Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಲ್ಲಿ ಬೀದಿ ನಾಯಿಗಳಿಗೆ ಬಿರಿಯಾನಿ ನೀಡ್ತೀವಿ ಎಂಬುದು ಬಿಬಿಎಂಪಿಯ ಲೂಟಿ ಪ್ಲಾನ್: ಆರ್.ಅಶೋಕ್

12/07/2025 5:08 PM

KSRTC ಮುಡಿಗೇರಿದ ಮತ್ತೊಂದು ಕಿರೀಟ: ET HRWorld Employee Experience ರಾಷ್ಟ್ರೀಯ ಪ್ರಶಸ್ತಿ

12/07/2025 5:06 PM

BIGG NEWS : ಭಾರತೀಯ ವಿಮಾನಯಾನ ಉದ್ಯಮಕ್ಕೆ ಭಾರೀ ನಷ್ಟ ; ಸರಿಸುಮಾರು ₹3,000 ಕೋಟಿ ಲಾಸ್

12/07/2025 5:04 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BMTC ಹವಾನಿಯಂತ್ರಿತ ಬಸ್, ವೇಗದೂತ ಸೇವೆ, ಪ್ರವಾಸದ ನೂತನ ಮಾರ್ಗಗಳಿಗೆ ರಾಮಲಿಂಗಾರೆಡ್ಡಿ ಚಾಲನೆ
KARNATAKA

BMTC ಹವಾನಿಯಂತ್ರಿತ ಬಸ್, ವೇಗದೂತ ಸೇವೆ, ಪ್ರವಾಸದ ನೂತನ ಮಾರ್ಗಗಳಿಗೆ ರಾಮಲಿಂಗಾರೆಡ್ಡಿ ಚಾಲನೆ

By kannadanewsnow0911/07/2025 2:44 PM

ಬೆಂಗಳೂರು: ಇಂದು ‘ಸಾರ್ವಜನಿಕ ಸೇವೆಗಾಗಿ ಮೆ|| ಟಾಟಾ ಮೋಟರ್ಸ್ ಲಿಮಿಟೆಡ್ ನ 148 ಹವಾನಿಯಂತ್ರಣರಹಿತ ವಿದ್ಯುತ್ ಚಾಲಿತ ಬಸ್ಸುಗಳು ಹಾಗೂ ವೇಗದೂತ ಸೇವೆಗಳು ಮತ್ತು ಪ್ಯಾಕೇಜ್ ಪ್ರವಾಸದಡಿಯಲ್ಲಿ ಪರಿಚಯಿಸಲಾಗುತ್ತಿರುವ ನೂತನ ಮಾರ್ಗಗಳನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಲೋಕಾರ್ಪಣೆಗೊಳಿಸದರು.

ಸಾರ್ವಜನಿಕ ಸಾರಿಗೆ ಸೇವೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಹಾಗೂ ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಹನ ಮಾಲಿನ್ಯ ತಡೆಗಟ್ಟಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಅವುಗಳ ಪೈಕಿ ಎಲೆಕ್ಟ್ರಿಕ್‌ ಬಸ್ಸುಗಳನ್ನು ಪರಿಚಯಿಸುತ್ತಿರುವುದು ಒಂದಾಗಿರುತ್ತದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸತತವಾಗಿ 04 ವರ್ಷಗಳಿಂದ ಎಲೆಕ್ಟ್ರಿಕ್‌ ಬಸ್ಸುಗಳನ್ನು ಪರಿಚಯಿಸುತ್ತಿದ್ದು, ಇಲ್ಲಿಯವರೆಗೆ 1436 ಎಲೆಕ್ಟ್ರಿಕ್‌ ಬಸ್ಸುಗಳು ಕಾರ್ಯಾಚರಣೆಗೆ ನಿಯೋಜಿಸಲಾಗಿರುತ್ತದೆ. ವಿವರಗಳು ಕೆಳಕಂಡಂತಿದೆ: 

