ಬೆಂಗಳೂರು: ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯಿಂದ ಮಹತ್ವದ ಕ್ರಮವಹಿಸಲಾಗಿದೆ. ಜನರು ಈ ಕೆ ಎಸ್ ಪಿ ಎನ್ನುವಂತ ಆಪ್ ಮೊಬೈಲ್ ನಲ್ಲಿ ಹಾಕಿಕೊಂಡರೇ, ನಿಮ್ಮ ಸುರಕ್ಷತೆಗೆ ಪೊಲೀಸರೇ ನಿಮ್ಮ ಜೊತೆಯಲ್ಲಿ ಇದ್ದಂತೆಯೇ ಸರಿ.
ಕರ್ನಾಟಕ ಪೊಲೀಸ್ ಇಲಾಖೆಯು ಜನರ ಸುರಕ್ಷತೆಗಾಗಿ ಕೆ ಎಸ್ ಪಿ ಸೇಫ್ ಕನೆಕ್ಟ್ ಆಪ್ ಎಂಬುದನ್ನು ಬಿಡುಗಡೆ ಮಾಡಲಾಗಿದೆ. ಸೇಫ್ ಕನೆಕ್ಟ್ ಒಂದು ದ್ವಿಮುಖ ಆಡಿಯೋ, ವೀಡಿಯೋ ಕರೆಗಳನ್ನು ಒದಗಿಸುವ ಮೂಲಕ ನಾಗರೀಕರು ಮತ್ತು ಪೊಲೀಸ್ ಸಂಸ್ಥೆಗಳನ್ನು ಸಬಲೀಕರಣಗೊಳಿಸಲುವಂತ ಕೆಲಸವನ್ನು ಮಾಡುತ್ತದೆ. ಅದೇ ಮಾದರಿಯಲ್ಲೇ ಕೆ ಎಸ್ ಪಿ ಸೇಫ್ ಕನೆಕ್ಟ್ ಆಪ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಒಂದು ಕ್ಲಿಕ್. ತಕ್ಷಣದ ಸಹಾಯ!KSP ಆಪ್‌ನಲ್ಲಿ ಸೇಫ್ ಕನೆಕ್ಟ್‌ನೊಂದಿಗೆ, ನೀವು ಎಂದಿಗೂ ಒಂಟಿಯಾಗಿರುವುದಿಲ್ಲ. ನೈಜ-ಸಮಯದ ವಿಡಿಯೋ ಕರೆಗಳು, ನಿರ್ದಿಷ್ಟ ಸ್ಥಳದ ಟ್ರ್ಯಾಕಿಂಗ್, ತ್ವರಿತ ವರದಿಗಳು—ನಿಮ್ಮ ಸುರಕ್ಷತೆ ಒಂದು ಟ್ಯಾಪ್ ದೂರದಲ್ಲಿದೆ
ಈಗಲೇ ಡೌನ್‌ಲೋಡ್ ಮಾಡಿ!
One click. Instant help.With Safe Connect on the KSP App,… pic.twitter.com/U9ecCQ4Gmc
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) July 11, 2025
ಈ ಅತ್ಯಾಧುನಿಕ ವ್ಯವಸ್ಥೆ ಯಾವುದೇ ಘಟನೆಯ ನೈಜ ಸಮಯದ ವೀಡಿಯೋ ಕರೆಗಳು, ಲೈವ್ ಲೊಕೇಶನ್ ಟ್ರ್ಯಾಕಿಂಗ್ ಮಾಹಿತಿಯನ್ನು ಸೇಫೆ ಸಿಟಿ ಕಮಾಂಡ್ ಸೆಂಟರ್ ಗೆ ತಲುಪಿಸಲು ನೆರವಾಗುತ್ತದೆ. ಆ ಮೂಲಕ ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ಪೊಲೀಸರೇ ಜೊತೆಗಿದ್ದಷ್ಟು ನೆರವಾಗುತ್ತದೆ.
KSP ಆಪ್ ನಲ್ಲಿ ಸುರಕ್ಷತೆಯ ಏನೆಲ್ಲಾ ಇದೆ ಗೊತ್ತಾ?
