Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೇ ಅಂತ್ಯದವರೆಗೆ ಭಾರಿ ಮಳೆ ಮುನ್ಸೂಚನೆ: ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಸಾಧ್ಯತೆ

02/05/2026 4:00 PM

GOOD NEWS: ಮೇ.14ಕ್ಕೆ ಭಾರತಕ್ಕೆ ಮುಂಗಾರು ಪ್ರವೇಶ; ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ! Monsoon Rain

02/05/2026 3:53 PM

BREAKING : ಇಂಧನ ದರ ಏರಿಕೆ ಹಿನ್ನೆಲೆ : ಜುಲೈವರೆಗೂ ಅಂತರಾಷ್ಟ್ರೀಯ ಹಾರಾಟ ಕಡಿತಕ್ಕೆ ಏರ್ ಇಂಡಿಯ ನಿರ್ಧಾರ?!

02/05/2026 3:45 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಶರಾವತಿ ಪಂಪ್ಡ್ ಸ್ಟೋರೇಜ್’ಗೆ ಸ್ಥಳೀಯ ರೈತರು ಭೂಮಿ ನೀಡಲು ಒಪ್ಪಿಗೆ: ಶಾಸಕ ಗೋಪಾಲಕೃಷ್ಣ ಬೇಳೂರು
KARNATAKA

‘ಶರಾವತಿ ಪಂಪ್ಡ್ ಸ್ಟೋರೇಜ್’ಗೆ ಸ್ಥಳೀಯ ರೈತರು ಭೂಮಿ ನೀಡಲು ಒಪ್ಪಿಗೆ: ಶಾಸಕ ಗೋಪಾಲಕೃಷ್ಣ ಬೇಳೂರು

By kannadanewsnow0911/07/2025 9:49 PM

ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಕಾಮಗಾರಿಗೆ ಸ್ಥಳೀಯ ರೈತರು ಒಪ್ಪಿಕೊಂಡಿದ್ದು ಭೂಮಿ ಬಿಟ್ಟುಕೊಡಲು ಒಪ್ಪಿದ್ದಾರೆ. ಪಂಪ್ಡ್ ಸ್ಟೋರೇಜ್‌ಗಾಗಿ ರೈತರ 8.32 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶರಾವತಿ ಅಂತರ್ಗತ ಭೂವಿದ್ಯುತ್ ಯೋಜನೆ ವ್ಯಾಪ್ತಿಗೆ ಬರುವ ಹೆನ್ನಿ ಭಾಗದ ರೈತರ ಸಭೆಯ ಅಧ್ಯಕ್ಷತೆ ವಹಿಸಿ ರೈತರ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡುತ್ತಿದ ಅವರು, ಪಂಪ್ಡ್ ಸ್ಟೋರೇಜ್‌ನಿಂದ ದೊಡ್ಡ ಪ್ರಮಾಣದ ಕಾಡು ನಾಶವಾಗುತ್ತದೆ ಎನ್ನುವ ಸುಳ್ಳುಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ವಾಸ್ತವದಲ್ಲಿ 11 ರೈತ ಕುಟುಂಬಗಳ 8.32 ಎಕರೆ ಕೃಷಿಭೂಮಿ ಜೊತೆಗೆ 54 ಹೆಕ್ಟೇರ್ ಅರಣ್ಯಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲಾಗುತ್ತದೆ. ರೈತರು ಸಭೆಯಲ್ಲಿ ತಮ್ಮ ಬೇಡಿಕೆಗಳನ್ನು ಮಂಡಿಸಿದ್ದಾರೆ. ರೈತರ ಪರವಾಗಿ ನಾವಿದ್ದೇವೆ. ಸುಮಾರು 2ಸಾವಿರ ಮೆ.ವ್ಯಾ. ವಿದ್ಯುತ್ ಯೋಜನೆಯಡಿ ಆಣೆಕಟ್ಟು ನಿರ್ಮಿಸದೆ ಉತ್ಪಾದನೆ ಮಾಡುವ ಅಪರೂಪದ ಯೋಜನೆ ಇದಾಗಿದೆ ಎಂದರು.

