ಬೆಳಗಾವಿ: ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸೋ ಕೃತ್ಯ ಎನ್ನುವಂತೆ ಕೋರ್ಟ್ ಆವರಣದಲ್ಲೇ ವಕೀಲನ ಮೇಲೆ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿರುವಂತ ಘಟನೆ ನಡೆದಿದೆ.
ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು. ಈ ವಿಚಾರವಾಗಿ ವಕೀಲ ಜಹೀರ್ ಅಬ್ಬಾಸ್ ಹುಕ್ಕೇರಿ ಎಂಬುವರು ಪ್ರಶ್ನಿಸಿದ್ದರು. ಹೀಗೆ ಪ್ರಶ್ನಿಸಿದ್ದಕ್ಕೆ ಸೋಹಿಲ್ ಇನಾಮದಾರ್ ಸೇರಿದಂತೆ ಇಬ್ಬರು ಹಲ್ಲೆ ಮಾಡಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ.
ಬೆಳಗಾವಿಯ ಕೋರ್ಟ್ ಆವರಣದಲ್ಲೇ ವಕೀಲ ಜಹೀರ್ ಅಬ್ಬಾಸ್ ಹುಕ್ಕೇರಿಯ ಮೇಲೆ ಇಬ್ಬರು ಆರೋಪಿಗಳುಕಲ್ಲು, ರಾಡ್ ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ದುಷ್ಕರ್ಮಿಗಳ ಹಲ್ಲೆಯಿಂದಾಗಿ ವಕೀಲ ಜಹೀರ್ ತಲೆ, ಕಿವಿ, ಮೂಗು, ಹೊಟ್ಟೆ ಭಾಗಕ್ಕೆ ಗಂಭೀರ ಗಾಯವಾಗಿದ್ದಾವೆ.
ಜಮೀನು ವ್ಯಾಜ್ಯದ ಕೇಸ್ ವಿಚಾರಣೆ ಮುಗಿಸಿ ಕೋರ್ಟ್ ನಿಂದ ಹೊರಬರುತ್ತಿದ್ದಂತ ವೇಳೆಯಲ್ಲಿ ಅವರ ಮೇಲೆ ಏಕಾಏಕಿ ಹಲ್ಲೆಯಾಗಿದೆ. ಹಲ್ಲೆ ನಡೆಸಿದಂತ ನಂತ್ರ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಗಾಯಾಳು ವಕೀಲ ಜಹೀರ್ ಗೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವಿರೋಧ ಪಕ್ಷದ ನಾಯಕರ ವಿಶ್ವಾಸ ಪಡೆದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವರದಿ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ: DKS
BREAKING: 26/11 ದಾಳಿಯಲ್ಲಿ ಪಾಕ್ ಸೇನೆಯ ನಂಟು: ತಹವೂರ್ ರಾಣಾ ಬಹಿರಂಗ