SL. No. Type of bus Company No. of buses
01 9m, Non-AC M/s.NTPC Vidyut Vypura Nigam Ltd. 90
02 12m, Non-AC M/s. Switch Mobility Automotive Ltd. 300
03 12m, Non-AC M/s. TML Smart City Mobility  Solutions  Ltd. 921
04 12m, AC M/s. Ohm Global Mobility   Ltd. 125 (out of 320)
Total 1436

ಒಟ್ಟಾರೆಯಾಗಿ, ಬೆಂ.ಮ.ಸಾ.ಸಂಸ್ಥೆಯು ಪ್ರತಿ ದಿನ 1436 ಎಲೆಕ್ಟ್ರಿಕ್‌ ಬಸ್ಸುಗಳನ್ನು ಆಚರಣೆ ಮಾಡುವ ಮೂಲಕ, ಸುಮಾರು 2.07 ಲಕ್ಷ ಕೆ.ಜಿ CO2  (ಇಂಗಾಲದ ಡೈ ಆಕ್ಸೈಡ್) ವಾತಾವರಣಕ್ಕೆ ಬಿಡುಗಡೆಯಾಗುವುದನ್ನು ತಡೆಗಟ್ಟುತಿದ್ದು, ಹಾಗೂ ಸುಮಾರು 77 ಸಾವಿರ ಲೀಟರ್‌ ಇಂಧನವನ್ನುಉಳಿತಾಯ ಮಾಡುತ್ತಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಹೆಚ್ಚುವರಿಯಾಗಿ, M/s TML Smart City Mobility Solutions Ltd., ಕಂಪನಿಯ 148 ಸಾಮಾನ್ಯ (ಹವಾನಿಯಂತ್ರಿತವಲ್ಲದ) ಎಲೆಕ್ಟ್ರಿಕ್‌  ಬಸ್ಸುಗಳು ಸೇರ್ಪಡೆಗೊಳ್ಳುತ್ತಿವೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು, ಸದರಿ ಎಲೆಕ್ಟ್ರಿಕ್‌ ಬಸ್ಸುಗಳನ್ನು ಜಿ.ಸಿ.ಸಿ ಮಾದರಿಯಲ್ಲಿ (Gross Cost Contract), ಪ್ರತಿ ಕಿ.ಮೀ ರೂ 41.01 ರಂತೆ ವಿದ್ಯುತ್‌ ದರವು ಒಳಗೊಂಡಂತೆ 12 ವರ್ಷಗಳ ಅವಧಿಗೆ ಆಚರಣೆ ಮಾಡಲು ಒಪ್ಪಂದವಿರುತ್ತದೆ. Directorate of Urban & Land Transport (DULT) ಹಾಗೂ National Clean Air Programme (NCAP) ರವರಿಂದ ಪ್ರತಿ ಬಸ್ಸಿಗೆ ರೂ. 39.08 ಲಕ್ಷಗಳಂತೆ ಹಣಕಾಸಿನ ನೆರವು ಒದಗಿಸಲಾಗಿರುತ್ತದೆ.

ಗೌರವಾನ್ವಿತ ಸಾರಿಗೆ ಹಾಗೂ ಮುಜರಾಯಿ ಸಚಿವರು, ಕರ್ನಾಟಕ ಸರ್ಕಾರ ರವರು M/s TML Smart City Mobility Solutions Ltd., ರವರ 10 ಸಾಮಾನ್ಯ (ಹವಾನಿಯಂತ್ರಿತವಲ್ಲದ) ಎಲೆಕ್ಟ್ರಿಕ್‌  ಬಸ್ಸುಗಳನ್ನು, ಮೊದಲ ಹಂತದಲ್ಲಿ, ಇಂದು ಉಧ್ಘಾಟಿಸಿರುತ್ತಾರೆ.

