ಬೆಂಗಳೂರು : ಕಳೆದ ವರ್ಷ ಚಿತ್ರದುರ್ಗದ ರೇಣುಕಾ ಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ಜೈಲು ಸೇರಿದ್ದರು. ರೇಣುಕಾಸ್ವಾಮಿಯನ್ನು ಭೀಕರವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರ ಗೌಡ ಸೇರಿದಂತೆ ಹದಿನೇಳು ಆರೋಪಿಗಳು ಜೈಲು ಶಿಕ್ಷೆ ಅನುಭವಿಸಿದ್ದರು. ಇದೀಗ ಬೆಂಗಳೂರಿನಲ್ಲಿ ರೇಣುಕಾಸ್ವಾಮಿ ರೀತಿಯೇ ಅಮಾನುಷ ಕೃತ್ಯ ನಡೆದಿದ್ದು ಹುಡುಗಿಯ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ.
ಹೌದು ದರ್ಶನ್ ಗ್ಯಾಂಗ್ ರೀತಿ ಮತ್ತೊಂದು ಗ್ಯಾಂಗ್ ಈ ಕೃತ್ಯ ಎಸಗಿದ್ದು, ಹುಡುಗಿ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ ರೇಣುಕಾ ಸ್ವಾಮಿ ರೀತಿ ಮತ್ತೊಂದು ಅಮಾನುಷ ಕೃತ್ಯ ನಡೆದಿದ್ದು ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ರಾಕ್ಷಸರಂತೆ ವರ್ತಿಸಿದ ಇವರಿಗೆ ದರ್ಶನ್ ಸ್ಪೂರ್ತಿ ಎಂದು ಹೇಳಲಾಗುತ್ತಿದೆ.
ನೀನು ರೇಣುಕಾ ಸ್ವಾಮಿ ರೀತಿ ಸಾಯ್ತಿಯ ಎಂದು ಯುವಕನಿಗೆ ರೇಣುಕಾ ಸ್ವಾಮಿ ಹೆಸರಲ್ಲಿ ಹಲ್ಲೆ ಮಾಡಿದ್ದಾರೆ. ಒಬ್ಬನ ಮೇಲೆ 8 ರಿಂದ 10 ಜನ ದುಷ್ಕರ್ಮಿಗಳು ಮುಗಿಬಿದ್ದು ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಕೋಲುಗಳಿಂದ ಯುವಕನಿಗೆ ಮನಸೋ ಇಚ್ಛೆ ಥಳಿಸಿದ್ದಾರೆ.ಕಾಲುಗಳಿಂದ ಒದ್ದು ಕೈಯ್ಯಲ್ಲಿ ಗುದ್ದಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಯುವಕನನ್ನು ಬೆತ್ತಲೆ ಮಾಡಿದ್ದಾರೆ. ಯುವಕನ ಮರ್ಮಾಂಗ ತುಳಿದು ವಿಕೃತಿ ಮೆರೆದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಕಾಲೇಜಿಗೆ ಹೋಗುವಾಗ ಕುಶಾಲ್ ಮತ್ತು ಯುವತಿಯ ಮಧ್ಯೆ ಪ್ರೀತಿ ಶುರುವಾಗಿದ್ದು ಕೆಲವು ತಿಂಗಳ ಹಿಂದೆ ಎರಡು ವರ್ಷದ ಪ್ರೀತಿ ಮುರಿದು ಬಿದ್ದಿದೆ. ಈ ವೇಳೆ ಯುವತಿಗೆ ಬೇರೊಬ್ಬ ಹುಡುಗನ ಪರಿಚಯವಾಗಿತ್ತು. ಇದನ್ನು ಸಹಿಸಲಾಗಿದೆ ಯುವತಿಗೆ ಕುಶಾಲ್ ಅಶ್ಲೀಲ ಮೆಸೇಜ್ ಮಾಡಿದ್ದ. ಹಾಗಾಗಿ ಯುವತಿಯ ಗೆಳೆಯ ಮತ್ತು ಆತನ ಸ್ನೇಹಿತರು ಸೇರಿ ಕುಶಾಲನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವುದಾಗಿ ಕರೆಸಿ ಕಾರಿನಲ್ಲಿ ಅಪಹರಣ ಮಾಡಿದ್ದಾರೆ.
