ಬೆಂಗಳೂರು: ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025ರ ಸಂಬಂಧ ಮನೆ ಮನೆಗೆ ಸ್ಟಿಕ್ಕರ್ ಅಂಟಿಸುವ ಕಾರ್ಯದಲ್ಲಿ ಕರ್ತವ್ಯಲೋಪ ಎಸಗಿರುವ ಇಬ್ಬರನ್ನು ಅಮಾನತ್ತುಗೊಳಿಸಲಾಗಿದೆ.
ಪಶ್ಚಿಮ ವಲಯದ ಮತ್ತಿಕೆರೆ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೌಲ್ಯಮಾಪಕರಾದ ರಾಮಾಂಜನೇಯಲು, ಆರ್. ಆರ್ ನಗರ ವಲಯ ಕೆಂಗೇರಿ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೌಲ್ಯಮಾಪಕರಾದ ಪ್ರವೀಣ್ ಕುಮಾರ್ ಸಿ.ಎನ್ ರವರನ್ನು ಪರಿಶಿಷ್ಟ ಜಾತಿ ಸಮೀಕ್ಷಾ ಕಾರ್ಯದ ಭಾಗವಾದ ಸ್ಟಿಕ್ಕರ್ ಅಂಟಿಸುವ ಕಾರ್ಯದಲ್ಲಿ ಕರ್ತವ್ಯಲೋಪದ ಮೇರೆಗೆ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.
ಆದೇಶದಲ್ಲಿ ಏನಿದೆ.?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪಶ್ಚಿಮ ವಲಯದಲ್ಲಿ ನ್ಯಾಯಮೂರ್ತಿ ಡಾ.ಹೆಚ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗ ಇವರ ಸೂಚನೆಯಂತೆ ಪರಿಶಿಷ್ಟ ಜಾತಿಗೆ ಸೇರಿದವರ ಪ್ರಾತಿನಿದ್ಯತೆ ಕುರಿತು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾತಿ ಸಮೀಕ್ಷೆ-2025ರ ಹಿನ್ನೆಲೆಯಲ್ಲಿ ಮನೆ ಮನೆಗೆ ತೆರಳಿ ಮನೆಯ ಗೋಡೆಗೆ ಅಥವಾ ಬಾಗಿಲಿಗೆ ಬಿತ್ತಿ ಪತ್ರವನ್ನು ಅಂಟಿಸಿ, BBMP SC Survey House Visit App ನಲ್ಲಿ ವರದಿ ಮಾಡಲು ಮಾನ್ಯ ವಿಶೇಷ ಆಯುಕ್ತರು (ಕಂದಾಯ) ರವರು ಮಾನ್ಯ ವಿಶೇಷ ಆಯುಕ್ತರು (ಕಂದಾಯ) ರವರ ಆರೆ ಸರ್ಕಾರಿ ಪತ್ರ ಸಂಖ್ಯೆ:DO No.1/SC Caste Survey/2025-26, ದಿನಾಂಕ: 20-06-2025, 24-06-2025, 25-06-2025 ಮತ್ತು 27-06-2025 ರಲ್ಲಿ ಸೂಚಿಸಿರುವಂತೆ ಆದೇಶ ಸಂಖ್ಯೆ: ಕ೦.ಅ(ಮ)/ಪಿಆರ್ 126/2025-26, ದಿನಾಂಕ:17-06-2025 ರಂತೆ ತಮ್ಮನ್ನು ಗಣತಿದಾರರನ್ನಾಗಿ ಪಶ್ಚಿಮ ವಲಯದ ಮತ್ತಿಕೆರೆ ಉಪ-ವಿಭಾಗದ ವಾರ್ಡ್ ಸಂಖ್ಯೆ: 45 ರಲ್ಲಿ ನೇಮಿಸಲಾಗಿತು.
ಮಾನ್ಯ ವಿಶೇಷ ಆಯುಕ್ತರು (ಕಂದಾಯ) ರವರ ಅರೆ ಸರ್ಕಾರಿ ಪತ್ರ ಸಂಖ್ಯೆ: DONo.1/SC Caste Survey/2025-26, : 20-06-2025, 24-06-2025, 25-06-2025 27-06-2025 S ಮನೆಗೆ ಭೇಟಿ ನೀಡಿ ಸರ್ವೇ ಕಾರ್ಯ ನಡೆಸಲು ಸೂಚಿಸಲಾಗಿದೆ. ಸಮೀಕ್ಷೆ ಕಾರ್ಯದಲ್ಲಿ ವಿಫಲರಾದ ಸಿಬ್ಬಂದಿಯವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ನಿರ್ದೇಶನ ನೀಡಿರುತ್ತಾರೆ.