ಸಾಮಾನ್ಯ (ಹವಾನಿಯಂತ್ರಿತವಲ್ಲದ)  ಮಾದರಿಯ ಟಾಟಾ ತಯಾರಿಕೆಯ ಎಲೆಕ್ಟ್ರಿಕ್‌ ಬಸ್ಸುಗಳ ವೈಶಿಷ್ಟ್ಯತೆಗಳು

  • ಬಹುತೇಕ ಶೂನ್ಯ ಹೊರ ಸೂಸುವಿಕೆ ಹಾಗೂ ಪರಿಸರ ಸ್ನೇಹಿ ಬಸ್ಸುಗಳು.
  • 12m length, low floor (400mm) height ಹವಾನಿಯಂತ್ರಿತವಲ್ಲದ ವಿದ್ಯುತ್‌ ಚಾಲಿತ ಬಸ್ಸುಗಳಾಗಿರುತ್ತವೆ.
  • ಒಂದು ಭಾರಿ ಛಾರ್ಜ್‌ಗೆ 200 ಕಿ.ಮೀ ಚಲಿಸುವ ಭರವಸೆವಿರುತ್ತದೆ.
  • ಎಲ್ಲಾ 148 ಬಸ್ಸುಗಳು ಘಟಕ-04 (ಜಯನಗರ) ರಿಂದ ಆಚರಣೆಯಾಗಲಿದೆ.
  • “Opportunity Charging” ವ್ಯವಸ್ಥೆಯನ್ನು “ಕೆಂಪೇಗೌಡ ಬಸ್‌ ನಿಲ್ದಾಣ”, “ಕೆ ಆರ್‌ ಮಾರ್ಕೆಟ್‌”, “ಶಿವಾಜಿನಗರ ಬಸ್‌ ನಿಲ್ದಾಣ”, “ಬನ್ನೇರುಘಟ್ಟ ಟಿ ಟಿ ಎಂ ಸಿ” , “ಬಿ ಟಿ ಎಂ ಬಸ್‌ ನಿಲ್ದಾಣ”, ಹೆಬ್ಬಾಳ ಹಾಗೂ “ಮಲ್ಲಸಂದ್ರ ಬಸ್‌ ನಿಲ್ದಾಣ” ಗಳಲ್ಲಿ ಕಲ್ಪಿಸಲಾಗಿದೆ.
  • 35 ಪ್ರಯಾಣಿಕ ಆಸನಗಳ ಸಾಮರ್ಥ್ಯ ಹೊಂದಿದ್ದು, 1 ಗಾಲಿ ಕುರ್ಚಿ (wheel chair) ಗೆ ಅವಕಾಶವಿರುತ್ತದೆ.
  • ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ಬಸ್ಸಿನ ಒಳಭಾಗದಲ್ಲಿ 3 ಕ್ಯಾಮೆರಾಗಳನ್ನು ಹಾಗೂ ಚಾಲಕರಿಗೆ ಹಿಮ್ಮುಖವಾಗಿ ಚಲಿಸಲು ಅನುಕೂಲವಾಗುವಂತೆ 1 ಕ್ಯಾಮೆರಾ ಬಸ್ಸಿನ ಹಿಂಬದಿ ಅಳವಡಿಸಲಾಗಿರುತ್ತದೆ.
  • 298 kwh ಬ್ಯಾಟರಿ ಸಾಮರ್ಥ್ಯ ಹೊಂದಿರುತ್ತದೆ.
  • 4 ಎಲ್.ಇ.ಡಿ ಬೋರ್ಡ್‌ ಮತ್ತು ವಾಯ್ಸ್‌ ಅನೌನ್ಸ್ ಮೆಂಟ್‌ ವ್ಯವಸ್ಥೆ ಕಲ್ಪಿಸಲಾಗಿದೆ.
  • ಮಹಿಳೆಯರ ಸುರಕ್ಷತೆಗೆ 10 ತುರ್ತು ಪ್ಯಾನಿಕ್‌ ಅಲಾರ್ಮ್‌ ಬಟನ್‌ಗಳನ್ನು ಅಳವಡಿಸಲಾಗಿರುತ್ತದೆ.
  • ಅಗ್ನಿ ಅವಘಡಗಳನ್ನು ತಪ್ಪಿಸುವ ಸಲುವಾಗಿ “ಅಗ್ನಿ ಪತ್ತೆ ಹಾಗೂ ಎಚ್ಚರಿಕೆ ವ್ಯವಸ್ಥೆ” (FDAS-Fire Detection and Alarm System) ಒದಗಿಸಲಾಗಿರುತ್ತದೆ.
  • ವಾಹನಗಳ ಮೇಲೆ ನಿರಂತರವಾಗಿ ನಿಗಾಯಿಡಲು ವಾಹನದ ಸ್ಥಳ ಸೂಚಿಸುವ ವ್ಯವಸ್ಥೆ ಒದಗಿಸಲಾಗಿರುತ್ತದೆ.
  • ಹಿರಿಯ ನಾಗರೀಕರು, physically challenged persons ಹಾಗೂ ಗಾಲಿ ಕುರ್ಚಿ (Wheel chair) ಪ್ರಯಾಣಿಕರು ಸುಲಭವಾಗಿ ಮತ್ತು ಸುರಕ್ಷಿತವಾಗಿ ಬಸ್ಸಿನ ಒಳ ಬರಲು ಮತ್ತು ಹೊರ ಹೋಗಲು ಅನುಕೂಲವಾಗುವಂತೆ, ಬಸ್ಸಿನ ಎಡಭಾಗವು ಬಾಗುವ (kneeling option mechanism) ವ್ಯವಸ್ಥೆಯನ್ನು ಹೊಂದಿರುತ್ತದೆ.
  • ಅನಿವಾರ್ಯ ಸಂದರ್ಭಗಳಲ್ಲಿ ಪ್ರಯಾಣಿಕರು ನಿಲುಗಡೆ ಕೋರಲು ಸ್ಟಾಪ್‌ ಬಟನ್ ಗಳನ್ನು ಒದಗಿಸಲಾಗಿರುತ್ತದೆ.
  • ಮುಂದೆ ಮತ್ತು ಮಧ್ಯದಲ್ಲಿ ಸ್ವಯಂಚಾಲಿತ ಬಾಗಿಲುಗಳನ್ನು ಒದಗಿಸಲಾಗಿರುತ್ತದೆ.
  • ಆರಾಮದಾಯಕ ಪ್ರಯಾಣಕ್ಕಾಗಿ ಹಿಂಬದಿಯಲ್ಲಿ ಏರ್‌ ಸಸ್ಪೆನ್ಷನ್‌ ವ್ಯವಸ್ಥೆ ಒದಗಿಸಲಾಗಿರುತ್ತದೆ.
  • ವಾಹನದ ಬ್ರೇಕಿಂಗ್‌ ಶಕ್ತಿ ಪುನರುತ್ಪಾದಕ ವ್ಯವಸ್ಥೆಯನ್ನು ಹೊಂದಿರುತ್ತದೆ.

