ನವದೆಹಲಿ : ರಾಷ್ಟ್ರರಾಜಧಾನಿ ದೆಹಲಿ, ಹರಿಯಾಣ ಸೇರಿದಂತೆ ಉತ್ತರ ಭಾರತದಲ್ಲಿ ಬೆಳ್ಳಂಬೆಳಗ್ಗೆ ಭೂಕಂಪ ಸಂಭವಿಸಿದ್ದು, ಭಾರೀ ಭೂಕಂಪದಿಂದ ಜನರು ಭಯಭೀತರಾಗಿದ್ದಾರೆ.
ಬೆಳಗ್ಗೆ 9.04 ರ ಸುಮಾರಿಗೆದೆಹಲಿ, ನೋಯ್ಡಾ, ಗಾಜೀಯಾಬಾದ್ ಸೇರಿದಂತೆ ಹಲವಡೆ ಪ್ರಬಲ ಭೂಕಂಪ ಸಂಭವಿಸಿದ್ದು, 4.1 ತೀವ್ರತೆ ದಾಖಲಾಗಿದೆ.
ದೆಹಲಿ-ಎನ್ಸಿಆರ್ನಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ಗಾಜಿಯಾಬಾದ್, ನೋಯ್ಡಾ, ಗುರುಗ್ರಾಮ್ ಮತ್ತು ದೆಹಲಿಯಲ್ಲಿ ಜನರು ಕಂಪನದ ಅನುಭವವನ್ನು ಪಡೆದರು. ಬೆಳಿಗ್ಗೆ 9.04 ರ ಸುಮಾರಿಗೆ ಜನರು ಭೂಕಂಪದ ಕಂಪನದ ಅನುಭವವನ್ನು ಪಡೆದರು. ಜನರು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದರು.
ಹರಿಯಾಣದ ಜಜ್ಜರ್ನಲ್ಲಿ ಇಂದು ಬೆಳಿಗ್ಗೆ 9:04 ಕ್ಕೆ ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ. ದೆಹಲಿ-ಎನ್ಸಿಆರ್ನಲ್ಲಿ ಬಲವಾದ ಕಂಪನದ ಅನುಭವವಾಗಿದೆ.
Strong earthquake tremors felt in Delhi. Details awaited. pic.twitter.com/YTWfWzc16G
— ANI (@ANI) July 10, 2025
An earthquake with a magnitude of 4.4 on the Richter Scale hit Jhajjar, Haryana today at 9:04 am IST. Strong tremors felt in Delhi-NCR.
(Pic: National Center for Seismology (NCS) pic.twitter.com/wR3es0JJWh
— ANI (@ANI) July 10, 2025