ಹಾಸನ: ಜಿಲ್ಲೆಯಲ್ಲಿ ಹೃದಯಾಘಾತಗಳ ಪ್ರಕರಣಗಳು ಮುಂದುವರೆದಿವೆ. ಇಂದು ಮತ್ತೊಬ್ಬ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಹಾಸನ ತಾಲ್ಲೂಕಿನ ಮುಟ್ನಳ್ಳಿ ಗ್ರಾಮ ಸಣ್ಣಪ್ಪಶೆಟ್ಟಿ(52) ಎಂಬುವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಎದೆ ನೋವಿನಿಂದ ಕುಸಿದು ಬಿದ್ದು ಸಣ್ಣಪ್ಪ ಶೆಟ್ಟಿ ಮನೆ ಮುಂದೆಯೇ ಸಾವನ್ನಪ್ಪಿದ್ದಾರೆ.
ರೈತ ಸಣ್ಣಪ್ಪಶೆಟ್ಟಿ ಎದೆ ನೋವು ಅಂತ ಮನೆಯವರಿಗೆ ತಿಳಿಸಿದ್ದಾರೆ. ಕೂಡಲೇ 108ಗೆ ಕರೆ ಮಾಡಿ ಸಹೋದರ ತಿಳಿಸಿದ್ದಾರೆ. ಆಂಬುಲೆನ್ಸ್ ಮನೆ ಬಳಿ ಬರುತ್ತಿದ್ದಂತೆ ಸಣ್ಣಪ್ಪ ಶೆಟ್ಟಿ ಮೃತಪಟ್ಟಿದ್ದಾರೆ. ಹೀಗಾಗಿ ಹಾಸನ ಜಿಲ್ಲೆಯಲ್ಲಿ ಒಂದೂವರೆ ತಿಂಗಳಿನಲ್ಲಿ 27 ಮಂದಿ ಸಾವನ್ನಪ್ಪಿದಂತೆ ಆಗಿದೆ.
ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಿಭಾಗದ ಈ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರ ವಿಸ್ತರಣೆ