ಬೆಂಗಳೂರು: ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಆರ್‌ಜೆಐಎಲ್) ಚಿಕ್ಕಮಗಳೂರು ನಗರ ಮತ್ತು ಹೆದ್ದಾರಿಯಲ್ಲಿ (ಬೆಂಗಳೂರಿನಿಂದ ಚಿಕ್ಕಮಗಳೂರು) ಮೊಬೈಲ್ ನೆಟ್ವರ್ಕ್ ಕಾರ್ಯಕ್ಷಮತೆಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ (ಟ್ರಾಯ್) ಇತ್ತೀಚಿನ ಇಂಡಿಪೆಂಡೆಂಟ್ ಡ್ರೈವ್ ಟೆಸ್ಟ್ (ಐಡಿಟಿ) ವರದಿ ತಿಳಿಸಿದೆ.
ಈ ಪರೀಕ್ಷೆಗಳು ಟ್ರಾಯ್‌ನ ಆವರ್ತಕ ಗುಣಮಟ್ಟದ ಸೇವೆ (ಕ್ಯೂಒಎಸ್) ಲೆಕ್ಕಪರಿಶೋಧನೆಯ ಭಾಗವಾಗಿದೆ. 2025ರ ಮೇ 24ರಿಂದ 28ರವರೆಗೆ ಚಿಕ್ಕಮಗಳೂರು ನಗರ ಮತ್ತು ಹೆದ್ದಾರಿಯಲ್ಲಿ 218.6 ಕಿ.ಮೀ ಡ್ರೈವ್ ಟೆಸ್ಟ್ ಹಾಗೂ 3.4 ಕಿ.ಮೀ ನಡಿಗೆ ಪರೀಕ್ಷೆ ಸೇರಿದಂತೆ ಒಟ್ಟು 222 ಕಿ.ಮೀ ದೂರವನ್ನು ಕ್ರಮಿಸಲಾಗಿತ್ತು.
ಚಿಕ್ಕಮಗಳೂರು ನಗರ ಮತ್ತು ಹೆದ್ದಾರಿಯಲ್ಲಿ (ಬೆಂಗಳೂರಿನಿಂದ ಚಿಕ್ಕಮಗಳೂರಿನವರೆಗೆ) ಜಿಯೋದ ಬಲವಾದ ಪ್ರದರ್ಶನವು ಅದರ ಅಗ್ರಸ್ಥಾನವನ್ನು ಪ್ರತಿಬಿಂಬಿಸುತ್ತದೆ. ಟ್ರಾಯ್ ಪರೀಕ್ಷಿಸಿದ ಎಂಟು ಪರವಾನಗಿ ಪಡೆದ ಸೇವಾ ಪ್ರದೇಶಗಳು (ಎಲ್ಎಸ್ಎ) ಮತ್ತು 13 ನಗರಗಳು, ಹೆದ್ದಾರಿಗಳು, ರೈಲ್ವೆ ಮತ್ತು ಕರಾವಳಿ ಮಾರ್ಗಗಳಲ್ಲಿ, ಜಿಯೋ ನಿರಂತರವಾಗಿ ಅಗ್ರಸ್ಥಾನದಲ್ಲಿದೆ. ಐದು ಪ್ರಮುಖ ಧ್ವನಿ ಗುಣಮಟ್ಟ (ವಾಯ್ಸ್ ಕಾಲ್ ಕ್ಲಾರಿಟಿ) ಸೂಚಕಗಳಲ್ಲಿ ಮೂರರಲ್ಲಿ ಪ್ರತಿಸ್ಪರ್ಧಿಗಳನ್ನು ಜಿಯೋ ಮೀರಿಸಿದೆ ಮತ್ತು ಮೌಲ್ಯಮಾಪನ ಮಾಡಿದ ಎಲ್ಲಾ ಪ್ರದೇಶಗಳಲ್ಲಿ ಡೇಟಾ ಕಾರ್ಯಕ್ಷಮತೆಯಲ್ಲಿ ಉತ್ತಮ ಸಾಧನೆ ಮಾಡಿದೆ.
