ಹಾಸನ : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು,ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಡ್ಡಾಯ ಹೃದಯ ತಪಾಸಣೆಗೆ ಚಿಂತನೆ ನಡೆಸಲಾಗಿದೆ ಎಂದು ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಣ್ಣ ವಯಸ್ಸಿನವರು ಅಸುನೀಗಿರುವುದು ಬೇಸರದ ಸಂಗತಿ ಹೀಗಾಗಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕಡ್ಡಾಯ ಹೃದಯ ತಪಾಸಣೆಗೆ ಚಿಂತನೆ ನಡೆಸಲಾಗಿದೆ ಎಂದರು.
ಹೃದಯಾಘಾತದಿಂದ ಸಾವುಗಳ ಹೆಚ್ಚಳವಾಗಿದ್ದು, ಈ ಸಾವುಗಳನ್ನು ತಡೆಯುವ ಹಿನ್ನೆಲೆಯಲ್ಲಿ ಕಡ್ಡಾಯ ಹೃದಯ ತಪಾಸಣೆಗೆ ಚಿಂತನೆ ನಡೆಸಲಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಾಗಿದ್ದು, ಹೃದಯಾಘಾತದಿಂದಾಗುವ ಸಾವುಗಳನ್ನು ತಪ್ಪಿಸಬೇಕು, ಹೀಗಾಗಿ ರಾಜ್ಯದಲ್ಲಿ ಮಕ್ಕಳಿಂದ ಹಿಡಿದು ಪ್ರತಿಯೋಬ್ಬರಿಗೂ ಹೃದಯ ತಪಾಸಣೆ ಕಡ್ಡಾಯವಾಗಿ ಮಾಡಲು ಚಿಂತನೆ ನಡೆಸಲಾಗಿದೆ. ಹಾಸನ ಜಿಲ್ಲೆಯಲ್ಲಿ ಹೈಸ್ಕೂಲ್ ಮಕ್ಕಳಿಗೂ 15 ದಿನಗಳ ಒಳಗೆ ಹೃದಯ ತಪಾಸಣೆ ನಡೆಸಬೇಕು. ಶಾಲೆಗಳಲ್ಲಿ ಎಲ್ಲಾ ಮಕ್ಕಳಿಗೂ ಹೃದಯ ತಪಾಸಣೆ ಮಾಡಬೇಕು ಎಂದರು.