ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಘೀ, ಚಿಕೂನ್ ಗುನ್ಯಾಗೆ ಕಡಿವಾಣ ಹಾಕುವ ಸಲುವಾಗಿ ಸೊಳ್ಳೆ ನಿರ್ಮೂಲನೆಗೆ ಆರೋಗ್ಯ ಇಲಾಖೆ ಮುಂದಾಗಿದ್ದು, ರಾಜ್ಯಾದ್ಯಂತ 1500 ಸ್ವಯಂಸೇವಕರನ್ನು ನೇಮಿಸಿಕೊಳ್ಳಲಿದೆ.
ನೀರಿನ ಮೂಲಗಳಲ್ಲಿಯೇ ಲಾರ್ವಾ ನಿರ್ಮೂಲನೆಗೆ ರಾಜ್ಯಾದ್ಯಂತ 1500 ಸ್ವಯಂಸೇವಕರನ್ನು ನೇಮಿಸಿ ಪ್ರತಿದಿನ 400 ರೂಪಾಯಿ ಕೂಲಿ ನೀಡಲು ಆರು ಕೋಟಿ ರೂಪಾಯಿ ವೆಚ್ಚ ಸೇರಿದಂತೆ ರೋಗ ನಿಯಂತ್ರಣಕ್ಕೆ ವಿವಿಧ ಕ್ರಮಗಳಿಗೆ ಒಟ್ಟು 7.25 ಕೋಟಿ ರೂಪಾಯಿ ವೆಚ್ಚ ಮಾಡುವ ಪ್ರಸ್ತಾಪಕ್ಕೆ ಆರೋಗ್ಯ ಇಲಾಖೆ ಅನುಮೋದನೆ ನೀಡಿದೆ.
ಸಾಂಕ್ರಾಮಿಕ ರೋಗಗಳಾದ ಚಿಕನ್ ಗುನ್ಯ, ಡೆಂಗ್ಯೂ ಖಾಯಿಲೆಗಳ ಪರಿಣಾಮಕಾರಿಯಾಗಿ ನಿಯಂತ್ರಣಕ್ಕಾಗಿ ವಿಶೇಷ ಅಭಿಯಾನ ರೂಪದಲ್ಲಿ ಮುಂಜಾಗ್ರತಾ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಕುರಿತ ಸರ್ಕಾರ ಆದೇಶ ಹೊರಡಿಸಿದೆ.
ಈ ಯೋಜನೆಯಡಿ ನೀರಿನಲ್ಲಿರುವ ಲಾರ್ವಾ ನಿರ್ಮೂಲನೆಗೆ 100 ದಿನದ ಮಟ್ಟಿಗೆ 1,500 ಸ್ವಯಂಸೇವಕರನ್ನು ನೇಮಕ ಮಾಡಿಕೊಳ್ಳಲು 6 ಕೋಟಿ ರೂ. ವೆಚ್ಚಕ್ಕೆ ಅವಕಾಶ ನೀಡಲಾಗಿದೆ. ಸ್ಥಳೀಯ ಸಂಸ್ಥೆಗಳು, ಜಿಲ್ಲೆ, ತಾಲೂಕು ಮಟ್ಟದಲ್ಲಿ ಪ್ರತಿದಿನ 400 ರೂ. ಕೂಲಿಯಂತೆ ಸ್ವಯಂ ಸೇವಕರು ಕೆಲಸ ಮಾಡಲಿದ್ದಾರೆ. ನೀರಿನ ಮೂಲಗಳಲ್ಲಿ ಲಾರ್ವಾ ನಿರ್ಮೂಲನೆಗೆ 1500 ಜನರ ನೇಮಕಕ್ಕೆ ನಿರ್ಧರಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಘೀ, ಚಿಕೂನ್ ಗುನ್ಯಾ ಕಾಯಿಲೆ ಹತ್ತಿಕ್ಕಲು ಕ್ರಮ ಕೈಗೊಳ್ಳಲಾಗಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಸಾಂಕ್ರಾಮಿಕ ರೋಗಗಳಾದ ಚಿಕನ್ ಗುನ್ಯ, ಡೆಂಗ್ಯೂ ಖಾಯಿಲೆಗಳ ಪರಿಣಾಮಕಾರಿಯಾಗಿ ನಿಯಂತ್ರಣಕ್ಕಾಗಿ ವಿಶೇಷ ಅಭಿಯಾನ ರೂಪದಲ್ಲಿ ಮುಂಜಾಗ್ರತಾ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಕೀಟ ಸಂಗ್ರಹಕಾರರ ನೇಮಕಾತಿ, Molecular Xenomonitoring, ಡೆಂಗ್ಯೂ ಮತ್ತು ಚಿಕುಂಗುನ್ಯ ನಿಯಂತ್ರಣದಲ್ಲಿ ಈಡಿಸ್ ಲಾರ್ವಾ ನಿರ್ಮೂಲನಾ ಚಟುವಟಿಕೆಗಾಗಿ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಸ್ವಯಂ ಸೇವಕರ ಸೇವೆಯ ಬಳಕೆ. ಡೆಂಗ್ಯೂ ಜ್ವರ ಪ್ರಕರಣಗಳ ಶೀಘ್ರಪತ್ತೆಗಾಗಿ Dengue NS1 Ag testing ELISA Kitಗಳ ಖರೀದಿ, ಇತ್ಯಾದಿ ಪ್ರಮುಖ ಚಟುವಟಿಕೆಗಳ ಅನುಷ್ಠಾನಕ್ಕಾಗಿ NHM ರಡಿ ಅನುಮೋದನೆಯಾಗಿರುವ ಒಟ್ಟು ರೂ.7.25 ಕೋಟಿಗಳ (ಏಳು ಕೋಟಿ ಇಪ್ಪತೈದು ಲಕ್ಷ ರೂಪಾಯಿಗಳು ಮಾತ್ರ) ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.