ಬೆಂ.ಮ.ಸಾಸಂಸ್ಥೆಯ ವಾಹನ ಬಲವನ್ನು ವಿದ್ಯುಧೀಕರಣಗೊಳಿಸಲು, ಪ್ರಸ್ತುತ ಪ್ರಗತಿಯಲ್ಲಿರುವ ಯೋಜನೆಗಳು ಕೆಳಕಂಡಂತಿದೆ.

  • ಮೆ|| Ohm Global Mobility ರವರಿಂದ 12 ಮೀ. ಉದ್ದವಿರುವ ಹವಾನಿಯಂತ್ರಿತ ಮಾದರಿಯ, 195 ಎಲೆಕ್ಟ್ರಿಕ್‌ ಬಸ್ಸುಗಳು (320 ಬಸ್ಸುಗಳ ಉಳಿಕೆ) ಹಂತ ಹಂತವಾಗಿ ಸೇರ್ಪಡೆಯಾಗಲಿದೆ. ಒಟ್ಟಾರೆ ವರ್ಷಾಂತ್ಯದೊಳಗೆ 1779 ಎಲೆಕ್ಟ್ರಿಕ್‌ ಬಸ್ಸುಗಳು ಕಾರ್ಯಾಚರಣೆಯಲ್ಲಿರುತ್ತದೆ.
  • PM E-Drive ಯೋಜನೆಯಡಿಯಲ್ಲಿ 400 ಹವಾನಿಯಂತ್ರಿತ ಹಾಗೂ 4100 ಸಾಮಾನ್ಯ (ಹವಾನಿಯಂತ್ರತಿತವಲ್ಲದ) ಎಲೆಕ್ಟ್ರಿಕ್‌ ಬಸ್ಸುಗಳನ್ನು ನಿಯೋಜಿಸಲಾಗುತ್ತದೆ.