ಕುಶಾಲ್ ನನ್ನು ಅಪರಿಚಿತ ಸ್ಥಳಕ್ಕೆ ಕರೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಯುವಕನ ಬಟ್ಟೆಯಲ್ಲ ಬೆಚ್ಚಿ ಮರ್ಮಾಂಗಕ್ಕೆ ತುಳಿದು ವಿಕೃತಿ ಮೆರೆದಿದ್ದಾರೆ. ಕುಶಾಲ್ ಬಟ್ಟೆ ಬಿಚ್ಚಿ, ಹಲ್ಲೆ ಮಾಡಿ ಆರೋಪಿಗಳು ವಿಡಿಯೋ ಸಹ ಮಾಡಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್ ಅಂತೆ ಇದು ಆಗುತ್ತದೆ ಎಂದು ವಿಡಿಯೋ ಮಾಡಿದ್ದಾರೆ. ಅಲ್ಲದೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಘಟನೆ ಸಂಭಂದ ಪೊಲೀಸರು ಇದೀಗ ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಹೇಮಂತ್, ಯಶವಂತ್, ಶಿವಶಂಕರ್ ಮತ್ತು ಶಶಾಂಕ್ ಗೌಡ ಬಂದಿತ ಆರೋಪಿಗಳು ಎಂದು ತಿಳಿದು ಬಂದಿದೆ.
ಕಲಬುರ್ಗಿಯಲ್ಲೂ ರೇಣುಕಾಸ್ವಾಮಿ ರೀತಿಯ ಕೊಲೆ: ರಾಘವೇಂದ್ರ ನಾಯಕ್ ಬರ್ಬರ ಹತ್ಯೆ
ಜಿಲ್ಲೆಯಲ್ಲಿ ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿಯನ್ನು ಡಿ ಬಾಸ್ ಅಂಡ್ ಗ್ಯಾಂಗ್ ಹತ್ಯೆ ಮಾಡಿದ ರೀತಿಯಲ್ಲೇ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವಂತ ಘಟನೆ ನಡೆದಿದೆ.
ಕಲಬುರ್ಗಿಯಲ್ಲಿ ರೇಣುಕಾಸ್ವಾಮಿ ರೀತಿಯಲ್ಲೇ 39 ವರ್ಷದ ರಾಘವೇಂದ್ರ ನಾಯಕ್ ಎಂಬಾತನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮಾರ್ಚ್ 12ರಂದು ನಡೆದಿದ್ದಂತ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಅಶ್ವಿನಿ ಎಂಬಾಕೆಗೆ ರಾಘವೇಂದ್ರ ಎಂಬಾತ ಕಿರುಕುಳ ನೀಡುತ್ತಿದ್ದನು. ರಾಘವೇಂದ್ರ ಕಿರುಕುಳ ನೀಡುತ್ತಿರುವ ಬಗ್ಗೆ ಪ್ರಿಯಕರ ಗುರುರಾಜ್ ಗೆ ಅಶ್ವಿನಿ ತಿಳಿಸಿದ್ದರು. ಹೀಗಾಗಿ ರಾಘವೇಂದ್ರನನ್ನು ಗುರುರಾಜ್ ಮತ್ತು ಗ್ಯಾಂಗ್ ಕಿಡ್ನಾಪ್ ಮಾಡಿದೆ.
ರಾಘವೇಂದ್ರನನ್ನು ಕಿಡ್ನಪ್ ಮಾಡಿಕೊಂಡು ಸ್ಮಶಾನಕ್ಕೆ ಕರೆದೊಯ್ದು ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದಾಗಿ ರಾಘವೇಂದ್ರ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಇದೀಗ ಕಲಬುರ್ಗಿಯಲ್ಲಿ ರೇಣುಕಾಸ್ವಾಮಿ ಮಾದರಿಯಲ್ಲೇ ಬರ್ಬರವಾಗಿ ವ್ಯಕ್ತಿಯನ್ನು ಹತ್ಯೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.