ಸುಮಾರು 8644 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಅನುಷ್ಟಾನಗೊಳ್ಳುತ್ತಿದೆ. ಮುಂದಿನ ಪೀಳಿಗೆ ವಿದ್ಯುತ್ ಸಮಸ್ಯೆ ಅನುಭವಿಸಬಾರದು ಎನ್ನುವ ಉದ್ದೇಶದಿಂದ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ಯೋಜನೆ ಮಂಜೂರಾತಿ ಮಾಡಿದ್ದಾರೆ. ಅರಣ್ಯ ನಾಶವಾದರೆ ಅದಕ್ಕೆ ಪರ್ಯಾಯ ಅರಣ್ಯ ಬೆಳೆಸುವ ನಿಟ್ಟಿನಲ್ಲಿ ಗಮನ ಹರಿಸಲಾಗಿದೆ. ಹೆದ್ದಾರಿ ಸೇರಿದಂತೆ ಬೇರೆಬೇರೆ ಯೋಜನೆ ಸಂದರ್ಭದಲ್ಲಿ ಅಲ್ಪಸ್ವಲ್ಪ ಅರಣ್ಯ ನಾಶವಾಗುತ್ತದೆ. ಅಂದಮಾತ್ರಕ್ಕೆ ಉತ್ತಮ ಯೋಜನೆ ಕೈಬಿಡಲು ಸಾಧ್ಯವಿಲ್ಲ. ಭೂಮಿ ಬಿಟ್ಟುಕೊಡುವ ರೈತರಿಗೆ ಸೂಕ್ತ ಪರಿಹಾರದ ಜೊತೆಗೆ ಕುಟುಂಬಕ್ಕೊAದು ಉದ್ಯೋಗವನ್ನು ಕೊಡುವ ಭರವಸೆ ನೀಡಿದ್ದೇವೆ. ಅತಿಶೀಘ್ರದಲ್ಲಿ ಯೋಜನೆ ಅನುಷ್ಟಾನಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಈಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಪಂಪ್ಡ್ ಸ್ಟೋರೇಜ್‌ಗೆ ಸಂಬಂಧಪಟ್ಟಂತೆ ಸ್ಥಾನಿಕ ರೈತರ ಜೊತೆ ಸಭೆ ನಡೆಸಲಾಗಿದೆ. ಕಾನೂನು ಪ್ರಕಾರವೇ ಎಲ್ಲಾ ಚಟುವಟಿಕೆ ನಡೆಯುತ್ತಿದ್ದು ಪರಿಸರನಾಶ ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ರೈತರು ತಮ್ಮ ಸಮಸ್ಯೆ ಹಾಗೂ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಅದಕ್ಕೆ ಪೂರಕವಾಗಿ ಸ್ಪಂದಿಸುತ್ತೇವೆ. ಜಿಲ್ಲಾ ಮತ್ತು ತಾಲ್ಲೂಕು ಆಡಳಿತದಿಂದ ರೈತರಿಗೆ ಎಲ್ಲ ರೀತಿಯ ಸಹಾಯ ನೀಡಲಾಗುತ್ತದೆ. ರೈತರಿಗೆ ಪರ್ಯಾಯ ಭೂಮಿ ಕೊಡುವ ಜೊತೆಗೆ ಉದ್ಯೋಗ ನೀಡುವ ಬಗ್ಗೆ ಸಹ ಗಮನ ಹರಿಸಲಾಗುತ್ತದೆ ಎಂದರು.

