ಶಿವಮೊಗ್ಗ: ತುರ್ತು ವಿದ್ಯುತ್ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಜುಲೈ 12, 14 ರಂದು ಈ ಕೆಳಗಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಜುಲೈ.12ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ
ಶಿವಮೊಗ್ಗ ನಗರ ಉಪವಿಭಾಗ-2ರ ಘಟಕ-6ರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜು.12 ರಂದು ಬೆಳಗ್ಗೆ 9.00 ರಿಂದ ಸಂಜೆ 6.00ರವರೆಗೆ ಗೋಪಿಶೆಟ್ಟಿಕೊಪ್ಪ, ಸಿದ್ದೇಶ್ವರ ಸರ್ಕಲ್, ಭವಾನಿ ಲೇಔಟ್, ಆಶ್ರಯ ಬಡಾವಣೆ, ಚಾಲುಕ್ಯನಗರ, ಕೆ.ಹೆಚ್.ಬಿ. ಕಾಲೋನಿ, ಹಳೆಊರು ಗೋಪಿಶೆಟ್ಟಿಕೊಪ್ಪ, ಗದ್ದೆಮನೆ ಲೇಔಟ್, ಮಂಜಪ್ಪ ಬಸಪ್ಪ ಲೇಔಟ್, ಜಿ.ಎಸ್.ಕ್ಯಾಸ್ಟಿಂಗ್, ಸೋಮಣ್ಣ ಫ್ಯಾಕ್ಟರಿ, ಸಲೀಮ್ ಫ್ಯಾಕ್ಟರಿ, ಕಾಮತ್ ಲೇಔಟ್, ಮೇಲಿನ ತುಂಗಾನಗರ ಹಾಗೂ ಸುತ್ತಮುತ್ತಲಿನ ಐಪಿ ಲಿಮಿಟ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದೆ.
ಜುಲೈ.14ರಂದು ಈ ಪ್ರದೇಶದಲ್ಲಿ ಕರೆಂಟ್ ಇರೋದಿಲ್ಲ
ಶಿವಮೊಗ್ಗ ನಗರ ಕೋಟೆ ರಸ್ತೆಯಲ್ಲಿ ವಿದ್ಯುತ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜು.14 ರಂದು ಬೆಳಗ್ಗೆ 9.00 ರಿಂದ ಸಂಜೆ 6.00ರವರೆಗೆ ಕೋಟೆರಸ್ತೆ, ಬೆಕ್ಕಿನ ಕಲ್ಮಠ, ಓ.ಬಿ.ಎಲ್.ರಸ್ತೆ, ಅಪ್ಪಾಜಿ ರಾವ್ ಕಾಂಪೌAಡ್, ಬಿ.ಹೆಚ್.ರಸ್ತೆ, ಪೆನ್ಷನ್ ಮೊಹಲ್ಲಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ಕೋರಿದೆ.