ಚಿಕ್ಕಮಗಳೂರು ನಗರ ಮತ್ತು ಹೆದ್ದಾರಿಯಲ್ಲಿ (ಬೆಂಗಳೂರಿನಿಂದ ಚಿಕ್ಕಮಗಳೂರುವರೆಗೆ) ಜಿಯೋ 159.77 ಎಂಬಿಪಿಎಸ್ ಸರಾಸರಿ ಡೌನ್ಲೋಡ್ ವೇಗವನ್ನು ನೀಡಿದೆ. ಇದು ಪ್ರತಿಸ್ಪರ್ಧಿಗಳ ಡೌನ್ಲೋಡ್ ವೇಗವನ್ನು ಮೀರಿಸಿದೆ. ನಿರ್ಣಾಯಕ ಹಾಟ್‌ಸ್ಪಾಟ್‌ಗಳಲ್ಲಿ, ಅದರ 5ಜಿ ನೆಟ್ವರ್ಕ್ 137.86 ಎಂಬಿಪಿಎಸ್ ವೇಗವನ್ನು ಸಾಧಿಸಿತು. ಸುಗಮ ವೀಡಿಯೊ ಸ್ಟ್ರೀಮಿಂಗ್, ಹೈಸ್ಪೀಡ್ ಡೌನ್ಲೋಡ್‌ಗಳು ಮತ್ತು ವಿಳಂಬವಿಲ್ಲದ ವೀಡಿಯೊ ಕಾನ್ಫರೆನ್ಸಿಂಗ್ ಅನ್ನು ಖಚಿತಪಡಿಸಿತು. ಜಿಯೋ 15.05 ಸರಾಸರಿ ಅಪ್ಲೋಡ್ ವೇಗವನ್ನು ದಾಖಲಿಸಿದೆ
ಐದು ಪ್ರಮುಖ ಧ್ವನಿ (ವಾಯ್ಸ್) ನಿಯತಾಂಕಗಳಲ್ಲಿ ಮೂರರಲ್ಲಿ ಸ್ಪರ್ಧೆಗೆ ಹೋಲಿಸಿದರೆ ಜಿಯೋ ಎದ್ದು ಕಾಣುತ್ತದೆ. ಈ ಮಾಪನಗಳು ಜಿಯೋದ ವಿಶ್ವಾಸಾರ್ಹತೆಯನ್ನು ಒತ್ತಿಹೇಳುತ್ತವೆ, ಚಿಕ್ಕಮಗಳೂರು ನಗರ ಕೇಂದ್ರಗಳಲ್ಲಿ ಅಥವಾ ಬೆಂಗಳೂರಿನಿಂದ ಚಿಕ್ಕಮಗಳೂರು ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಸ್ಪಷ್ಟ, ತಡೆರಹಿತ ಧ್ವನಿ ಕರೆಗಳನ್ನು (ವಾಯ್ಸ್ ಕಾಲ್) ನೀಡುತ್ತವೆ.
ನಗರ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಹೆಚ್ಚಿನ ವೇಗದ, ಉತ್ತಮ ಗುಣಮಟ್ಟದ ಸಂಪರ್ಕವನ್ನು ಒದಗಿಸುವ ಮೂಲಕ ಕರ್ನಾಟಕದಲ್ಲಿ ಡಿಜಿಟಲ್ ವಿಭಜನೆಯನ್ನು ನಿವಾರಿಸುವಲ್ಲಿ ಜಿಯೋ ಪಾತ್ರವನ್ನು ಟ್ರಾಯ್ ವರದಿ ಒತ್ತಿಹೇಳುತ್ತದೆ. ಈ ಕಾರ್ಯಕ್ಷಮತೆಯು ಭಾರತದ ವಿಶಾಲ ಡಿಜಿಟಲ್ ಮಹತ್ವಾಕಾಂಕ್ಷೆಗಳನ್ನು ಬೆಂಬಲಿಸುತ್ತದೆ ಮತ್ತು ಅತ್ಯಾಧುನಿಕ ನೆಟ್ವರ್ಕ್ ಅನುಭವಗಳೊಂದಿಗೆ ಗ್ರಾಹಕರನ್ನು ಸಬಲೀಕರಣಗೊಳಿಸುವ ಜಿಯೋದ ಬದ್ಧತೆಯನ್ನು ಬಲಪಡಿಸುತ್ತದೆ.