ಈ ಸಭೆಯಲ್ಲಿ ಪ್ರೊಬೇಷನರಿ ಜಿಲ್ಲಾಧಿಕಾರಿ ನಾಗೇಂದ್ರ ಕುಮಾರ್, ಸಾಗರ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಅರಣ್ಯ ಇಲಾಖೆಯ ರವಿಕುಮಾರ್ ಇನ್ನಿತರರು ಹಾಜರಿದ್ದರು.

ಶರಾವತಿ ಪಂಪ್ಡ್ ಸ್ಟೋರೇಜ್‌ ಗೆ ಪರಿಸರವಾದಿಗಳ ವಿರೋಧ

ಶರಾವತಿ ಪಂಪ್ಡ್ ಸ್ಟೋರೇಜ್ ಪರಿಸರವಿರೋಧ ಯೋಜನೆಯಾಗಿದೆ. ಯಾವುದೇ ಕಾರಣಕ್ಕೂ ಯೋಜನೆ ಅನುಷ್ಟಾನ ಸಲ್ಲದು ಎಂದು ಪರಿಸರವಾದಿ ಅಖಿಲೇಶ್ ಚಿಪ್ಳಿ ತಿಳಿಸಿದ್ದಾರೆ.

ಸಭೆ ನಡೆಯುವುದಕ್ಕೆ ಮೊದಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸ್ಥಳಕ್ಕೆ ಬಂದ ಅವರು ಮಾಧ್ಯಮದ ಜೊತೆ ಮಾತನಾಡುತ್ತಾ, ಯೋಜನೆ ದೊಡ್ಡ ಭ್ರಷ್ಟಾಚಾರದಿಂದ ಕೂಡಿದೆ. ರಾಜ್ಯದ ಜನರ ತೆರಿಗೆ ಹಣ ಅಪವ್ಯಯವಾಗುತ್ತದೆ. ವಿದ್ಯುತ್ ಉತ್ಪಾದನೆಗೆ ಬೇರೆಬೇರೆ ಮಾರ್ಗವಿದೆ. ಆದರೆ ಹಣ ಹೊಡೆಯಲಿಕ್ಕಾಗಿಯೆ ಈ ಯೋಜನೆ ಅನುಷ್ಟಾನಕ್ಕೆ ತೆಗೆದುಕೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಕೇಂದ್ರ ಸರ್ಕಾರದ ಯಾವ ಇಲಾಖೆಯ ಅನುಮತಿಯೂ ಈತನಕ ಯೋಜನೆಗೆ ಸಿಕ್ಕಿಲ್ಲ. ಯೋಜನೆ ಹೆಸರಿನಲ್ಲಿ ರೈತರನ್ನು ನಿರ್ದಯವಾಗಿ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಲಾಗುತ್ತಿದೆ. ಯೋಜನೆ ವಿರುದ್ದ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಂಕರ ಶರ್ಮ, ಕೃಷ್ಣಮೂರ್ತಿ, ಯೋಗೇಂದ್ರ, ಅಕ್ಷರ ಎಲ್.ವಿ, ರಾಜೇಶ್ವರಿ, ಜಯಪ್ರಕಾಶ್, ಲೋಕೇಶ್ ಇನ್ನಿತರರು ಹಾಜರಿದ್ದರು.

ಚಿತ್ರದುರ್ಗ: SSLC, PUC ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ನಾಯಕರು 75 ವರ್ಷಕ್ಕೆ ನಿವೃತ್ತಿ ಆಗಬೇಕು: ಭಾರಿ ಸಂಚಲನ ಮೂಡಿಸಿದ RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ

Share. Facebook Twitter LinkedIn WhatsApp Email

Related Posts

ಮೇ ಅಂತ್ಯದವರೆಗೆ ಭಾರಿ ಮಳೆ ಮುನ್ಸೂಚನೆ: ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಸಾಧ್ಯತೆ

02/05/2026 4:00 PM1 Min Read

BIG NEWS : ಹೊಸ ಪಡಿತರ ಚೀಟಿಗಾಗಿ ಅರ್ಜಿ ಕರೆಯದ ಹಿನ್ನೆಲೆ : ರಾಜ್ಯದಲ್ಲಿ 7.76 ಲಕ್ಷ ನಕಲಿ BPL ಕಾರ್ಡ್‌ ಪತ್ತೆ!

