ಬೆಂಗಳೂರು : ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಿರುವ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ನೇತೃತ್ವದ ತಜ್ಞರ ಸಮಿತಿ ಇಂದು ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಲಿದೆ.
ಹೌದು, ರಾಜ್ಯಾದ್ಯಂತ ಹಠಾತ್ ಹೃದಯಾಘಾತ ದಿಂದ ನಿಧನ ಹೊಂದುತ್ತಿದ್ದ ಕಾರಣದಿಂದ ಕೊರೋನಾ ಸೋಂಕು ಹಾಗೂ ಲಸಿಕೆ ಅಡ್ಡ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ರವೀಂದ್ರನಾಥ್ ಸಮಿತಿ ರಚಿಸಿತ್ತು. ಮೇ-ಜೂನ್ ತಿಂಗಳಲ್ಲಿ ಹಾಸನ ಜಿಲ್ಲೆಯಲ್ಲಿ ಹೃದಯಾಘಾತಗಳು ಹೆಚ್ಚಾಗಿದ್ದರಿಂದ ಜು.2 ರಂದು ಇದೇ ತಜ್ಞರ ಸಮಿತಿಗೆ ಹಾಸನ ಪ್ರಕರಣಗಳ ಕುರಿತು ವರದಿ ನೀಡಲು ತಿಳಿಸಲಾಗಿತ್ತು.
ಸಮಿತಿ ಮೃತಪಟ್ಟಿರುವವರ ಮರಣೋತ್ತರ ವರದಿ ಸೇರಿ ಚಿಕಿತ್ಸಾ ವಿವರ ಸಂಗ್ರಹಿಸಿ ಅಧ್ಯಯನ ನಡೆಸಿದೆ. ಅಂತಿಮವಾಗಿ ಇಂದು ಹಾಸನದ ಪ್ರಕರಣಗಳ ವರದಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.