ದಿನಾಂಕ: 04-07-2025 ರ ಸಂಜೆ: 6:00 ಗಂಟೆಯಿಂದ ಈ ಕೆಳಗೆ ಸಹಿ ಮಾಡಿದ ನಾನು, ಜಂಟಿ ಆಯುಕ್ತರು (ಪಶ್ಚಿಮ), ಸಹಾಯಕ ಕಂದಾಯ ಅಧಿಕಾರಿ (ಮತ್ತಿಕೆರೆ) (ಪ್ರಭಾರ) ಮತ್ತು ವಾರ್ಡ್ ನೋಡಲ್ ಅಧಿಕಾರಿ ಇವರುಗಳೊಂದಿಗೆ ವಾರ್ಡ್ ಸಂಖ್ಯೆ: 45 ರ (ಮತ್ತಿಕೆರೆ) ಉಪ-ವಿಭಾಗದ, ಮಲ್ಲೇಶ್ವರಂ ||ನೇ ಮುಖ್ಯರಸ್ತೆಯ ಕೌಡ್) ಆಸತ್ರೆಯ ಹತ್ತಿರ ಸಮೀಕ್ಷೆಯ ಪ್ರಗತಿಯ ಕುರಿತು. ಪರಿಶೀಲಿಸಲಾಗಿ ಅರ್ಪಾಟಮೆಂಟ್ ಗೇಟ್ ಗೆ ಬಿತ್ತಿ ಪತ್ರ ಅಂಟಿಸಿ ಅರ್ಪಾಟಮೆಂಟ್‌ನ ಇತರೆ ಮನೆಗಳ ಸಮೀಕ್ಷೆ ಮಾಡದಿರುವುದು ಕಂಡುಬಂದಿರುತ್ತದೆ. ಸದರಿ ಪ್ರದೇಶದಲ್ಲಿ ವಾಸವಿರುವ ಕುಟುಂಬಸ್ಥರನ್ನು ವಿಚಾರಿಸಲಾಗಿ ಸಮೀಕ್ಷೆ ಮಾಡಲು ಬಿಬಿಎಂಪಿಯಿಂದ ಯಾವುದೇ ಸಿಬ್ಬಂದಿ ಬಂದಿರುವುದಿಲ್ಲವೆಂದು ತಿಳಿಸಿರುತ್ತಾರೆ.
ಮೇಲಾಧಿಕಾರಿಗಳು. ಲಿಖಿತವಾಗಿ ಸೂಚಿಸಿರುವಂತೆ ಸಮೀಕ್ಷೆಯ ಕರ್ತವ್ಯವನ್ನು ನಿರ್ವಹಿಸದೆ ಬೇಜಬ್ದಾರಿತನದಿಂದ ಸಮೀಕ್ಷೆ ಮಾಡಿರುವುದನ್ನು ಗಮನಿಸಲಾಗಿದೆ. ಸರ್ಕಾರದ ಮಹತ್ವಕಾಂಕ್ಷೆಯ ಕಾರ್ಯವನ್ನು ನಿರ್ವಹಿಸುವಲ್ಲಿ ವಿಫಲರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಸದರಿ ನೌಕರರು ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಾವಳಿ 1966ರ ನಿಯಮ-3(1) ಮತ್ತು (ii) ರನ್ನು ಉಲ್ಲಂಘಿಸಿರುವುದರಿಂದ ಕರ್ನಾಟಕ ಸರ್ಕಾರಿ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957 ನಿಯಮ 10ರನ್ವಯ ಕ್ರಮ ಜರುಗಿಸುವುದು ಸೂಕ್ತವೆಂದು ಅಭಿಪ್ರಾಯಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಶ್ರೀ ರಾಮಾಂಜನೆಯಲು, ಮೌಲ್ಯಮಾಪಕರು ವಾರ್ಡ್-45, (ಮತ್ತಿಕೆರೆ) ಉಪ-ವಿಭಾಗ ಇವರು ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ಕಾರ್ಯದಲ್ಲಿ ಕರ್ತವ್ಯಲೋಪವೆಸಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರಿ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957 ನಿಯಮ ರನ್ವಯ ಇಲಾಖಾ ವಿಚಾರಣಾ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದೆ.
ನೌಕರರು ಕರ್ನಾಟಕ ಸರ್ಕಾರಿ ಸೇವಾ ನಿಯಮ 1958 ರನ್ವಯ ಜೀವನಾಧರ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಮತ್ತು ಪೂರ್ವನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡಬಾರದೆಂದು ಸೂಚಿಸಿದೆ.
BREAKING: ರಾಜ್ಯದಲ್ಲಿ ಹೃದಯಾಘಾತದಿಂದ ಸಾವು ಪ್ರಕರಣ: ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಿದ ಟೆಕ್ನಿಕಲ್ ಕಮಿಟಿ