ಬೆಂಗಳೂರು: ಪರಿಶಿಷ್ಟ ಜಾತಿಯ ಸಮೀಕ್ಷಾ ಕರ್ತವ್ಯದ ವೇಳೆಯಲ್ಲಿ ಸ್ಟಿಕ್ಕರ್ ಅಂಟಿಸಿ ಸಮೀಕ್ಷೆ ನಡೆಸದೇ ಕಳ್ಳಾಟ ಮೆರೆದಿದ್ದಂತವರಿಗೆ ಅಮಾನತು ಶಿಕ್ಷೆ ವಿಧಿಸಲಾಗಿತ್ತು. ಹೀಗೆ ಬಿಬಿಎಂಪಿಯಿಂದ ವಿಧಿಸಿದ್ದಂತ ಐವರು ನೌಕರರ ಅಮಾನತು ಆದೇಶವನ್ನು ವಾಪಾಸ್ ಪಡೆಯಲಾಗಿದೆ.
ಹೌದು ಬಿಬಿಎಂಪಿಯ ಐವರು ನೌಕರರ ಅಮಾನತು ಆದೇಶವನ್ನು ಮುಖ್ಯ ಆಯುಕ್ತರು ಹಿಂಪಡೆದಿದ್ದಾರೆ. ಬಿಬಿಎಂಪಿಯ ಆರೋಗ್ಯಾಧಿಕಾರಿ ಶ್ರೀಜೇಶ್, ಕಿರಿಯ ಆರೋಗ್ಯ ಪರಿವೀಕ್ಷಕ ವಿಜಯ್ ಕುಮಾರ್, ಕಂದಾಯ ವಸೂಲಿದಾರರಾದ ಶಿವರಾಜ್ ಹಾಗೂ ಮಹಾದೇವ್ ಅವರ ಅಮಾನತು ಆದೇಶ ಹಿಂಪಡೆಯಲಾಗಿದೆ.
ಅಂದಹಾಗೇ ಈ ಐವರು ಅಧಿಕಾರಿಗಳನ್ನು ಸಮೀಕ್ಷಾ ಕಾರ್ಯ ನಡೆಸದೇ ಸ್ಟಿಕ್ಕರ್ ಮಾತ್ರವೇ ಅಂಟಿಸಿ ಕಳ್ಳಾಟ ಮಾಡಿದ್ದ ಆರೋಪದಡಿ ಅಮಾತುಗೊಳಿಸಲಾಗಿತ್ತು. ಇದೀಗ ಆ ಆಮಾನತು ಆದೇಶವನ್ನು ಬಿಬಿಎಂಪಿಯ ಮುಖ್ಯ ಆಯುಕ್ತರು ಹಿಂಪಡೆದು ಆದೇಶಿಸಿದ್ದಾರೆ.
ಬೈಜು ರವೀಂದ್ರನ್ ನ್ಯಾಯಾಂಗ ನಿಂದನೆ ಆರೋಪದಡಿ ದೋಷಿ ಎಂದು ಘೋಷಿಸಿದ ಅಮೇರಿಕಾ ನ್ಯಾಯಾಲಯ
BREAKING: ರಾಜ್ಯದಲ್ಲಿ ಬಂಧಿತ ಮೂವರು ಶಂಕಿತ ಉಗ್ರರಿಗೆ 6 ದಿನ NIA ಕಸ್ಟಡಿಗೆ ನೀಡಿ ಕೋರ್ಟ್ ಆದೇಶ