ವಡೋದರಾ: 4 ದಶಕಗಳ ಹಳೆಯ ಸೇತುವೆ ಯೊಂದು ಕುಸಿದ ಪರಿಣಾಮ ವಾಹನ ಸಮೇತ ನದಿಗೆ ಬಿದ್ದ ಇಬ್ಬರು ಮಕ್ಕಳು ಸೇರಿ 13 ಜನರು ಸಾವನ್ನಪ್ಪಿದ ಭೀಕರ ಘಟನೆ ಗುಜರಾತ್‌ನಲ್ಲಿ ನಡೆದಿದೆ.
3 ವರ್ಷಗಳ ಹಿಂದೆ ಗುಜರಾತ್‌ನ ಮೋರ್ಬಿಯಲ್ಲಿ ಸೇತುವೆಯೊಂದು ಕುಸಿದು 135 ಜನರು ಸಾವನ್ನಪ್ಪಿದ್ದರು. ಅದರ ಬೆನ್ನ ಲ್ಲೇ ಈ ದುರ್ಘಟನೆ ಸಂಭವಿಸಿದೆ. ಘಟನೆ ಕುರಿತು ರಾಷ್ಟ್ರಪತಿ ದೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿಯಾಗಿ ಗಣ್ಯರು ಕಂಬನಿ ಮಿಡಿದಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಸ್ಥಳೀಯ ಆಡಳಿತ ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ಆರಂಭಿಸಲಾಯಿತು. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ವಡೋದರಾ ಜಿಲ್ಲೆಯ ಪದ್ರಾದಲ್ಲಿ ಬೆಳಿಗ್ಗೆ 7.30 ರ ಸುಮಾರಿಗೆ ಸೇತುವೆ ಕುಸಿದಿದೆ. ರಾಜ್ಯ ಹೆದ್ದಾರಿಯ ಉದ್ದಕ್ಕೂ ಮಹಿಸಾಗರ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಸೇತುವೆ ವಡೋದರಾ ಮತ್ತು ಆನಂದ್ ಅನ್ನು ಸಂಪರ್ಕಿಸುತ್ತದೆ.
ಮುಜ್ಪುರ್ ಗ್ರಾಮದ ಬಳಿ ಈ ಘಟನೆ ಸಂಭವಿಸಿದ್ದು, ಎರಡು ಟ್ರಕ್ಗಳು, ಒಂದು ಬೊಲೆರೊ ಜೀಪ್ ಮತ್ತು ಇನ್ನೊಂದು ಜೀಪ್ ದಾಟುತ್ತಿದ್ದಾಗ ಸೇತುವೆ ಇದ್ದಕ್ಕಿದ್ದಂತೆ ಕುಸಿದು ಬಿತ್ತು. ನಾಲ್ಕು ವಾಹನಗಳು ಕುಸಿತದ ಎರಡೂ ಬದಿಗಳಲ್ಲಿ ಹರಿಯುವ ಮಹಿಸಾಗರ್ ನದಿಗೆ ಉರುಳಿದವು. ಸ್ಥಳೀಯರು ಕೂಡಲೇ ಬೇಗನೆ ಜಮಾಯಿಸಿದರು ಮತ್ತು ರಕ್ಷಣಾ ಕಾರ್ಯಗಳು ತಕ್ಷಣವೇ ಪ್ರಾರಂಭವಾದವು.
वडोदरा और आणंद को जोड़ने वाला गंभीरा ब्रिज बीच में से टूटा
कई वाहने नदी में गीरे होने की संभावना, रेस्क्यू ओपरेशन जारी #Gujarat #bridgecollapse #rescue #BridgeCollaps #Bridge #Vadodara #Bridgecollapsed #Accident #Bridge #Vadodaraaccident #Live #ViralVideo@kathiyawadiii pic.twitter.com/M8mZapwAxP
— Sanskar Sojitra (@sanskar_sojitra) July 9, 2025