ಯಾಯಾಲಯದ ಆದೇಶಿಸಿದೆ. ಈ ಮೂಲಕ ಅಪ್ರಾಪ್ತ ಬಾಲಕಿಯ ಮೇಲೆ ಅಮಾನುಷ ಕೃತ್ಯವೆಸಗಿದಂತ ಆರೋಪಿಗೆ ತಕ್ಷ ಶಿಕ್ಷೆಯಾಗಿದೆ.
ಮಂಡ್ಯ ಜಿಲ್ಲಾ ಸತ್ರ ನ್ಯಾಯಾಲಯದಿಂದ ಈ ಆದೇಶ ಹೊರಡಿಸಲಾಗಿದೆ. 53 ವರ್ಷದ ಶಿವಣ್ಣ ಎಂಬಾತ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿಯಾಗಿದ್ದಾರೆ. 2023 ಡಿಸೆಂಬರ್ 11ರಂದು ನಡೆದಿದ್ದ ಲೈಂಗಿಕ ದೌರ್ಜನ್ಯ ಎಸಗಿದ್ದರು. 3 ವರ್ಷದ ಬಾಲಕಿ ಮೇಲೆ ಕಾಮುಕ ಶಿವಣ್ಣ ಲೈಂಗಿಕ ದೌರ್ಜನ್ಯವೆಸಗಿದ್ದರು.
ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗ್ರಾಮ ಒಂದರಲ್ಲಿ ನಡೆದಿದ್ದ ಪ್ರಕರಣ ಇದಾಗಿ್ತತು. ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನ ಪುಸಲಾಯಿಸಿ ಕರೆದುಕೊಂಡು ಹೋಗಿ ದೌರ್ಜನ್ಯವೆಸಗಿದ್ದನು. ಅಲ್ಲದೇ ಯಾರಿಗೂ ಹೇಳದಂತೆ ಬಾಲಕಿಗೆ ಬೆದರಿಕೆ ಹಾಕಿದ್ದ ಬಗ್ಗೆ ದೂರು ದಾಖಲಾಗಿತ್ತು.
ಈ ದೂರಿನ ಬಳಿಕ ವಿಚಾರಣೆ ನಡೆಸಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಆರೋಪಿ ವಿರುದ್ಧ ವಾದವನ್ನು ಸರ್ಕಾರಿ ವಕೀಲ ಹೆಬ್ಬಕವಾಡಿ ನಾಗರಾಜು ಮಾಡಿದ್ದರು. ವಾದ ಆಲಿಸಿದಂತ ಮಂಡ್ಯ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಮೂರ್ತಿ ದಿಲೀಪ್ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ವರದಿ: ಗಿರೀಶ್ ರಾಜ್, ಮಂಡ್ಯ
SHOCKING: ತ್ರಿಶೂಲದಿಂದ ಪತಿಯನ್ನು ಹಲ್ಲೆ ಮಾಡಲು ಹೋಗಿ 11 ತಿಂಗಳ ಹಸುಳೆಯನ್ನೇ ಕೊಂದ ಮಹಿಳೆ
ನೀವು SSLC ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಪಡೆದಿದ್ದೀರಾ? ಈಗಲೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