ಬೆಂಗಳೂರಲ್ಲಿ : ಬೆಂಗಳೂರಿನಲ್ಲಿ ಘೋರ ಘಟನೆ ನಡೆದಿದ್ದು, ಪತಿಯಿಂದಲೇ ಕಿರುತೆರೆ ನಟಿಗೆ ಚಾಕು ಇರಿದಿರುವ ಘಟನೆ ನಡೆದಿದೆ. ಶೀಲಾ ಶಂಕಿಸಿ ಮಂಜುಳಾ ಅಲಿಯಾಸ್ ಶ್ರುತಿಗೆ ಪತಿ ಅಮರೇಶ್ ಚಾಕು ಇರಿದಿರುವ ಘಟನೆ ನಡೆದಿದೆ.
ಕಳೆದ ಜುಲೈ ನಾಲ್ಕರಂದು ಮುನೇಶ್ವರ ಲೇಔಟ್ ನಲ್ಲಿ ಈ ಒಂದು ಘಟನೆ ನಡೆದಿದೆ. ಅಮೃತಧಾರೆ ಸೇರಿದಂತೆ ಹಲವು ಧಾರವಾಹಿಗಳಲ್ಲಿ ಶ್ರುತಿ ನಟಿಸಿದ್ದಾರೆ. ಅಮರೇಶ್ ಎಂಬುವವರನ್ನು ಶ್ರುತಿ ಪ್ರೀತಿಸಿ ಮದುವೆಯಾಗಿದ್ದರು. ಅಮರೇಶ್ ಕಿರುಕುರೆ ನಟಿ ಶೃತಿಗೆ ಇಬ್ಬರು ಮಕ್ಕಳು ಇದ್ದಾರೆ. ಹನುಮಂತನಗರದಲ್ಲಿ ದಂಪತಿಗಳು ಮನೆ ಪಡೆದು ಅಲ್ಲಿಯೇ ವಾಸವಿದ್ದರು. ನಂತರ ಶೃತಿ ನಡವಳಿಕೆಯ ಬಗ್ಗೆ ಪ್ರತಿ ಅಂಬರೀಷ್ಗೆ ಇಷ್ಟವಾಗುತ್ತಿರಲಿಲ್ಲ.
ಅಮರೇಶ್ ಮತ್ತು ಶ್ರುತಿ ನಡುವೆ ಹೊಂದಾಣಿಕೆ ಕೂಡ ಸರಿ ಇರಲಿಲ್ಲ. ಹೀಗಾಗಿ ಗಂಡನಿಂದ ಶ್ರುತಿ ದೂರವಾಗಿ ಅಣ್ಣನ ಮನೆಯಲ್ಲಿ ಇದ್ದರು. ಕಳೆದ ಏಪ್ರಿಲ್ ನಲ್ಲಿ ನಟಿ ಶ್ರುತಿ ಪತಿ ಅಮರೇಶ್ ನಿಂದ ದೂರವಾಗಿದ್ದರು. ಇದರ ನಡುವೆ ಮನೆಯಲ್ಲಿ ಹಣಕ್ಕಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಈ ಕುರಿತು ಶ್ರುತಿ ಹನುಮಂತನಗರ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದರು.ಇದೀಗ ಈ ವಿಚಾರವಾಗಿ ಪತಿ ಅಮರೇಶ್ ನಟಿ ಶೃತಿಗೆ ಚಾಕು ಇರಿದಿರುವ ಘಟನೆ ವರದಿಯಾಗಿದೆ