02/05/2026 3:38 PM2 Mins Read

ಬೆಂಗಳೂರಲ್ಲಿ ಅರೆಬೆಂದ ಸ್ಥಿತಿಯಲ್ಲಿ ವೃದ್ದೆಯ ಶವ ಪತ್ತೆ : ಕೊಲೆ ಮಾಡಿ ಶವ ಸುಟ್ಟು ಹಾಕಿರುವ ಶಂಕೆ!

02/05/2026 3:36 PM1 Min Read
Recent News

ಮೇ ಅಂತ್ಯದವರೆಗೆ ಭಾರಿ ಮಳೆ ಮುನ್ಸೂಚನೆ: ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಸಾಧ್ಯತೆ

02/05/2026 4:00 PM

GOOD NEWS: ಮೇ.14ಕ್ಕೆ ಭಾರತಕ್ಕೆ ಮುಂಗಾರು ಪ್ರವೇಶ; ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ! Monsoon Rain

02/05/2026 3:53 PM

BREAKING : ಇಂಧನ ದರ ಏರಿಕೆ ಹಿನ್ನೆಲೆ : ಜುಲೈವರೆಗೂ ಅಂತರಾಷ್ಟ್ರೀಯ ಹಾರಾಟ ಕಡಿತಕ್ಕೆ ಏರ್ ಇಂಡಿಯ ನಿರ್ಧಾರ?!

02/05/2026 3:45 PM

BIG NEWS : ಹೊಸ ಪಡಿತರ ಚೀಟಿಗಾಗಿ ಅರ್ಜಿ ಕರೆಯದ ಹಿನ್ನೆಲೆ : ರಾಜ್ಯದಲ್ಲಿ 7.76 ಲಕ್ಷ ನಕಲಿ BPL ಕಾರ್ಡ್‌ ಪತ್ತೆ!

02/05/2026 3:38 PM
State News
KARNATAKA

ಮೇ ಅಂತ್ಯದವರೆಗೆ ಭಾರಿ ಮಳೆ ಮುನ್ಸೂಚನೆ: ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಸಾಧ್ಯತೆ

By kannadanewsnow0902/05/2026 4:00 PM KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಸುಡುತ್ತಿರುವ ಬಿಸಿಲಿನಿಂದ ತತ್ತರಿಸಿದ್ದ ಜನತೆಗೆ ವರುಣದೇವ ಕೊನೆಗೂ ತಂಪೆರೆದಿದ್ದಾನೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹವಾಮಾನವು ದಿಢೀರ್ ಬದಲಾಗಿದ್ದು,…

BIG NEWS : ಹೊಸ ಪಡಿತರ ಚೀಟಿಗಾಗಿ ಅರ್ಜಿ ಕರೆಯದ ಹಿನ್ನೆಲೆ : ರಾಜ್ಯದಲ್ಲಿ 7.76 ಲಕ್ಷ ನಕಲಿ BPL ಕಾರ್ಡ್‌ ಪತ್ತೆ!

02/05/2026 3:38 PM

ಬೆಂಗಳೂರಲ್ಲಿ ಅರೆಬೆಂದ ಸ್ಥಿತಿಯಲ್ಲಿ ವೃದ್ದೆಯ ಶವ ಪತ್ತೆ : ಕೊಲೆ ಮಾಡಿ ಶವ ಸುಟ್ಟು ಹಾಕಿರುವ ಶಂಕೆ!

02/05/2026 3:36 PM

BREAKING: ಬೆಂಗಳೂರಲ್ಲಿ SSLC ಟಾಪರ್ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ

02/05/2026 3:11 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.