Express ಸೇವೆಗಳನ್ನು ಪರಿಚಯಿಸುತ್ತಿರುವ ಬಗ್ಗೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ Express ಸೇವೆ (Limited Stop Service) ಗಳನ್ನು ದಿನಾಂಕ: 11.07.2025 ರಿಂದ ಜಾರಿಗೆ ಬರುವಂತೆ ಪರಿಚಯಿಸುತ್ತಿದ್ದು, ಮಾರ್ಗಗಳ ವಿವರಗಳು ಕೆಳಕಂಡಂತೆ ಇರುತ್ತವೆ.

ಹವಾನಿಯಂತ್ರಣರಹಿತ ಸೇವೆಗಳ ಮಾಹಿತಿ

ಕ್ರ. ಸಂ. ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ ಒಟ್ಟು ಅನುಸೂಚಿ ಗಳು ಒಟ್ಟು ಸುತ್ತುವಳಿಗಳು ವೇಳಾ ಪಟ್ಟಿ ಅಂತರ  

ರೂ.ಗಳಲ್ಲಿ (ಟೋಲ್ ಶುಲ್ಕದೊಂದಿಗೆ)

1 Ex-226N ಕೆಂಪೇಗೌಡ ಬಸ್‌ ನಿಲ್ದಾಣ ಬಿಡದಿ 8 54 0:25 45.0
2 Ex-356KA ಕೆಂಪೇಗೌಡ ಬಸ್‌ ನಿಲ್ದಾಣ ಆನೇಕಲ್‌ 8 64 0:25 58.0
3 Ex-285M ಕೆಂಪೇಗೌಡ ಬಸ್‌ ನಿಲ್ದಾಣ ದೊಡ್ಡಬಳ್ಳಾಪುರ 10 54 0:30 65.0
4 Ex-258DK ಕೆಂಪೇಗೌಡ ಬಸ್‌ ನಿಲ್ದಾಣ ದಾಬಸ್‌ಪೇಟೆ 10 60 0:30 72.0
5 Ex-317HT ಟಿನ್‌ಫ್ಯಾಕ್ಟರಿ ಹೊಸಕೋಟೆ 8 116 0:30 36.0
      ಒಟ್ಟು 44 348    

ಹವಾನಿಯಂತ್ರಿತ ಸೇವೆಗಳ ಮಾಹಿತಿ

ಕ್ರ. ಸಂ. ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ ಒಟ್ಟು ಅನುಸೂಚಿ ಗಳು ಒಟ್ಟು ಸುತ್ತುವಳಿಗಳು ವೇಳಾ ಪಟ್ಟಿ ಅಂತರ  

ರೂ.ಗಳಲ್ಲಿ (ಟೋಲ್ ಶುಲ್ಕದೊಂದಿಗೆ)

1 Ex-V285M ಕೆಂಪೇಗೌಡ ಬಸ್‌ ನಿಲ್ದಾಣ ದೊಡ್ಡಬಳ್ಳಾಪುರ 13 76 0:20 75.0
2 Ex-V500D ಹೆಬ್ಬಾಳ ಸೆಂಟ್ರಲ್‌ ಸಿಲ್ಕ್‌ ಬೋರ್ಡ್ 10 68 0:20 70.0
ಒಟ್ಟು 23 144  

ಹೊಸದಾಗಿ ಹವಾನಿಯಂತ್ರಿತ ದಿವ್ಯ ದರ್ಶನ-5 ಮತ್ತು ದಿವ್ಯ ದರ್ಶನ-6 ಪ್ರವಾಸ ಪ್ಯಾಕೇಜ್ ಸೇವೆಗಳನ್ನು ಪರಿಚಯಿಸುತ್ತಿರುವ ಬಗ್ಗೆ.

 ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ, ಸುರಕ್ಷಿತ ಹಾಗೂ ವಿಶ್ವಾಸಾರ್ಹ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ.

 ಬೆಂಗಳೂರಿನ ಸುತ್ತಮುತ್ತಲಿನ ಈ ಕೆಳಕಂಡ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ಬೆಂ.ಮ.ಸಾ.ಸಂಸ್ಥೆಯು “ದಿವ್ಯ ದರ್ಶನ-5 ಮತ್ತು ದಿವ್ಯ ದರ್ಶನ-6” ಎಂಬ ಹೆಸರಿನಡಿಯಲ್ಲಿ ವಿವಿಧ ಮಾರ್ಗಗಳಿಂದ ಎರಡು ಬಸ್ಸುಗಳನ್ನು ಪ್ರಾರಂಭಿಸಲಾಗುವುದು. ವಾರಾಂತ್ಯ ದಿನಗಳಾದ ಶನಿವಾರ, ಭಾನುವಾರ ಹಾಗೂ ಸಾರ್ವತ್ರಿಕ ರಜೆ ದಿನಗಳಂದು ಹವಾನಿಯಂತ್ರಿತ ಬಸ್ಸಿನೊಂದಿಗೆ ಪ್ರವಾಸಿ ಸಾರಿಗೆ ಸೌಲಭ್ಯವನ್ನು ಪ್ರಾರಂಭಿಸುತ್ತಿದ್ದು, ವಿವರಗಳು ಕೆಳಕಂಡಂತಿದೆ :

ಕ್ರ. ಸಂ ಮಾರ್ಗ ಸಂಖ್ಯೆ ಪ್ರಾರಂಭವಾಗುವ ಸ್ಥಳ & ಸಮಯ ಪ್ರವಾಸದ ಅವಧಿಯಲ್ಲಿ ಸಂದರ್ಶಿಸುವ ಸ್ಥಳಗಳು ಹಿಂದಿರುಗುವ ಸ್ಥಳ & ಸಮಯ ಒಟ್ಟು ಪ್ರಯಾಣ ದರ (ಜಿಎಸ್‌ಟಿ ಸೇರಿ) (ಪ್ರತಿ ಆಸನಕ್ಕೆ)
1 “ದಿವ್ಯ ದರ್ಶನ-5” ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ದಿಂದ   ಬೆಳಿಗ್ಗೆ 9:00 1) ಶ್ರೀ ನಾಗೇಶ್ವರ ದೇವಸ್ಥಾನ ಬೆಗೂರು ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ರಾತ್ರಿ 19:30 ಕ್ಕೆ
2) ಶ್ರೀ ಕೋಟೆ ತಿಮ್ಮರಾಯ ಸ್ವಾಮಿ ದೇವಸ್ಥಾನ ಬೆಟ್ಟದಾಸನಪುರ
3) ಶ್ರೀ ಮದ್ದೂರಮ್ಮ ದೇವಸ್ಥಾನ ಹುಸ್ಕೂರು, ವಯಸ್ಕರು-ರೂ.500/-
4) ಶ್ರೀ ವರದರಾಜ ಸ್ವಾಮಿ ಚೌಡೇಶ್ವರಿ ನಾರಾಯಣಘಟ್ಟ ಮಕ್ಕಳಿಗೆ-ರೂ.375/-
5) ಶ್ರೀ ಸುಶೀಲ್‌ ದಾಮ್‌-ಜೈನ್‌ ದೇವಸ್ಥಾನ ಗುಡ್ಡಟ್ಟಿ ಗೇಟ್‌
6) ಶ್ರೀ ಭೂ ವರಹ ಸ್ವಾಮಿ ದೇವಸ್ಥಾನ‌, ಮುಗಳೂರು
7) ಚಿಕ್ಕತಿರುಪತಿ
8) ಶ್ರೀ ಶನೇಶ್ವರ ದೇವಸ್ಥಾನ ಗುಂಜೂರು
9) ಶ್ರೀ ಜಗನ್ನಾತ ದೇವಸ್ಥಾನ ಅಗರ

