ಬೆಂಗಳೂರು: ರಾಜ್ಯ ಸರ್ಕಾರವು ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ಕ್ಕೆ ಕಾನೂನು ಬಲ ನೀಡಲು ಮುಂದಾಗಿದೆ. ಒಂದು ವೇಳೆ ಬಾಲ್ಯ ವಿವಾಹ ನಿಷೇಧ ( ಕರ್ನಾಟಕ ತಿದ್ದುಪಡಿ) ಮಸೂದೆ-2025ಕ್ಕೆ ವಿಧಾನ ಮಂಡಲದಲ್ಲಿ ಮಂಡನೆಗೊಂಡು, ಒಪ್ಪಿಗೆ ಪಡೆದ್ರ, ಬಾಲಕ-ಬಾಲಕಿಯರ ನಿಶ್ಚಿತಾರ್ಥವೂ ಅಪರಾಧವಾಗಲಿದೆ.
ಹೌದು ಬಾಲ್ಯ ವಿವಾಹಗಳನ್ನು ಮಾಡಲು ಯತ್ನಿಸುವುದು, ಸಿದ್ಧತೆ ನಡೆಸುವ ಅಥವಾ ಚಿಕ್ಕ ವಯಸ್ಸಿನ ಬಾಲಕ-ಬಾಲಕಿಯರನ್ನು ಮದುವೆ ಉದ್ದೇಶದಿಂದ ನಿಶ್ಚಿತಾರ್ಥ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು, ಸರ್ಕಾರ ಬಾಲ್ಯ ವಿವಾಹ ನಿಷೇಧ ( ಕರ್ನಾಟಕ ತಿದ್ದುಪಡಿ) ಮಸೂದೆ-2025 ಅನ್ನು ಮುಂಬರುವಂತ ವಿಧಾನ ಮಂಡಲದ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿದೆ. ಈ ಮಸೂದೆಗೆ ಉಭಯ ಸದನಗಳಲ್ಲಿ ಒಪ್ಪಿಗೆ ದೊರೆತರೇ ನಿಶ್ಚಿತಾರ್ಥವೂ ಅಪರಾಧವಾಗಲಿದೆ.
ಅಂದಹಾಗೇ ಬಾಲ್ಯ ವಿವಾಹ ನಿಷೇಧ ( ಕರ್ನಾಟಕ ತಿದ್ದುಪಡಿ) ಮಸೂದೆ-2025ರ ಅನುಸಾರ ಬಾಲ್ಯ ವಿವಾಹ ಮಾಡೋದಕ್ಕೆ ಯತ್ನಿಸೋದು ಅಪರಾಧ. ಅಲ್ಲದೇ ಸಿದ್ಧತೆ ಅಥವಾ ಚಿಕ್ಕ ವಯಸ್ಸಿನ ಹುಡುಗ-ಹುಡುಗಿಗೆ ನಿಶ್ಚಿತಾರ್ಥ ಮಾಡುವವರ ವಿರುದ್ಧ 2 ವರ್ಷಗಳವರೆಗೆ ವಿಸ್ತರಿಸಬಹುದಾದಂತ ಕಠಿಣ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಇದಲ್ಲದೇ 1 ಲಕ್ಷದವರೆಗೆ ದಂಡವನ್ನು ವಿಧಿಸಬಹುದಾಗಿದೆ.