ಹರಿಯಾಣ: ರಾಜ್ಯದಲ್ಲಿ ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಹಿಸಾರ್ ಜಿಲ್ಲೆಯ ಹಳ್ಳಿಯ ಖಾಸಗಿ ಶಾಲೆಯಲ್ಲಿ ಪ್ರಾಂಶುಪಾಲರನ್ನು ಇರಿದು ಕೊಂದ ಘಟನೆ ನಡೆದಿದೆ. ಸರಿಯಾದ ಕ್ಷೌರ ಮಾಡದ ಮತ್ತು ಶಿಸ್ತನ್ನು ಪಾಲಿಸದಿದ್ದಕ್ಕಾಗಿ ಪದೇ ಪದೇ ಖಂಡಿಸಿದ್ದಕ್ಕಾಗಿ ಕೋಪಗೊಂಡ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಪ್ರಾಂಶುಪಾಲರನ್ನೇ ಚಾಕುವಿನಿಂದ ಇರಿದು ಕೊಂದಿದಿರುವಂತ ಘಟನೆ ನಡೆದಿದೆ.
ಸುದ್ದಿ ಸಂಸ್ಥೆ IANS ಪ್ರಕಾರ, 11 ನೇ ತರಗತಿಯ ಒಬ್ಬ ಮತ್ತು 12 ನೇ ತರಗತಿಯ ಇನ್ನೊಬ್ಬ ವಿದ್ಯಾರ್ಥಿಗಳು ಪ್ರಾಂಶುಪಾಲ ಜಗ್ಬೀರ್ ಸಿಂಗ್ ಪನ್ನು ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಇರಿದಿದು ಕೊಂದಿದ್ದಾರೆ.
ಸ್ಥಳೀಯ ಪೊಲೀಸರು ಸ್ಥಳಕ್ಕೆ ತಲುಪಿ ಈ ಘಟನೆಯ ತನಿಖೆ ಆರಂಭಿಸಿದ್ದಾರೆ. ನರ್ನೌಂಡ್ ಉಪವಿಭಾಗದ ಬಾಸ್ ಗ್ರಾಮದಲ್ಲಿರುವ ಕರ್ತಾರ್ ಸ್ಮಾರಕ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಈ ಅಪರಾಧ ನಡೆದಿದೆ.
ವರದಿಯ ಪ್ರಕಾರ, ದಾಳಿಯಲ್ಲಿ ಜಗ್ಬೀರ್ ಸಿಂಗ್ ಗಂಭೀರ ಗಾಯಗಳನ್ನು ಅನುಭವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರನ್ನು ಶಾಲಾ ಸಿಬ್ಬಂದಿ ಹಿಸಾರ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಚಿಕಿತ್ಸೆಯ ಫಲಿಸದೇ ಸಾವನ್ನಪ್ಪಿದರು.
ಪ್ರಾಥಮಿಕ ತನಿಖೆಯಲ್ಲಿ, ಸಿಂಗ್ ಇಬ್ಬರೂ ವಿದ್ಯಾರ್ಥಿಗಳಿಗೆ ಕೂದಲು ಕತ್ತರಿಸಿ ಶಾಲೆಯಲ್ಲಿ ಶಿಸ್ತನ್ನು ಪಾಲಿಸುವಂತೆ ಸೂಚಿಸಿದ್ದರು ಎಂದು ತಿಳಿದುಬಂದಿದೆ. ಇದರಿಂದ ಕೋಪಗೊಂಡ ಇಬ್ಬರೂ ಅಪ್ರಾಪ್ತ ವಯಸ್ಕರು ಪ್ರಾಂಶುಪಾಲರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಕೊಂದಿದ್ದಾರೆ. ಶಾಲಾ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಲು ಪ್ರಾರಂಭಿಸಿದ್ದು, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ, ಮರಣೋತ್ತರ ಪರೀಕ್ಷೆ ಮತ್ತು ವಿವರವಾದ ತನಿಖೆಯ ನಂತರವೇ ಕೊಲೆಗೆ ಕಾರಣ ಮತ್ತು ಸಂದರ್ಭಗಳು ಬಹಿರಂಗಗೊಳ್ಳಲಿವೆ ಎಂದು ಹೇಳಿದರು.
ಈ ಘಟನೆ ಶಾಲಾ ಆವರಣದೊಳಗೆ ನಡೆದಿದ್ದು, ಇದು ಇಡೀ ಪ್ರದೇಶವನ್ನು ಬೆಚ್ಚಿಬೀಳಿಸಿದೆ. ಇಡೀ ಗ್ರಾಮ ಉದ್ವಿಗ್ನವಾಗಿತ್ತು ಮತ್ತು ಜನರು ಆಘಾತ ವ್ಯಕ್ತಪಡಿಸಿದರು. ಗುರು ಪೂರ್ಣಿಮೆಯ ದಿನದಂದು ಈ ಅಪರಾಧ ನಡೆದಿದ್ದು, ಗುರು ಮತ್ತು ಶಿಷ್ಯರ ನಡುವಿನ ಸಂಬಂಧವನ್ನು ಗೌರವಿಸುವ ದಿನದ ಆಘಾತಕಾರಿ ಘಟನೆ ಇದಾಗಿದೆ.
ಅಪರಾಧದ ಬಗ್ಗೆ ಮಾಹಿತಿ ಬಂದ ತಕ್ಷಣ, ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದರು. ಘಟನೆಯ ನಂತರ ಇಬ್ಬರೂ ವಿದ್ಯಾರ್ಥಿಗಳು ಪರಾರಿಯಾಗಿದ್ದಾರೆ ಮತ್ತು ಅವರನ್ನು ಗುರುತಿಸಲಾಗಿದೆ. ಅವರು ಅಪ್ರಾಪ್ತ ವಯಸ್ಕರಾಗಿರುವುದರಿಂದ ಅವರ ಗುರುತನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ.
BREAKING: ಕಲಬುರ್ಗಿಯ ಗಾಣಗಾಪುರದ ದತ್ತನ ಸನ್ನಿಧಿಯಲ್ಲಿ ಭೀಕರ ಕಾಲ್ತುಳಿತ: ಓರ್ವ ಮಹಿಳೆ ಸಾವು, ಹಲವರಿಗೆ ಗಾಯ
ಕನ್ನಡವನ್ನು ಕಲಿತು ನಲಿಯಿರಿ, ಇಂಗ್ಲೀಷನ್ನು ವ್ಯವಹಾರಿಕ ಭಾಷೆಯಾಗಿ ಕಲಿಯಿರಿ: ವಕೀಲ ಹೆಚ್.ಬಿ ರಾಘವೇಂದ್ರ