ಬೆಂಗಳೂರು : ಎಐಸಿಸಿ ಒಬಿಸಿ ರಾಷ್ಟ್ರೀಯ ಘಟಕಕ್ಕೆ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಮಕದ ಬಗ್ಗೆ ನನಗೆ ಗೊತ್ತಿಲ್ಲ. ಎಐಸಿಸಿಯವರ ಜೊತೆಗೆ ಮಾತನಾಡುತ್ತೇನೆ. ಜುಲೈ 15 ರಂದು ಒಂದು ಸಭೆ ಮಾಡಿ ಅಂತಾ ನನಗೆ ಹೇಳಿದ್ದರು. ಒಬಿಸಿ ಅಧ್ಯಕ್ಷರು ಕರ್ನಾಟಕದಲ್ಲಿ ಸಭೆ ಮಾಡಿ ಅಂತಾ ಹೇಳಿದ್ದರು. ಸಂಚಾಲಕರನ್ನಾಗಿ ಮಾಡಿದ್ದಾರೋ, ಚೇರ್ಮನ್ ಮಾಡಿದ್ದಾರೋ ಗೊತ್ತಿಲ್ಲ. ಹೈಕಮಾಂಡ್ ಜೊತೆಗೆ ಮಾತನಾಡುತ್ತೇನೆ. ನಾನು ಕೇಳಿಲ್ಲ, ಅವರು ಘೋಷಣೆ ಮಾಡಿದ್ದಾರೆ, ಮಾತನಾಡುತ್ತೇನೆ. ರಾಷ್ಟ್ರ ರಾಜಕಾರಣ ಅಲ್ಲ, ೇನು ಅಂತಾ ಘೋಷಣೆ ಮಾಡಿದ್ದಾರೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಎಐಸಿಸಿ ಮಹತ್ವದ ಜವಾಬ್ದಾರಿ ನೀಡಿದೆ. ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.ನಾಲ್ವರು ಮಾಜಿ ಮುಖ್ಯಮಂತ್ರಿಗಳು, 24 ಸದಸ್ಯರ ಸಲಹಾ ಮಂಡಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ರಾಷ್ಟ್ರ ಮಟ್ಟದ ಹುದ್ದೆಯನ್ನೂ ನಿಭಾಯಿಸಲಿದ್ದಾರೆ.