  

ಕ್ರ. ಸಂ ಮಾರ್ಗ ಸಂಖ್ಯೆ ಪ್ರಾರಂಭವಾಗುವ ಸ್ಥಳ & ಸಮಯ ಪ್ರವಾಸದ ಅವಧಿಯಲ್ಲಿ ಸಂದರ್ಶಿಸುವ ಸ್ಥಳಗಳು ಹಿಂದಿರುಗುವ ಸ್ಥಳ & ಸಮಯ ಒಟ್ಟು ಪ್ರಯಾಣ ದರ (ಟೋಲ್‌+ಜಿಎಸ್‌ಟಿ ಸೇರಿ) (ಪ್ರತಿ ಆಸನಕ್ಕೆ)
  ಕೆಂಪೇಗೌಡ ಬಸ್‌ ನಿಲ್ದಾಣ  ಬೆಳಿಗ್ಗೆ 9:00 1) ಶ್ರೀ ಸರ್ಕಲ್‌ ಮಾರಮ್ಮ ದೇವಸ್ಥಾನ ಮಲ್ಲೇಶ್ವರ, ಕೆಂಪೇಗೌಡ ಬಸ್‌ ನಿಲ್ದಾಣ  ಸಂಜೆ 18:00 ರೂ.550/-
  2) ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ವಿದ್ಯಾರಣ್ಯಪುರ
  3) ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಅಟ್ಟೂರು ಲೇಔಟ್
  4)ಶ್ರೀ ಶ್ರೀನಿವಾಸ ದೇವಸ್ಥಾನ ಎನ್‌ಇಎಸ್
2  “ದಿವ್ಯ ದರ್ಶನ”-6     5)ಶ್ರೀ ತಿಮ್ಮರಾಯ ಸ್ವಾಮಿ ದೇವಸ್ಥಾನ ಆವತಿ,
6)ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನ ಆವತಿ
7) ಜೈನ್ ದೇವಸ್ಥಾನ ದೇವನಹಳ್ಳಿ
8) ಶ್ರೀ ಲಕ್ಷ್ಮೀ ಭೂ ವರಹ ಸ್ವಾಮೀ ದೇವಸ್ಥಾನ (ಶ್ರೀ ಆನಂದ ಗುರೂಜಿ ಆಶ್ರಮ)

ಮೇಲ್ಕಂಡ Tour package ಸೇವೆಗಳ ಎಲ್ಲಾ ಸ್ಥಳಗಳನ್ನು ಒಂದೇ ದಿನದಲ್ಲಿ ಒಂದೇ ಬಸ್ಸಿನ ಮೂಲಕ ಸಂದರ್ಶಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ www.mybmtc.com & www.ksrtc.in ಸಂಪರ್ಕಿಸುವುದು.

ಡಿಫೆನ್ಸ್ ಕಾರಿಡಾರ್ ಸಂಬಂಧ ಸದ್ಯದಲ್ಲೇ ಪ್ರಧಾನಿ ಭೇಟಿ: ಸಚಿವ ಎಂ.ಬಿ.ಪಾಟೀಲ

ರಾಜ್ಯದ ಕಾರ್ಮಿಕರಿಗೆ ಸಿಹಿಸುದ್ದಿ : ನಾಳೆ `ಸ್ಮಾರ್ಟ್ ಕಾರ್ಡ್’ ವಿತರಣೆ

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ಬೀದಿ ನಾಯಿಗಳಿಗೆ ಬಿರಿಯಾನಿ ನೀಡ್ತೀವಿ ಎಂಬುದು ಬಿಬಿಎಂಪಿಯ ಲೂಟಿ ಪ್ಲಾನ್: ಆರ್.ಅಶೋಕ್