ನೀವು ಒಂದು ಘಟನೆಯ ಕುರಿತಂತೆ ಕುಳಿತಲ್ಲಿಯೇ ಕೆ ಎಸ್ ಪಿ ಆಪ್ ನಲ್ಲಿ ವರದಿ ಮಾಡಬಹುದು. ನೀವು ಇರುವಂತ ಸ್ಥಳದ ಸಮೀಪದಲ್ಲಿ ಪೊಲೀಸ್ ಠಾಣೆಗಳು ಎಲ್ಲಿದ್ದಾವೆ ಅನ್ನೋದನ್ನು ತಿಳಿಯಬಹುದು. ಆ ಠಾಣೆಗೆ ಕರೆ ಮಾಡಿ ತುರ್ತಾಗಿ ಸಂಪರ್ಕಿಸಬಹುದು. ನೀವು ಸಂಕಷ್ಟದಲ್ಲಿದ್ದಂತ ಸಂದರ್ಭದಲ್ಲಿ, ತೊಂದರೆಗೆ ಸಿಲುಕಿದಾಗ ತುರ್ತು ಸಂದರ್ಭದಲ್ಲಿ ಯಾರನ್ನೆಲ್ಲ ಸಂಪರ್ಕಿಸಬಹುದು ಎನ್ನುವಂತ ಸಂಪರ್ಕ ಸಂಖ್ಯೆಯನ್ನು ಆಡ್ ಮಾಡಬಹುದು.
ಪೊಲೀಸ್, ಫೈರ್, ಆಂಬುಲೆನ್ಸ್, ಚೈಲ್ಡ್ ಹೆಲ್ಪ್ ಲೈನ್ ನಂಬರ್ ಸೇರಿದಂತೆ ಇತರೆ ಸಹಾಯವಾಣಿ ಸಂಖ್ಯೆಗಳಿದ್ದಾವೆ. ನೀವು ನಿಮ್ಮ ಸಮೀಪದ ಪೊಲೀಸ್ ಠಾಣೆಯ ಸಾಮಾಜಿಕ ಜಾಲತಾಣಗಳನ್ನು ಫಾಲೋ ಮಾಡುತ್ತಾ, ಸಂಪರ್ಕದಲ್ಲಿದ್ದು, ಸಮಸ್ಯೆಗಳಿಗೆ ಪ್ರತಿಸ್ಪಂದನೆಯನ್ನು ಪಡೆಯಬಹುದಾಗಿದೆ.
ಸೋ ನೀವು ಕೇವಲ ಒಂದು ಕ್ಲಿಕ್ ದೂರದಲ್ಲಿ ಪೊಲೀಸರಿದ್ದಾರೆ ಎನ್ನುವಷ್ಟು ನೆರವಾಗಲು ಕೆ ಎಸ್ ಸಿ ಸೇಫ್ ಕನೆಕ್ಟ್ ಆಪ್ ನಿಮ್ಮ ಮೊಬೈಲ್ ನಲ್ಲಿ ಹಾಕಿಕೊಳ್ಳಿ. ಸಾರ್ವಜನಿಕರು ಕೆ ಎಸ್ ಪಿ ಆಪ್ ಹಾಕಿಕೊಂಡು, ಸೇಫ್ ಕನೆಕ್ಟ್ ಮಾಡಿ. ಆಗ ನೀವು ಎಂದಿಗೂ ಒಂಟಿಯಾಗಿದ್ದೀರಿ ಎಂಬ ಫೀಲ್ ಇಲ್ಲದಷ್ಟು ಸುರಕ್ಷಿತತೆಯನ್ನು ನಿಮಗೆ ಪೊಲೀಸ್ ಇಲಾಖೆ ನೀಡುತ್ತದೆ. ಸೋ ಇನ್ನೇಕೆ ತಡ ಪ್ಲೇ ಸ್ಟೋರ್, ಆಪಲ್ ಸ್ಟೋರ್ ನಲ್ಲಿ KSP App ಅಂತ ಸರ್ಚ್ ಮಾಡಿ, ಇಂದೇ ಹಾಕಿಕೊಂಡು ಸೇಫ್ ಕನೆಕ್ಟ್ ಆಗಿರಿ.