12/07/2025 5:08 PM2 Mins Read

KSRTC ಮುಡಿಗೇರಿದ ಮತ್ತೊಂದು ಕಿರೀಟ: ET HRWorld Employee Experience ರಾಷ್ಟ್ರೀಯ ಪ್ರಶಸ್ತಿ

12/07/2025 5:06 PM1 Min Read

BREAKING : ಶೇ. ಇಷ್ಟು ಪರ್ಸೆಂಟ್ ತೆರಿಗೆ ಕಟ್ಟಿದ್ರೆ ಸಾಕು : ಬೇಕರಿ, ಕಾಂಡಿಮೆಂಟ್ಸ್, ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ವಾಣಿಜ್ಯ ಇಲಾಖೆ

12/07/2025 4:55 PM2 Mins Read
Recent News

ಬೆಂಗಳೂರಲ್ಲಿ ಬೀದಿ ನಾಯಿಗಳಿಗೆ ಬಿರಿಯಾನಿ ನೀಡ್ತೀವಿ ಎಂಬುದು ಬಿಬಿಎಂಪಿಯ ಲೂಟಿ ಪ್ಲಾನ್: ಆರ್.ಅಶೋಕ್

12/07/2025 5:08 PM

KSRTC ಮುಡಿಗೇರಿದ ಮತ್ತೊಂದು ಕಿರೀಟ: ET HRWorld Employee Experience ರಾಷ್ಟ್ರೀಯ ಪ್ರಶಸ್ತಿ

12/07/2025 5:06 PM

BIGG NEWS : ಭಾರತೀಯ ವಿಮಾನಯಾನ ಉದ್ಯಮಕ್ಕೆ ಭಾರೀ ನಷ್ಟ ; ಸರಿಸುಮಾರು ₹3,000 ಕೋಟಿ ಲಾಸ್

12/07/2025 5:04 PM

BREAKING : ಶೇ. ಇಷ್ಟು ಪರ್ಸೆಂಟ್ ತೆರಿಗೆ ಕಟ್ಟಿದ್ರೆ ಸಾಕು : ಬೇಕರಿ, ಕಾಂಡಿಮೆಂಟ್ಸ್, ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ವಾಣಿಜ್ಯ ಇಲಾಖೆ

12/07/2025 4:55 PM
State News
KARNATAKA

ಬೆಂಗಳೂರಲ್ಲಿ ಬೀದಿ ನಾಯಿಗಳಿಗೆ ಬಿರಿಯಾನಿ ನೀಡ್ತೀವಿ ಎಂಬುದು ಬಿಬಿಎಂಪಿಯ ಲೂಟಿ ಪ್ಲಾನ್: ಆರ್.ಅಶೋಕ್

By kannadanewsnow0912/07/2025 5:08 PM KARNATAKA 2 Mins Read

ಬೆಂಗಳೂರು: ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆ ಲೂಟಿ ಮಾಡುವ ಉದ್ದೇಶವನ್ನು ಹೊಂದಿದೆ. ಇದು ಹಣ ಕೊಳ್ಳೆ ಹೊಡೆಯುವ ಸ್ಕೀಮ್‌ ಎಂದು…

KSRTC ಮುಡಿಗೇರಿದ ಮತ್ತೊಂದು ಕಿರೀಟ: ET HRWorld Employee Experience ರಾಷ್ಟ್ರೀಯ ಪ್ರಶಸ್ತಿ

12/07/2025 5:06 PM

BREAKING : ಶೇ. ಇಷ್ಟು ಪರ್ಸೆಂಟ್ ತೆರಿಗೆ ಕಟ್ಟಿದ್ರೆ ಸಾಕು : ಬೇಕರಿ, ಕಾಂಡಿಮೆಂಟ್ಸ್, ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ವಾಣಿಜ್ಯ ಇಲಾಖೆ

12/07/2025 4:55 PM

ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ FDA ನೌಕರ ಚಿಕಿತ್ಸೆ ಫಲಿಸದೇ ಸಾವು

12/07/2025 4:29 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.